ಆದಿಕಾಂಡ 10:21 · ಕನ್ನಡ ಬೈಬಲ್
ಯೆಬೆರನ ಮಕ್ಕಳೆಲ್ಲರ ತಂದೆಯೂ ಹಿರಿಯನಾದ ಯೆಫೆತನ ಸಹೋದರನೂ ಆಗಿರುವ ಶೇಮನಿಗೆ ಸಹ ಮಕ್ಕಳು ಹುಟ್ಟಿದರು.
Cross references
ಆದಿಕಾಂಡ 5:32
ನೋಹನು ಐನೂರು ವರುಷದವನಾಗಿದ್ದನು; ನೋಹನಿಂದ ಶೇಮ್ ಹಾಮ್ ಯೆಫೆತ್ ಎಂಬವರು ಹುಟ್ಟಿದರು.
ಆದಿಕಾಂಡ 11:10
ಶೇಮನ ವಂಶಾವಳಿಗಳು ಇವೇ; ಶೇಮನು ನೂರು ವರುಷದವನಾಗಿದ್ದಾಗ ಅಂದರೆ ಪ್ರಳಯವಾಗಿ ಎರಡು ವರುಷಗಳಾದ ಮೇಲೆ ಅವನಿಂದ ಅರ್ಪಕ್ಷದನು ಹುಟ್ಟಿದನು.
ಅಂಕೆಗಳ ಪುಸ್ತಕ 24:24
ಕಿತ್ತೀಮಿನ ತೀರದಿಂದ ಹಡಗುಗಳು ಬಂದು ಅಶ್ಶೂರ್ಯರನ್ನೂ ಏಬೆರರನ್ನೂ ಶ್ರಮೆ ಪಡಿಸುವವು. ಅವನು ಸಹ ಸದಾಕಾಲಕ್ಕೂ ನಾಶವಾಗು ವನು ಎಂದು ಹೇಳಿದನು.ಆಗ ಬಿಳಾಮನು ಎದ್ದು ತನ್ನ ಸ್ಥಳಕ್ಕೆ ತಿರಿಗಿ ಹೋದನು. ಬಾಲಾಕನು ಸಹ ತನ್ನ ಮಾರ್ಗವಾಗಿ ಹೋದನು.
1 ದಿನವೃತ್ತಾಂತ 1:17
ಶೇಮನ ಮಕ್ಕಳು--ಏಲಾಮನು ಅಶ್ಯೂರನು, ಅರ್ಪಕ್ಷದನು, ಲೂದನು, ಅರಾಮನು, ಊಚನು, ಹೂಲನು, ಗೆತೆರನು, ಮೆಷಕನು.