ಅಲ್ಲಿಂದ ಅವನು ಹೊರಟುಹೋಗಿ ಇನ್ನೊಂದು ಬಾವಿಯನ್ನು ಅಗಿದಾಗ ಅದಕ್ಕಾಗಿ ಅವರು ಜಗಳವಾಡಲಿಲ್ಲ. ಅದಕ್ಕೆ ಅವನು--ಈಗ ಕರ್ತನು ನಮಗೆ ಸ್ಥಳವನ್ನು ಮಾಡಿದ್ದಾನೆ; ನಾವು ಈ ದೇಶದಲ್ಲಿ ಅಭಿವೃದ್ಧಿ ಯಾಗುವೆವು ಎಂದು ಹೇಳಿ ಅದಕ್ಕೆ ರೆಹೋಬೋತ್ ಎಂದು ಹೆಸರಿಟ್ಟನು.
Cross references
ನಾನು ನಿನ್ನನ್ನು ಅತ್ಯಧಿಕವಾಗಿ ವೃದ್ಧಿ ಯಾಗಮಾಡಿ ನಿನ್ನಿಂದ ಜನಾಂಗಗಳಾಗ ಮಾಡುವೆನು; ನಿನ್ನಿಂದ ಅರಸರು ಹುಟ್ಟುವರು.
ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಿ ನೀನು ಜನಸಮುದಾಯವಾಗುವಂತೆ ನಿನ್ನನ್ನು ಅಭಿವೃದ್ಧಿ ಮಾಡಿ ಹೆಚ್ಚಿಸಲಿ,
ಅವನು ತನ್ನ ಎರಡನೆಯ ಮಗನಿಗೆ ಎಫ್ರಾಯಾಮ್ ಎಂದು ಹೆಸರಿಟ್ಟನು: ಯಾಕಂದರೆ ನಾನು ಬಾಧೆಯನ್ನನುಭವಿಸಿದ ದೇಶದಲ್ಲಿ ಫಲಭರಿತ ನಾಗುವಂತೆ ದೇವರು ಮಾಡಿದ್ದಾನೆ ಅಂದನು.
ಆದರೆ ಇಸ್ರಾಯೇಲನ ಮಕ್ಕಳು ಅತ್ಯಧಿಕವಾಗಿ ಅಭಿವೃದ್ಧಿ ಹೊಂದಿ ಹೆಚ್ಚಿ ಹರಡಿಕೊಂಡು ಬಲಗೊಂಡರು. ಆ ದೇಶವು ಅವರಿಂದ ತುಂಬಿತು.
ನನ್ನ ನೀತಿಯಾದ ಓ ದೇವರೇ, ನಾನು ಮೊರೆಯಿಡಲು ನನಗೆ ಕಿವಿಗೊಡು, ಇಕ್ಕಟ್ಟಿನಲ್ಲಿ ನನಗೆ ವಿಶಾಲಮಾಡಿದಿ. ನನ್ನ ಮೇಲೆ ಕರುಣೆಯಿಟ್ಟು ನನ್ನ ಪ್ರಾರ್ಥನೆಯನ್ನು ಕೇಳು.
ಆತನು ನನ್ನನ್ನು ವಿಶಾಲಸ್ಥಳಕ್ಕೆ ತಂದು ನನ್ನನ್ನು ತಪ್ಪಿಸಿಬಿಟ್ಟನು. ಯಾಕಂದರೆ ಆತನು ನನ್ನಲ್ಲಿ ಸಂತೋಷಪಟ್ಟನು.
ಇಕ್ಕಟ್ಟಿನೊಳಗಿಂದ ಕರ್ತನಿಗೆ ಕೂಗಿದೆನು; ಕರ್ತನು ಉತ್ತರ ಕೊಟ್ಟು ನನ್ನನ್ನು ವಿಶಾಲ ಸ್ಥಳದಲ್ಲಿ ನಿಲ್ಲಿಸಿ ದನು.
ನಿನ್ನ ಆಜ್ಞೆಗಳ ಮಾರ್ಗದಲ್ಲಿ ಓಡುವೆನು; ನೀನು ನನ್ನ ಹೃದಯವನ್ನು ವಿಶಾಲಮಾಡುತ್ತೀ.