Home Bibles ☰ Books ಆದಿಕಾಂಡ 17:22 · ಕನ್ನಡ ಬೈಬಲ್
ಆದಿಕಾಂಡ 17:22 · ಕನ್ನಡ ಬೈಬಲ್

ಆಗ ದೇವರು ಅವನ ಸಂಗಡ ಮಾತನಾಡುವದನ್ನು ಮುಗಿಸಿ ಅಬ್ರಹಾಮನ ಬಳಿಯಿಂದ ಏರಿಹೋದನು.

Cross references

ಆದಿಕಾಂಡ 17:3

ಆಗ ಅಬ್ರಾಮನು ಸಾಷ್ಟಾಂಗಬಿದ್ದನು. ಆಗ ದೇವರು ಅವನ ಸಂಗಡ ಮಾತನಾಡಿದ್ದೇನಂದರೆ--

ಆದಿಕಾಂಡ 18:33

ಕರ್ತನು ಅಬ್ರಹಾಮನ ಸಂಗಡ ಮಾತನಾಡು ವದನ್ನು ಮುಗಿಸಿದ ಕೂಡಲೆ ಹೊರಟುಹೋದನು. ಅಬ್ರಹಾಮನು ತನ್ನ ಸ್ಥಳಕ್ಕೆ ತಿರುಗಿಕೊಂಡನು.

ಆದಿಕಾಂಡ 35:9

ಯಾಕೋಬನು ಪದ್ದನ್‌ ಅರಾಮಿನಿಂದ ಬಂದಾಗ ದೇವರು ಅವನಿಗೆ ಇನ್ನೊಂದು ಸಾರಿ ಪ್ರತ್ಯಕ್ಷನಾಗಿ ಅವನನ್ನು ಆಶೀರ್ವದಿಸಿದನು.

ಆದಿಕಾಂಡ 35:13

ಆಗ ದೇವರು ಅವನ ಸಂಗಡ ಮಾತನಾಡಿದ ಸ್ಥಳದಿಂದ ಏರಿಹೋದನು.

ನಿರ್ಗಮಕಾಂಡ 20:22

ಕರ್ತನು ಮೋಶೆಗೆ--ನೀನು ಇಸ್ರಾಯೇಲ್‌ ಮಕ್ಕಳಿಗೆ ಹೀಗೆ ಹೇಳಬೇಕು--ನಾನು ಆಕಾಶದಿಂದ ನಿಮ್ಮ ಸಂಗಡ ಮಾತನಾಡಿದ್ದನ್ನು ನೀವು ನೋಡಿದ್ದೀರಿ.

ಅಂಕೆಗಳ ಪುಸ್ತಕ 12:6

ಆತನು--ನನ್ನ ಮಾತುಗಳನ್ನು ಈಗ ಕೇಳಿರಿ--ನಿಮ್ಮಲ್ಲಿ ಒಬ್ಬ ಪ್ರವಾದಿ ಇದ್ದರೆ ಕರ್ತನಾದ ನಾನು ದರ್ಶನದಲ್ಲಿ ಅವನಿಗೆ ತಿಳಿಯಪಡಿಸುವೆನು, ಸ್ವಪ್ನದಲ್ಲಿ ಅವನ ಸಂಗಡ ಮಾತನಾಡುವೆನು.

ದ್ವಿತೀಯೋಪದೇಶಕಾಂಡ 5:4

ಮುಖಾಮುಖಿಯಾಗಿ ಕರ್ತನು ನಿಮ್ಮ ಸಂಗಡ ಬೆಟ್ಟದಲ್ಲಿ ಬೆಂಕಿಯೊಳಗಿಂದ ಮಾತನಾಡಿದನು.

ನ್ಯಾಯಾಧಿಪತಿಗಳು 6:21

ಆಗ ಕರ್ತನ ದೂತನು ತನ್ನ ಕೈಯಲ್ಲಿದ್ದ ಕೋಲಿನ ಕೊನೆಯನ್ನು ಚಾಚಿ ಮಾಂಸವನ್ನೂ ಹುಳಿ ಇಲ್ಲದ ರೊಟ್ಟಿಗಳನ್ನೂ ಮುಟ್ಟಿದನು. ಆಗ ಬೆಂಕಿಯು ಬಂಡೆ ಯಿಂದ ಎದ್ದು ಮಾಂಸವನ್ನೂ ಹುಳಿ ಇಲ್ಲದ ರೊಟ್ಟಿ ಗಳನ್ನೂ ದಹಿಸಿಬಿಟ್ಟಿತು. ಆಗ ಕರ್ತನ ದೂತನು ಅವನ ಕಣ್ಣುಗಳಿಗೆ ಕಾಣಿಸದೆ ಹೋದನು.

ನ್ಯಾಯಾಧಿಪತಿಗಳು 13:20

ಅಗ್ನಿ ಜ್ವಾಲೆಯು ಬಲಿಪೀಠದಿಂದ ಆಕಾಶಕ್ಕೆ ಸರಿಯಾಗಿ ಏಳು ವಾಗ ಏನಾಯಿತಂದರೆ, ಕರ್ತನ ದೂತನು ಬಲಿಪೀಠದ ಜ್ವಾಲೆಯಲ್ಲಿ ಮೇಲಕ್ಕೆ ಹೋದನು. ಅದನ್ನು ಮಾನೋ ಹನೂ ಅವನ ಹೆಂಡತಿಯೂ ನೋಡಿ ನೆಲದ ಮೇಲೆ ಬೋರಲು ಬಿದ್ದರು.

ಯೋಹಾನ 1:18

ಯಾವನೂ ಯಾವ ಕಾಲದಲ್ಲೂ ದೇವರನ್ನು ಕಂಡಿಲ್ಲ. ತಂದೆಯ ಎದೆಯಲ್ಲಿರುವ ಆ ಒಬ್ಬನೇ ಮಗ ನಾಗಿರುವಾತನು ಆತನನ್ನು ತಿಳಿಯಪಡಿಸಿದ್ದಾನೆ.

ಯೋಹಾನ 10:30

ನಾನು ಮತ್ತು ನನ್ನ ತಂದೆಯು ಒಂದಾಗಿದ್ದೇವೆ ಎಂದು ಉತ್ತರಕೊಟ್ಟನು.

Interlinear

Choose Theme