Home Bibles ಆದಿಕಾಂಡ 27:20 · ಕನ್ನಡ ಬೈಬಲ್
ಆದಿಕಾಂಡ 27:20 · ಕನ್ನಡ ಬೈಬಲ್

ಇಸಾಕನು ತನ್ನ ಮಗನಿಗೆ--ನನ್ನ ಮಗನೇ, ಇಷ್ಟು ಬೇಗ ಅದು ನಿನಗೆ ಹೇಗೆ ಸಿಕ್ಕಿತು ಅಂದನು. ಅವನು--ನಿನ್ನ ದೇವರಾದ ಕರ್ತನು ನನ್ನೆದುರಿಗೆ ಅದು ಬರುವಂತೆ ಮಾಡಿದನು ಅಂದನು.

Cross references

ಆದಿಕಾಂಡ 24:12

ಆಗ ಅವನು--ನನ್ನ ಯಜಮಾನನಾದ ಅಬ್ರಹಾ ಮನ ದೇವರಾಗಿರುವ ಕರ್ತನೇ, ಈಹೊತ್ತು ನನಗೆ ತ್ವರೆಯಾಗಿ ಕಾರ್ಯಕೈಗೂಡುವಂತೆ ಮಾಡಿ ನನ್ನ ಯಜಮಾನನಾದ ಅಬ್ರಹಾಮನಿಗೆ ದಯೆ ತೋರಿಸು.

ನಿರ್ಗಮಕಾಂಡ 20:7

ನಿನ್ನ ದೇವರಾದ ಕರ್ತನ ಹೆಸರನ್ನು ವ್ಯರ್ಥವಾಗಿ ಎತ್ತಬಾರದು. ಕರ್ತನು ತನ್ನ ಹೆಸರನ್ನು ವ್ಯರ್ಥವಾಗಿ ಎತ್ತುವವನನ್ನು ನಿರ್ದೋಷಿ ಯೆಂದು ಎಣಿಸುವದಿಲ್ಲ.

ಯೋಬ 13:7

ದೇವರಿಗೋಸ್ಕರ ನೀವು ದುಷ್ಟತನದಿಂದ ಮಾತನಾಡುವಿರೋ? ಆತನಿಗೋ ಸ್ಕರ ಮೋಸದ ನುಡಿಗಳನ್ನಾಡುವಿರೋ?

Interlinear

Choose Theme