ಆದಿಕಾಂಡ 20:12 · ಕನ್ನಡ ಬೈಬಲ್
ಇದಲ್ಲದೆ ನಿಶ್ಚಯವಾಗಿ ಅವಳು ನನ್ನ ತಂಗಿ; ಆಕೆಯು ನನ್ನ ತಾಯಿಯ ಮಗಳಲ್ಲ, ನನ್ನ ತಂದೆಯ ಮಗಳೇ; ನನಗೆ ಹೆಂಡತಿಯಾದಳು.
Cross references
ಆದಿಕಾಂಡ 11:29
ಅಬ್ರಾಮನೂ ನಾಹೋ ರನೂ ತಮಗೆ ಹೆಂಡತಿಯರನ್ನು ತೆಗೆದುಕೊಂಡರು. ಅಬ್ರಾಮನ ಹೆಂಡತಿಯ ಹೆಸರು ಸಾರಯಳು, ನಾಹೋರನ ಹೆಂಡತಿಯ ಹೆಸರು ಮಿಲ್ಕಾ; ಈಕೆಯು ಹಾರಾನನ ಮಗಳು; ಹಾರಾನನು ಮಿಲ್ಕಳಿಗೂ ಇಸ್ಕಳಿಗೂ ತಂದೆ.
ಆದಿಕಾಂಡ 12:13
ನಿನ್ನ ದೆಸೆಯಿಂದ ನನಗೆ ಒಳ್ಳೆಯದಾಗಿ ನನ್ನ ಪ್ರಾಣವು ಉಳಿಯುವಂತೆ ನೀನು ನನ್ನ ಸಹೋದರಿ ಎಂದು ಹೇಳಬೇಕು ಎಂದು ಕೇಳಿಕೊಳ್ಳುತ್ತೇನೆ ಅಂದನು.
1 ತೆಸಲೋನಿಕದವರಿಗೆ 5:22
ಸಕಲ ವಿಧವಾದ ಕೆಟ್ಟತನದ ತೋರಿಕೆಗೆ ದೂರವಾಗಿರ್ರಿ.