ಆಗ ರೆಬೆಕ್ಕಳು ಎದ್ದು ಆಕೆಯೂ ಆಕೆಯ ದಾಸಿಯರೂ ಒಂಟೆಗಳ ಮೇಲೆ ಹತ್ತಿ ಆ ಮನುಷ್ಯನ ಹಿಂದೆ ಹೋದರು. ಆ ಸೇವಕನು ರೆಬೆಕ್ಕಳನ್ನು ಕರಕೊಂಡು ಹೋದನು.
Cross references
ಆದದರಿಂದ ಮನುಷ್ಯನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರು ಒಂದೇ ಶರೀರ ವಾಗಿರುವರು.ಇದಲ್ಲದೆ ಆ ಮನುಷ್ಯನು ಅವನ ಹೆಂಡತಿಯು ಇಬ್ಬರು ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ.
ಆದರೆ ರಾಹೇಲಳು ವಿಗ್ರಹಗಳನ್ನು ತಕ್ಕೊಂಡು ಒಂಟೆಯ ಸಾಮಗ್ರಿಯಲ್ಲಿಟ್ಟು ಅದರ ಮೇಲೆ ಕೂತುಕೊಂಡಳು. ಲಾಬಾನನು ಗುಡಾರವನ್ನೆಲ್ಲಾ ಹುಡುಕಿದಾಗ್ಯೂ ಅವನು ಅವುಗಳನ್ನು ಕಂಡುಕೊಳ್ಳಲಿಲ್ಲ.
ಆಗ ದಾವೀದನು ಅವರನ್ನು ಬೆಳಗಿನ ಜಾವದಿಂದ ಮಾರ ನೆಯ ದಿವಸದ ಸಾಯಂಕಾಲದವರೆಗೂ ಸಂಹರಿಸುತ್ತಾ ಇದ್ದನು. ಆದರೆ ಅವರಲ್ಲಿ ಒಂಟೆಗಳ ಮೇಲೆ ಏರಿ ಓಡಿಹೋದ ನಾನೂರು ಮಂದಿ ಯೌವನಸ್ಥರ ಹೊರತು ಒಬ್ಬನಾದರೂ ತಪ್ಪಿಸಿಕೊಂಡದ್ದಿಲ್ಲ.
ಅವನು ಅರಸನಾದ ಅಹಷ್ವೇರೋಷನ ಹೆಸರಿನಲ್ಲಿ ಬರೆದು ಅರಸನ ಉಂಗುರದಿಂದ ಮುದ್ರೆ ಹಾಕಿ ಪತ್ರಗಳನ್ನು, ಕುದುರೆಗಳನ್ನು, ಸವಾರಿ ಹತ್ತಿ ಕೊಂಡಿದ್ದ ಅಂಚೆಯವರ ಮೂಲಕ ಹೇಸರ ಕತ್ತೆಗಳ ಮೇಲೆಯೂ ಒಂಟೆಗಳ ಮೇಲೆಯೂ ವೇಗವಾಗಿ ಓಡುವ ಎಳೇ ಒಂಟೆಗಳ ಮೇಲೆಯೂ ಕಳುಹಿಸಿದನು.
ಅಂಚೆಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಓಡಿಸಲ್ಪಟ್ಟ ಕಾರಣ ಹೇಸರ ಕತ್ತೆಗಳ ಮೇಲೆಯೂ ವೇಗವಾದ ಒಂಟೆಗಳ ಮೇಲೆಯೂ ಹೊರಟರು. ಈ ಆಜ್ಞೆಯು ಶೂಷನಿನ ಅರಮನೆಯಲ್ಲಿ ಕೊಡಲ್ಪಟ್ಟಿತು.
ಓ ಮಗಳೇ, ಕಿವಿಗೊಟ್ಟು ಕೇಳಿ ಆಲೋಚಿಸು, ನಿನ್ನ ಸ್ವಂತ ಜನರನ್ನು ನಿನ್ನ ತಂದೆಯ ಮನೆಯನ್ನು ಮರೆತುಬಿಡು.