ಅವನು ದೇಶದ ಜನರು ಕೇಳುವಂತೆ ಎಫ್ರೋನನಿಗೆ ಹೇಳಿದ್ದೇನಂದರೆ--ನೀನು ನನಗೆ ಕೊಡಬೇಕೆಂದಿದ್ದರೆ ನನ್ನ ಮಾತನ್ನು ಕೇಳು; ನಾನು ಹೊಲದ ಕ್ರಯವನ್ನು ಕೊಡುತ್ತೇನೆ; ಅದನ್ನು ನನ್ನಿಂದ ತಕ್ಕೋ, ಆಗ ನನ್ನ ಹೆಂಡತಿಯ ಶವವನ್ನು ಅಲ್ಲಿ ಹೂಣಿಡುವೆನು ಅಂದನು.
Cross references
ಅದಕ್ಕೆ ಅಬ್ರಾಮನು ಸೊದೋ ಮಿನ ಅರಸನಿಗೆ--ನನ್ನ ಕೈಯನ್ನು ಆಕಾಶವನ್ನು ಭೂಮಿಯನ್ನು ಹೊಂದಿರುವ ಮಹೋನ್ನತ ದೇವರಾ ಗಿರುವ ಕರ್ತನ ಕಡೆಗೆ ಎತ್ತಿದ್ದೇನೆ;
ಅವನು ತನ್ನ ಗುಡಾರಗಳನ್ನು ಹಾಕಿದ ಭೂಮಿಯನ್ನು ಶೆಕೆಮಿನ ತಂದೆಯಾದ ಹಮೋರನ ಮಕ್ಕಳ ಕೈಯಿಂದ ನೂರು ನಾಣ್ಯಗಳಿಗೆ ಕೊಂಡು ಕೊಂಡನು.ಅಲ್ಲಿ ಯಜ್ಞವೇದಿಯನ್ನು ಕಟ್ಟಿಸಿ ಅದಕ್ಕೆ ಏಲೆಲೋಹೇ ಇಸ್ರಾಯೇಲ್ ಎಂದು ಹೆಸರಿಟ್ಟನು.
ಆದರೆ ಅರಸನು ಅರೌನನಿಗೆ--ಹಾಗಲ್ಲ; ನಿಶ್ಚಯವಾಗಿ ನಿನ್ನಿಂದ ಕ್ರಯಕ್ಕೆ ಕೊಂಡುಕೊಳ್ಳುತ್ತೇನೆ; ಉಚಿತವಾಗಿ ಬಂದ ದಹನ ಬಲಿಗಳನ್ನು ನನ್ನ ದೇವರಾದ ಕರ್ತನಿಗೆ ಅರ್ಪಿ ಸೆನು ಅಂದನು. ಹೀಗೆ ದಾವೀದನು ಆ ಕಣವನ್ನೂ ಎತ್ತುಗಳನ್ನೂ ಐವತ್ತು ಶೇಕೆಲ್ ಬೆಳ್ಳಿಗೆ ಕೊಂಡು ಕೊಂಡನು.ಆಗ ದಾವೀದನು ಕರ್ತನಿಗೆ ಅಲ್ಲಿ ಬಲಿಪೀಠವನ್ನು ಕಟ್ಟಿಸಿ ದಹನಬಲಿಗಳನ್ನೂ ಸಮಾ ಧಾನದಬಲಿಗಳನ್ನೂ ಅರ್ಪಿಸಿದನು. ಹೀಗೆ ಕರ್ತನು ದೇಶಕ್ಕೋಸ್ಕರ ಬಿನ್ನಹವನ್ನು ಕೇಳಿದ್ದರಿಂದ ಇಸ್ರಾ ಯೇಲಿನ ಕಡೆಯಿಂದ ಆ ಬಾಧೆಯು ನಿಂತಿತು.
ನೀವು ಹಾಗೆಯೇ ಕೆಲಸಮಾಡಿ ಬಲಹೀನ ರಿಗೆ ಹೀಗೆ ಆಧಾರವಾಗಿರತಕ್ಕದ್ದೆಂದೂ ಮತ್ತು--ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ ವೆಂದು ಕರ್ತನಾದ ಯೇಸು ಹೇಳಿದ ಮಾತುಗಳನ್ನು ನೀವು ಜ್ಞಾಪಕ ಮಾಡಿಕೊಳ್ಳಬೇಕೆಂದೂ ಇವೆಲ್ಲವು ಗಳನ್ನು ನಾನು ನಿಮಗೆ ತಿಳಿಯಪಡಿಸಿದ್ದೇನೆ.
ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ಸಾಲವೂ ನಿಮಗೆ ಇರ ಬಾರದು. ಮತ್ತೊಬ್ಬರನ್ನು ಪ್ರೀತಿಸುವವನು ನ್ಯಾಯಪ್ರಮಾಣವನ್ನೆಲ್ಲಾ ನೆರವೇರಿಸಿದ್ದಾನೆ.
ನಿಮ್ಮ ಸೈರಣೆಯು ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ; ಕರ್ತನು ಹತ್ತಿರವಾಗಿದ್ದಾನೆ.
ಸಮಯ ವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿ ಹೊರಗಿನವರ ಮುಂದೆ ಜ್ಞಾನವುಳ್ಳ ವರಾಗಿ ನಡೆದುಕೊಳ್ಳಿರಿ.
ನಿಮ್ಮ ನಡತೆಯು ದ್ರವ್ಯಾಶೆ ಯಿಲ್ಲದ್ದಾಗಿರಲಿ; ನಿಮಗಿರುವವುಗಳಲ್ಲಿ ತೃಪ್ತರಾಗಿರ್ರಿ; ಯಾಕಂದರೆ--ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ ಇಲ್ಲವೆ ತೊರೆಯುವದಿಲ್ಲವೆಂದು ಆತನು ಹೇಳಿದ್ದಾನೆ.