Home Bibles ಆದಿಕಾಂಡ 21:9 · ಕನ್ನಡ ಬೈಬಲ್
ಆದಿಕಾಂಡ 21:9 · ಕನ್ನಡ ಬೈಬಲ್

ಇದಲ್ಲದೆ ಐಗುಪ್ತ್ಯ ಳಾದ ಹಾಗರಳು ಅಬ್ರಹಾಮನಿಗೆ ಹೆತ್ತಿದ್ದ ಮಗನು ಹಾಸ್ಯಮಾಡುವದನ್ನು ಸಾರಳು ನೋಡಿ

Cross references

ಆದಿಕಾಂಡ 16:1

ಅಬ್ರಾಮನ ಹೆಂಡತಿಯಾದ ಸಾರಯಳು ಅವನಿಂದ ಮಕ್ಕಳನ್ನು ಪಡೆಯಲಿಲ್ಲ. ಆಕೆಗೆ ಹಾಗರಳೆಂಬ ಐಗುಪ್ತದೇಶದ ದಾಸಿಯು ಇದ್ದಳು.

ಆದಿಕಾಂಡ 16:3

ಅಬ್ರಾಮನು ಕಾನಾನ್‌ದೇಶದಲ್ಲಿ ಹತ್ತು ವರುಷ ವಾಸಿಸಿದ ತರುವಾಯ ಅಬ್ರಾಮನ ಹೆಂಡತಿಯಾದ ಸಾರಯಳು ಐಗುಪ್ತದ ತನ್ನ ದಾಸಿಯಾದ ಹಾಗರಳನ್ನು ತನ್ನ ಗಂಡನಾದ ಅಬ್ರಾಮನಿಗೆ ಹೆಂಡತಿಯಾಗಿರುವದಕ್ಕೆ ಕೊಟ್ಟಳು.

ಆದಿಕಾಂಡ 16:15

ತರು ವಾಯ ಹಾಗರಳು ಅಬ್ರಾಮನಿಗೆ ಮಗನನ್ನು ಹೆತ್ತಳು. ಹಾಗರಳು ಅಬ್ರಾಮನಿಗೆ ಹೆತ್ತ ಮಗನಿಗೆ ಅವನು ಇಷ್ಮಾಯೇಲ ಎಂದು ಹೆಸರಿಟ್ಟನು.ಹಾಗರಳು ಅಬ್ರಾಮನಿಗೆ ಇಷ್ಮಾಯೇಲನನ್ನು ಹೆತ್ತಾಗ ಅಬ್ರಾಮನು ಎಂಭತ್ತಾರು ವರುಷದವನಾಗಿದ್ದನು.

ಆದಿಕಾಂಡ 17:20

ಇಷ್ಮಾಯೇಲನ ವಿಷಯದಲ್ಲಿ ನೀನು ಬೇಡಿದ್ದನ್ನು ಕೇಳಿದ್ದೇನೆ. ಇಗೋ, ನಾನು ಅವನನ್ನು ಆಶೀರ್ವದಿ ಸಿದೆನು. ಅವನನ್ನು ಅಭಿವೃದ್ಧಿಮಾಡಿ ಅತ್ಯಧಿಕವಾಗಿ ಹೆಚ್ಚಿಸುವೆನು. ಅವನಿಂದ ಹನ್ನೆರಡು ಪ್ರಭುಗಳು ಹುಟ್ಟುವರು. ನಾನು ಅವನನ್ನು ದೊಡ್ಡ ಜನಾಂಗವಾಗ ಮಾಡುವೆನು.

2 ಅರಸುಗಳು 2:23

ಅವನು ಆ ಸ್ಥಳವನ್ನು ಬಿಟ್ಟು ಬೇತೇಲಿಗೆ ಹೋದನು. ಅವನು ಮಾರ್ಗದಲ್ಲಿ ಏರಿ ಹೋಗುತ್ತಿ ರುವಾಗ ಚಿಕ್ಕ ಹುಡುಗರು ಪಟ್ಟಣದಿಂದ ಹೊರಟು ಬಂದು ಅವನನ್ನು ಹಾಸ್ಯಮಾಡಿ ಅವನಿಗೆ--ಬೋಳ ತಲೆಯವನೇ, ಏರಿ ಹೋಗು; ಬೋಳ ತಲೆಯವನೇ, ಏರಿ ಹೋಗು ಅಂದರು.

2 ದಿನವೃತ್ತಾಂತ 30:10

ಹೀಗೆಯೇ ದೂತರು ಎಫ್ರಾಯಾಮಿನ, ಮನ ಸ್ಸೆಯ ದೇಶದಲ್ಲಿ ಜೆಬುಲೂನ್‌ ಪರ್ಯಂತರ ಸಂಚರಿಸಿ ಪಟ್ಟಣದಿಂದ ಪಟ್ಟಣಕ್ಕೆ ಹಾದುಹೋದರು. ಆದರೆ ಜನರು ಇವರನ್ನು ನೋಡಿ ನಕ್ಕು ಗೇಲಿ ಮಾಡಿದರು.

2 ದಿನವೃತ್ತಾಂತ 36:16

ಆದರೆ ಕರ್ತನ ಕೋಪವು ತನ್ನ ಜನರಿಗೆ ವಿರೋಧ ವಾಗಿ ಏಳುವ ವರೆಗೂ ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ ಆತನ ವಾಕ್ಯಗಳನ್ನು ತಿರಸ್ಕರಿಸಿ ಆತನ ಪ್ರವಾದಿಗಳಿಗೆ ವಂಚನೆ ಮಾಡಿದರು.

ನೆಹೆಮ್ಯ 4:1

ಆದರೆ ನಾವು ಗೋಡೆಯನ್ನು ಕಟ್ಟುವವರ್ತಮಾನ ಸನ್ಬಲ್ಲಟನು ಕೇಳಿದಾಗ ಏನಾ ಯಿತಂದರೆ, ಅವನು ಕೋಪಗೊಂಡು ಬಹಳ ಕೋಪ ದಿಂದ ರೇಗುತ್ತಾ ಯೆಹೂದ್ಯರಿಗೆ ಗೇಲಿ ಮಾಡಿ ತನ್ನ ಸಹೋದರರ ಮುಂದೆಯೂ ಸಮಾರ್ಯದಲ್ಲಿರುವ ಸೈನ್ಯದ ಮುಂದೆಯೂ--

ಯೋಬ 30:1

ಆದರೆ ಈ ದಿವಸಗಳಲ್ಲಿ ನನಗಿಂತ ಚಿಕ್ಕವರು ನನ್ನನ್ನು ನೋಡಿ ಪರಿಹಾಸ್ಯಮಾಡುತ್ತಾರೆ; ಅವರ ತಂದೆಗಳನ್ನು ನನ್ನ ಕುರಿಮಂದೆಯ ನಾಯಿಗಳ ಸಂಗಡ ಸೇರಿಸುವದಕ್ಕೂ ಅಯೋಗ್ಯರೆಂದೆನು

ಕೀರ್ತನೆಗಳು 22:6

ನಾನು ಹುಳವೇ, ಮನುಷ್ಯನಲ್ಲ; ಮನುಷ್ಯರಿಂದ ನಿಂದಿಸಲ್ಪಟ್ಟವನೂ ಜನರಿಂದ ತಿರಸ್ಕರಿಸಲ್ಪಟ್ಟವನೂ ಆಗಿದ್ದೇನೆ.

ಕೀರ್ತನೆಗಳು 42:10

ನನ್ನ ವೈರಿಗಳು--ನಿನ್ನ ದೇವರು ಎಲ್ಲಿ ಎಂದು ದಿನವೆಲ್ಲಾ ನನಗೆ ಹೇಳಿ ನನ್ನನ್ನು ನಿಂದಿಸಿದ್ದರಿಂದ ನನ್ನ ಎಲುಬುಗಳು ಮುರಿದಹಾಗಿವೆ.ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ನಾನು ಇನ್ನೂ ಕೊಂಡಾಡುವೆನು.

ಕೀರ್ತನೆಗಳು 44:13

ನಮ್ಮ ನೆರೆಯವರಿಗೆ ನಮ್ಮನ್ನು ನಿಂದೆಗೂ ಸುತ್ತಲಿರುವವರಿಗೆ ಗೇಲಿಯಾಗಿಯೂ ಹಾಸ್ಯವಾಗಿಯೂ ನಮ್ಮನ್ನು ಇಡುತ್ತೀ.

ಸಾಮೇತಿಗಳು 20:11

ತನ್ನ ಕೆಲಸವು ಶುದ್ಧವೋ ಇಲ್ಲವೆ ನ್ಯಾಯವೋ ಎಂಬದು ತನ್ನ ಕ್ರಿಯೆಗಳಿಂದಲೇ ಹುಡುಗನು ತೋರ್ಪಡಿಸಿ ಕೊಳ್ಳುತ್ತಾನೆ.

ವಿಲಾಪಗಳು 1:7

ಯೆರೂಸಲೇಮು ಕಷ್ಟ ಮತ್ತು ಸಂಕಟದಲ್ಲಿದ್ದಾಗ ಪೂರ್ವದಿನಗಳಲ್ಲಿ ತನಗಿದ್ದ ರಮ್ಯವಾದವುಗಳೆಲ್ಲವನ್ನು ಜ್ಞಾಪಕಮಾಡಿಕೊಂಡಿದ್ದಾಳೆ. ಆಕೆಯ ಜನರು ಶತ್ರುವಿನ ಕೈಯಲ್ಲಿ ಬಿದ್ದಾಗ ಯಾವನೂ ಸಹಾಯಮಾಡಲಿಲ್ಲ. ವೈರಿಗಳು ಅವಳನ್ನು ನೋಡಿ ಅವಳ ಸಬ್ಬತ್ತುಗಳ ವಿಷಯದಲ್ಲಿ ಅಪಹಾಸ್ಯಮಾಡಿದರು.

ಗಲಾತ್ಯದವರಿಗೆ 4:22

ಯಾಕಂದರೆ ದಾಸಿಯಿಂದ ಒಬ್ಬನು, ಸ್ವತಂತ್ರಳಿಂದ ಒಬ್ಬನು ಹೀಗೆ ಅಬ್ರಹಾಮನಿಗೆ ಇಬ್ಬರು ಪುತ್ರರಿದ್ದರೆಂದು ಬರೆಯಲ್ಪಟ್ಟಿದೆ.

ಗಲಾತ್ಯದವರಿಗೆ 4:29

ಆದರೆ ಆಗ ಶರೀರಕ್ಕನುಸಾರವಾಗಿ ಹುಟ್ಟಿದವನು ಆತ್ಮಕ್ಕನುಸಾರವಾಗಿ ಹುಟ್ಟಿದವನನ್ನು ಹಿಂಸೆಪಡಿಸಿದನು. ಅದರಂತೆಯೇ ಈಗಲೂ ಅದೆ.

ಹೆಬ್ರಿಯರಿಗೆ 11:36

ಬೇರೆ ಕೆಲವರು ಅಪಹಾಸ್ಯ ಕೊರಡೆಯಪೆಟ್ಟು, ಹೌದು, ಇನ್ನು ಬೇಡಿ ಸೆರೆಮನೆ ಇವುಗಳನ್ನು ಅನುಭವಿಸಿದರು.

Interlinear

Choose Theme