Home Bibles ಆದಿಕಾಂಡ 25:7 · ಕನ್ನಡ ಬೈಬಲ್
ಆದಿಕಾಂಡ 25:7 · ಕನ್ನಡ ಬೈಬಲ್

ಅಬ್ರಹಾಮನು ಜೀವಿಸಿದ ದಿವಸಗಳು ಒಟ್ಟು ನೂರೆಪ್ಪತ್ತೈದು ವರುಷಗಳು. ಅಬ್ರಹಾಮನು ಪ್ರಾಣ ಬಿಟ್ಟನು.

Cross references

ಆದಿಕಾಂಡ 12:4

ಹೀಗೆ ಕರ್ತನು ತನಗೆ ಹೇಳಿದ ಪ್ರಕಾರ ಅಬ್ರಾಮನು ಹೊರಟುಹೋದನು. ಲೋಟನೂ ಅವನ ಸಂಗಡ ಹೋದನು. ಅಬ್ರಾಮನು ಹಾರಾನಿ ನಿಂದ ಹೊರಟಾಗ ಎಪ್ಪತ್ತೈದು ವರುಷದವನಾಗಿದ್ದನು.

ಆದಿಕಾಂಡ 35:28

ಆಗ ಇಸಾಕನ ದಿನಗಳು ನೂರ ಎಂಭತ್ತು ವರುಷಗಳಾಗಿದ್ದವು.ಇಸಾಕನು ಮುದುಕನಾಗಿಯೂ ತುಂಬಾ ಆಯುಷ್ಯದವನಾಗಿಯೂ ಸತ್ತು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು. ಅವನ ಕುಮಾರರಾದ ಏಸಾವನೂ ಯಾಕೋಬನೂ ಅವನನ್ನು ಹೂಣಿಟ್ಟರು.

ಆದಿಕಾಂಡ 35:29

ಇಸಾಕನು ಮುದುಕನಾಗಿಯೂ ತುಂಬಾ ಆಯುಷ್ಯದವನಾಗಿಯೂ ಸತ್ತು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು. ಅವನ ಕುಮಾರರಾದ ಏಸಾವನೂ ಯಾಕೋಬನೂ ಅವನನ್ನು ಹೂಣಿಟ್ಟರು.

ಆದಿಕಾಂಡ 47:28

ಇದಲ್ಲದೆ ಯಾಕೋಬನು ಐಗುಪ್ತದೇಶದಲ್ಲಿ ಹದಿನೇಳು ವರುಷ ಬದುಕಿದನು. ಯಾಕೋಬನು ಬದುಕಿದ ದಿನಗಳು ನೂರ ನಾಲ್ವತ್ತೇಳು ವರುಷಗಳು.

ಆದಿಕಾಂಡ 50:26

ಯೋಸೇಫನು ನೂರ ಹತ್ತು ವರುಷದವನಾಗಿ ಸತ್ತನು. ಅವರು ಅವನಿಗೆ ಸುಗಂಧದ್ರವ್ಯವನ್ನು ಹಾಕಿ ಐಗುಪ್ತದಲ್ಲಿ ಪೆಟ್ಟಿಗೆ ಯೊಳೆಗೆ ಇಟ್ಟರು.

Interlinear

Choose Theme