Home Bibles ☰ Books ಆದಿಕಾಂಡ 1:9 · ಕನ್ನಡ ಬೈಬಲ್
ಆದಿಕಾಂಡ 1:9 · ಕನ್ನಡ ಬೈಬಲ್

ಆಗ ದೇವರು--ಆಕಾಶದ ಕೆಳಗಿರುವ ನೀರುಗಳು ಒಂದು ಸ್ಥಳದಲ್ಲಿ ಕೂಡಿಕೊಳ್ಳಲಿ ಮತ್ತು ಒಣನೆಲವು ಕಾಣಿಸಲಿ ಅಂದನು. ಅದು ಹಾಗೆಯೇ ಆಯಿತು.

Cross references

ನೆಹೆಮ್ಯ 9:6

ನೀನು ಒಬ್ಬನೇ ಕರ್ತನಾಗಿದ್ದೀ. ನೀನು ಆಕಾಶವನ್ನೂ ಆಕಾಶಗಳ ಆಕಾಶವನ್ನೂ ಅವು ಗಳ ಸಮಸ್ತ ಸೈನ್ಯವನ್ನೂ ಭೂಮಿಯನ್ನೂ ಅದರ ಲ್ಲಿರುವವುಗಳನ್ನೂ ಸಮುದ್ರಗಳನ್ನೂ ಅವುಗಳೊಳ ಗಿರುವ ಸಮಸ್ತವನ್ನೂ ಉಂಟು ಮಾಡಿದ್ದಲ್ಲದೆ ಅವು ಗಳನ್ನೆಲ್ಲಾ ಕಾಪಾಡುತ್ತೀ. ಇದಲ್ಲದೆ ಆಕಾಶಗಳ ಸೈನ್ಯವು ನಿನ್ನನ್ನು ಆರಾಧಿಸುತ್ತದೆ.

ಯೋಬ 26:7

ಉತ್ತರವನ್ನು ಶೂನ್ಯದ ಮೇಲೆ ವಿಸ್ತರಿಸುತ್ತಾನೆ; ಭೂಮಿ ಯನ್ನು ಏನೂ ಇಲ್ಲದ್ದರ ಮೇಲೆ ತೂಗ ಹಾಕಿದ್ದಾನೆ.

ಯೋಬ 26:10

ಹಗಲು ರಾತ್ರಿ ಮುಗಿಯುವ ವರೆಗೆ ಆತನು ನೀರಿನ ಸುತ್ತಲೂ ಮೇರೆ ಯನ್ನು ಕಟ್ಟಿದ್ದಾನೆ.

ಯೋಬ 38:8

ಸಮುದ್ರವು ಗರ್ಭದೊಳಗಿಂದ ಹೊರಬಂದಂತೆ, ಅದು ಬೇಧಿಸಿಕೊಂಡು ಬಂದಾಗ ಸಮುದ್ರವನ್ನು ಬಾಗಲುಗಳಿಂದ ಮುಚ್ಚಿದವನಾರು?

ಕೀರ್ತನೆಗಳು 24:1

ಭೂಮಿಯೂ ಅದರ ಸಮಸ್ತವೂ ಭೂಲೋಕವೂ ಅದರಲ್ಲಿ ವಾಸಿಸುವವುಗಳೂ ಕರ್ತನವುಗಳು.

ಕೀರ್ತನೆಗಳು 24:2

ಆತನು ಅದನ್ನು ಸಮುದ್ರಗಳ ಮೇಲೆ ಸ್ಥಾಪಿಸಿ ಪ್ರವಾಹಗಳ ಮೇಲೆ ಅದನ್ನು ಸ್ಥಿರ ಪಡಿಸಿದ್ದಾನೆ.

ಕೀರ್ತನೆಗಳು 33:7

ಆತನು ಸಮು ದ್ರದ ನೀರುಗಳನ್ನು ರಾಶಿಯಾಗಿ ಕೂಡಿಸುತ್ತಾನೆ; ಆಗಾಧವನ್ನು ಉಗ್ರಾಣಗಳಲ್ಲಿ ಇಡುತ್ತಾನೆ.

ಕೀರ್ತನೆಗಳು 95:5

ಸಮುದ್ರವು ಆತನದು; ಆತನು ಅದನ್ನು ಮಾಡಿದನು; ಆತನ ಕೈಗಳು ಒಣಭೂಮಿಯನ್ನು ರೂಪಿಸಿದವು.

ಕೀರ್ತನೆಗಳು 104:3

ಆತನು ನೀರುಗಳಲ್ಲಿ ತನ್ನ ಉಪ್ಪರಿಗೆಗಳ ತೊಲೆಗಳನ್ನು ಇರಿಸುತ್ತಾನೆ; ಮೋಡಗಳನ್ನು ತನ್ನ ರಥವಾಗಿ ಮಾಡು ತ್ತಾನೆ. ಗಾಳಿಯ ರೆಕ್ಕೆಗಳ ಮೇಲೆ ನಡೆದು ಹೋಗು ತ್ತಾನೆ.

ಕೀರ್ತನೆಗಳು 104:5

ಯುಗಯುಗಾಂತರಗಳಿಗೂ ಅದು ಕದಲದ ಹಾಗೆ ಭೂಮಿಯನ್ನು ಅದರ ಅಸ್ತಿವಾರಗಳ ಮೇಲೆ ಆತನು ಸ್ಥಾಪಿಸಿದನು.

ಕೀರ್ತನೆಗಳು 136:5

ಆಕಾಶ ವನ್ನು ಜ್ಞಾನದಿಂದ ಉಂಟುಮಾಡಿದಾತನನ್ನು ಕೊಂಡಾ ಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

ಸಾಮೇತಿಗಳು 8:28

ಮೇಲೆ ಮೇಘಗಳನ್ನು ಆತನು ಸ್ಥಾಪಿಸಿದಾಗ ಅಗಾಧದ ಬುಗ್ಗೆಗಳನ್ನು ಆತನು ಬಲಪಡಿಸಿದಾಗ

ಸಾಮೇತಿಗಳು 8:29

ಪ್ರವಾಹಗಳು ತನ್ನ ಆಜ್ಞೆಯನ್ನು ವಿಾರದಂತೆ ಸಮು ದ್ರಕ್ಕೆ ಆತನು ನಿಯಮವನ್ನು ಕೊಟ್ಟಿದಾಗ ಭೂಮಿಯ ಅಸ್ತಿವಾರಗಳನ್ನು ಆತನು ನೇಮಿಸಿದಾಗ ನಾನು ಆತ ನೊಂದಿಗೆ ಇದ್ದೆನು.

ಸಭಾಪ್ರಸಂಗಿ 1:7

ನದಿಗಳೆಲ್ಲಾ ಹರಿದು ಸಮುದ್ರಕ್ಕೆ ಹೋಗುತ್ತವೆ, ಆದರೂ ಸಮುದ್ರವು ತುಂಬುವದಿಲ್ಲ; ನದಿ ಗಳು ಎಲ್ಲಿಂದ ಬಂದಿವೆಯೋ ಆ ಸ್ಥಳಕ್ಕೆ ಅವು ಹಿಂತಿರು ಗುತ್ತವೆ.

ಯೆರೆಮಿಯ 5:22

ಕರ್ತನು ಹೀಗೆ ಹೇಳುತ್ತಾನೆ--ಇಗೋ, ಒಂದು ಜನವು ಉತ್ತರ ದೇಶದಿಂದ ಬರುತ್ತದೆ; ದೊಡ್ಡ ಜನಾಂಗವು ಭೂಮಿಯ ಮೇರೆಗಳಿಂದ ಎದ್ದು ಬರು ತ್ತದೆ.

ಯೋನ 1:9

ನಿನ್ನ ದೇಶ ಯಾವದು, ನೀನು ಯಾವ ಜನಾಂಗದವನು, ನಮಗೆ ತಿಳಿಸು ಅಂದರು. ಅವನು ಅವರಿಗೆ--ನಾನು ಇಬ್ರಿಯನು; ಸಮುದ್ರವನ್ನೂ ಒಣಗಿದ ಭೂಮಿಯನ್ನೂ ಉಂಟುಮಾಡಿದ ಪರ ಲೋಕದ ದೇವರಾದ ಕರ್ತನಿಗೆ ಭಯಪಡುವವ ನಾಗಿದ್ದೇನೆಂದು ಹೇಳಿದನು.

Interlinear

Choose Theme