ಅವನೂ ಅವನ ಸಂಗಡ ಇದ್ದ ಮನುಷ್ಯರೂ ಊಟ ಮುಗಿಸಿ ರಾತ್ರಿ ಯೆಲ್ಲಾ ಅಲ್ಲಿ ಇದ್ದರು. ಬೆಳಿಗ್ಗೆ ಎದ್ದ ಮೇಲೆ ಅವನು--ನನ್ನನ್ನು ನನ್ನ ಯಜಮಾನನ ಬಳಿಗೆ ಕಳುಹಿಸಿರಿ ಅಂದನು.
Cross references
ಆಗ ಅವನು ಅವರಿಗೆ--ನನ್ನನ್ನು ತಡೆಯಬೇಡಿರಿ; ಕರ್ತನು ನನ್ನ ಮಾರ್ಗವನ್ನು ಸಫಲಮಾಡಿದ್ದಾನಲ್ಲಾ. ನನ್ನ ಯಜಮಾನನ ಬಳಿಗೆ ಹೋಗುವ ಹಾಗೆ ನನ್ನನ್ನು ಕಳುಹಿಸಿರಿ ಅಂದನು.
ಆಗ ಅವರು ತಮ್ಮ ಸಹೋದರಿಯಾದ ರೆಬೆಕ್ಕಳನ್ನೂ ಅವಳ ದಾದಿಯನ್ನೂ ಅಬ್ರಹಾಮನ ಸೇವಕನನ್ನೂ ಅವನ ಜೊತೆಯಲ್ಲಿದ್ದ ಮನುಷ್ಯರನ್ನೂ ಕಳುಹಿಸಿದರು.
ಇಸಾಕನು ಯಾಕೋಬನನ್ನು ಕಳುಹಿಸಿದಾಗ ಅವನು ಪದ್ದನ್ ಅರಾಮಿನಲ್ಲಿದ್ದ ಯಾಕೋಬನ ಮತ್ತು ಏಸಾವನ ತಾಯಿಯಾದ ರೆಬೆಕ್ಕಳ ಸಹೋದರನಾದ ಅರಾಮಿನವನಾದ ಬೆತೊ ವೇಲನ ಮಗನಾಗಿದ್ದ ಲಾಬಾನನ ಬಳಿಗೆ ಹೋದನು.
ಅವನು ಅವರಿಗೆ--ಮಾರ್ಗದಲ್ಲಿ ಜಗಳವಾಡಬೇಡಿರಿ ಎಂದು ಅವರಿಗೆ ಹೇಳಿದ ಮೇಲೆ ಅವರು ಹೋದರು.
ಆಗ ಚಾದೋಕನ ಮಗನಾದ ಅಹೀಮಾಚನುಕರ್ತನು ರಾಜನ ಶತ್ರುಗಳ ಮೇಲೆ ಹೇಗೆ ನ್ಯಾಯ ತೀರಿಸಿದ್ದಾನೆಂಬ ವರ್ತಮಾನಗಳನ್ನು ಅರಸನಿಗೆ ತಿಳಿ ಸುವ ಹಾಗೆ ನಾನು ಓಡಿಹೋಗುವದಕ್ಕೆ ಅಪ್ಪಣೆಯಾಗ ಬೇಕು ಅಂದನು.
ಅದಕ್ಕೆ ಅರಸನು--ಅವನು ಸಹ ವರ್ತಮಾನ ತಕ್ಕೊಂಡು ಬರುತ್ತಾನೆ ಅಂದನು. ಕಾವಲುಗಾರನುಮೊದಲನೆಯವನ ಓಟವು ಚಾದೋಕನ ಮಗನಾದ ಅಹೀಮಾಚನ ಓಟದ ಹಾಗೆ ಇರುವದೆಂದು ನನಗೆ ಕಾಣುತ್ತದೆ ಅಂದನು. ಅದಕ್ಕೆ ಅರಸನು--ಅವನು ಒಳ್ಳೆಯವನು, ಒಳ್ಳೇ ವರ್ತಮಾನವನ್ನು ತರುತ್ತಾನೆ ಅಂದನು.
ತನ್ನ ಕೆಲಸದಲ್ಲಿ ಶ್ರದ್ಧೆಯುಳ್ಳವನನ್ನು ನೀನು ನೋಡಿ ದ್ದೀಯಾ? ಅವನು ನೀಚರ ಮುಂದೆ ಅಲ್ಲ, ಅರಸರ ಮುಂದೆಯೇ ನಿಲ್ಲುವನು.
ಹಿಂದಿನ ದಿವಸಗಳು ಈ ದಿವಸಗಳಿಗಿಂತ ಮೇಲಾ ಗಿರುವದಕ್ಕಾಗಿ ಕಾರಣವೇನು ಎಂದು ನೀನು ಹೇಳ ಬೇಡ. ಈ ವಿಷಯದಲ್ಲಿ ನೀನು ಜ್ಞಾನದಿಂದ ವಿಚಾರಿ ಸುವದಿಲ್ಲ.
ಆಗ ದೆವ್ವಗಳು ಬಿಟ್ಟು ಹೋಗಿದ್ದ ಆ ಮನುಷ್ಯನು ತಾನು ಆತನ ಜೊತೆಯಲ್ಲಿ ಇರುವೆನೆಂದು ಆತನನ್ನು ಬೇಡಿಕೊಂಡನು. ಆದರೆ ಯೇಸು ಅವನನ್ನು ಕಳುಹಿಸಿಬಿಟ್ಟು ಅವನಿಗೆ--