Home Bibles ಆದಿಕಾಂಡ 22:21 · ಕನ್ನಡ ಬೈಬಲ್
ಆದಿಕಾಂಡ 22:21 · ಕನ್ನಡ ಬೈಬಲ್

ಅವರು ಯಾರಂದರೆ ಅವನ ಚೊಚ್ಚಲು ಮಗ ಊಚನು ಅವನ ಸಹೋದರನಾದ ಬೂಜನು, ಅರಾಮನ ತಂದೆಯಾದ ಕೆಮೂವೇಲನು,

Cross references

ಆದಿಕಾಂಡ 24:10

ಆಗ ಆ ಸೇವಕನು ತನ್ನ ಯಜಮಾನನ ಒಂಟೆಗಳಲ್ಲಿ ಹತ್ತು ಒಂಟೆಗಳನ್ನು ತೆಗೆದುಕೊಂಡು ಹೋದನು. ಅವನ ಯಜಮಾನನ ಎಲ್ಲಾ ಆಸ್ತಿಯು ಅವನ ಕೈಯಲ್ಲಿ ಇತ್ತು. ಅವನು ಎದ್ದು ನಾಹೋರನ ಪಟ್ಟಣವಾದ ಮೆಸೊಪೊತಾಮ್ಯಕ್ಕೆ ಹೋದನು.

ಅಂಕೆಗಳ ಪುಸ್ತಕ 23:7

ಆಗ ಅವನು ಸಾಮ್ಯರೂಪವಾಗಿ--ಮೋವಾಬಿನ ಅರಸನಾದ ಬಾಲಾಕನು ನನ್ನನ್ನು ಅರಾಮಿನಿಂದಲೂ ಪೂರ್ವ ಪರ್ವತಗಳಿಂದಲೂ ಕರೆಯಿಸಿ--ನನಗೋ ಸ್ಕರ ಯಾಕೋಬನನ್ನು ಶಪಿಸ ಬಾ; ಇಸ್ರಾಯೇಲನ್ನು ಎದುರಿಸುವದಕ್ಕೆ ಬಾ ಎಂದು ನನಗೆ ಹೇಳಿದ್ದಾನೆ.

ಯೋಬ 1:1

ಊಚ್‌ ಎಂಬ ದೇಶದಲ್ಲಿ ಒಬ್ಬ ಮನುಷ್ಯನು ಇದ್ದನು. ಅವನ ಹೆಸರು ಯೋಬ. ಆ ಮನುಷ್ಯನು ಸಂಪೂರ್ಣನೂ ಯಥಾರ್ಥನೂ ದೇವರಿಗೆ ಭಯಪಡುವವನೂ ಕೇಡನ್ನು ಬಿಟ್ಟು ತೊಲ ಗುವವನೂ ಆಗಿದ್ದನು.

ಯೋಬ 32:2

ಆಗ ರಾಮನ ಬಂಧುವಾದ ಬೂಜ್‌ನಾದ ಬರಕೇಲನ ಮಗನಾದ ಎಲೀಹುವಿನ ಕೋಪ ಯೋಬನ ಮೇಲೆ ಉರಿಯಿತು, ಅವನು ದೇವರಿಗಿಂತ ತನ್ನನ್ನು ನೀತಿವಂತ ನೆಂದು ಸ್ಥಾಪಿಸಿದ್ದರಿಂದ ಅವನ ಕೋಪ ಉರಿಯಿತು.

ಕೀರ್ತನೆಗಳು 60:1

ಓ ದೇವರೇ, ಕೋಪಿಸಿಕೊಂಡು ನಮ್ಮನ್ನು ತಳ್ಳಿ ಚದರಿಸಿಬಿಟ್ಟಿದ್ದೀ; ಮತ್ತೆ ನಮ್ಮ ಕಡೆಗೆ ತಿರುಗಿಕೋ.

ಯೆರೆಮಿಯ 25:20

ಇದಲ್ಲದೆ ಕಿರ್ಯತ್‌ಯಾರೀಮಿನವನಾದ ಶೆಮಾ ಯನ ಮಗನಾದ ಊರೀಯನೆಂಬವನು ಸಹ ಕರ್ತನ ಹೆಸರಿನಲ್ಲಿ ಪ್ರವಾದಿಸುತ್ತಿರಲಾಗಿ ಯೆರೆವಿಾಯನ ಎಲ್ಲಾ ಮಾತುಗಳ ಪ್ರಕಾರ ಈ ಪಟ್ಟಣಕ್ಕೂ ಈ ದೇಶಕ್ಕೂ ವಿರೋಧವಾಗಿ ಪ್ರವಾದಿಸಿದನು.

ಯೆರೆಮಿಯ 25:23

ಅವರು ಊರೀಯನನ್ನು ಐಗುಪ್ತದಿಂದ ತಕ್ಕೊಂಡು ಅರಸನಾದ ಯೆಹೋಯಾ ಕೀಮನ ಬಳಿಗೆ ತಂದರು; ಇವನು ಅವನನ್ನು ಕತ್ತಿ ಯಿಂದ ಹೊಡೆದು ಅವನ ಹೆಣವನ್ನು ಸಾಧಾರಣವಾದ ಜನರ ಸಮಾಧಿಗಳಲ್ಲಿ ಹಾಕಿಸಿದನು.ಆದಾಗ್ಯೂ ಅವರು ಯೆರೆವಿಾಯನನ್ನು ಜನರ ಕೈಗೆ ಒಪ್ಪಿಸಿ ಕೊಂದು ಹಾಕಿಸದ ಹಾಗೆ ಶಾಫಾನನ ಮಗನಾದ ಅಹೀಕಾಮನ ಸಹಾಯವು ಅವನಿಗೆ ಇತ್ತು.

Interlinear

Choose Theme