Home Bibles ಗಲಾತ್ಯದವರಿಗೆ 5:6 · ಕನ್ನಡ ಬೈಬಲ್
ಗಲಾತ್ಯದವರಿಗೆ 5:6 · ಕನ್ನಡ ಬೈಬಲ್

ಯಾಕಂದರೆ ಯೇಸು ಕ್ರಿಸ್ತನಲ್ಲಿರುವವರಿಗೆ ಸುನ್ನತಿ ಯಾದರೂ ಪ್ರಯೋಜನವಿಲ್ಲ, ಆಗದಿದ್ದರೂ ಪ್ರಯೋ ಜನವಿಲ್ಲ. ಪ್ರೀತಿಯಿಂದ ಕೆಲಸನಡಿಸುವ ನಂಬಿಕೆ ಯಿಂದಲೇ ಪ್ರಯೋಜನವಾಗುತ್ತದೆ.

Cross references

ಯೆಹೋಶುವ 5:5

ಐಗುಪ್ತದಿಂದ ಹೊರಟ ಜನರೆಲ್ಲರೂ ಸುನ್ನತಿಮಾಡಲ್ಪಟ್ಟಿದ್ದರು; ಆದರೆ ಐಗುಪ್ತ ದಿಂದ ಹೊರಟಾಗ ಅರಣ್ಯದೊಳಗೆ ಮಾರ್ಗದಲ್ಲಿ ಹುಟ್ಟಿದ ಸಕಲ ಜನರು ಸುನ್ನತಿಮಾಡಲ್ಪಡಲಿಲ್ಲ.

ಮತ್ತಾಯ 25:31

ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಎಲ್ಲಾ ಪರಿಶುದ್ಧ ದೂತರೊಂದಿಗೆ ಬರುವಾಗ ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವನು;

ಲೂಕ 7:5

ಅವನು ನಮ್ಮ ಜನಾಂಗವನ್ನು ಪ್ರೀತಿಸುವದಲ್ಲದೆ ನಮಗಾಗಿ ಒಂದು ಸಭಾಮಂದಿರವನ್ನು ಕಟ್ಟಿಸಿದ್ದಾನೆ ಎಂದು ಬೇಡಿಕೊಂಡರು.

ರೋಮಾಪುರದವರಿಗೆ 2:25

ನೀನು ನ್ಯಾಯಪ್ರಮಾಣವನ್ನು ಕೈಕೊಂಡರೆ ಸುನ್ನತಿಯು ನಿಜವಾಗಿಯೂ ಪ್ರಯೋಜನವಾದದ್ದೇ. ಆದರೆ ನೀನು ನ್ಯಾಯಪ್ರಮಾಣವನ್ನು ವಿಾರುವದಾದರೆ ನಿನ್ನ ಸುನ್ನತಿಯು ಸುನ್ನತಿ ಅಲ್ಲ.

ರೋಮಾಪುರದವರಿಗೆ 3:29

ದೇವರು ಯೆಹೂದ್ಯರಿಗೆ ಮಾತ್ರ ದೇವರಾಗಿ ದ್ದಾನೋ? ಅನ್ಯಜನಗಳಿಗೆ ಸಹ ದೇವರಲ್ಲವೇ? ಹೌದು, ಆತನು ಅನ್ಯಜನರಿಗೆ ಸಹ ದೇವರಾಗಿದ್ದಾನೆ;

1 ಕೊರಿಂಥದವರಿಗೆ 7:19

ಸುನ್ನತಿಯಾದರೂ ಏನೂ ಇಲ್ಲ, ಸುನ್ನತಿಯಾಗದ್ದಿದರೂ ಏನೂ ಇಲ್ಲ; ಆದರೆ ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವದೇ ಆಗಿದೆ.

2 ಕೊರಿಂಥದವರಿಗೆ 5:14

ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಮಾಡುತ್ತದೆ; ಹೀಗೆ ಎಲ್ಲರಿಗೋಸ್ಕರ ಒಬ್ಬನು ಸತ್ತದ್ದರಿಂದ ಎಲ್ಲರೂ ಸತ್ತಂತಾಯಿತೆಂದು ನಾವು ಹೀಗೆ ನಿಶ್ಚಯಿಸಿಕೊಳ್ಳುತ್ತೇವೆ.

ಗಲಾತ್ಯದವರಿಗೆ 3:28

ನೀವೆಲ್ಲರು ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ ದಾಸನು ಸ್ವತಂತ್ರನು ಎಂದೂ ಗಂಡು ಹೆಣ್ಣು ಎಂದೂ ಭೇದವಿಲ್ಲ.ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರು ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ.

ಗಲಾತ್ಯದವರಿಗೆ 5:2

ಇಗೋ, ಪೌಲನೆಂಬ ನಾನು ನಿಮಗೆ ಹೇಳುವದೇನಂದರೆ, ನೀವು ಸುನ್ನತಿ ಮಾಡಿಸಿಕೊಂಡರೆ ಕ್ರಿಸ್ತನಿಂದ ನಿಮಗೆ ಏನು ಪ್ರಯೋಜನವಿಲ್ಲ.

ಗಲಾತ್ಯದವರಿಗೆ 6:15

ಕ್ರಿಸ್ತ ಯೇಸುವಿನಲ್ಲಿ ಸುನ್ನತಿಯಾಗುವದರಿಂದ ಏನೂ ಪ್ರಯೋಜನವಿಲ್ಲ, ಸುನ್ನತಿಯಾಗದೆ ಇರುವದ ರಿಂದಲೂ ಏನೂ ಪ್ರಯೋಜನವಿಲ್ಲ; ಆದರೆ ಹೊಸ ಸೃಷ್ಟಿಯೇ ಬೇಕು.

ಕೊಲೊಸ್ಸೆಯವರಿಗೆ 3:11

ಇದರಲ್ಲಿ ಗ್ರೀಕನು ಯೆಹೂದ್ಯನು ಎಂಬ ಭೇದವಿಲ್ಲ; ಸುನ್ನತಿ ಮಾಡಿಸಿ ಕೊಂಡವರು ಸುನ್ನತಿ ಮಾಡಿಸಿಕೊಳ್ಳದವರು ಎಂಬ ಭೇದವಿಲ್ಲ, ಮ್ಲೇಚ್ಛ ಹೂನರೆಂದಿಲ್ಲ; ದಾಸನು ಸ್ವತಂತ್ರನು ಎಂಬ ಭೇದವಿಲ್ಲ; ಆದರೆ ಕ್ರಿಸ್ತನೇ ಸಮಸ್ತರಲ್ಲಿಯೂ ಸಮಸ್ತವೂ ಆಗಿದ್ದಾನೆ.

1 ತೆಸಲೋನಿಕದವರಿಗೆ 1:3

ನಂಬಿಕೆಯ ಫಲವಾದ ನಿಮ್ಮ ಕೆಲಸವನ್ನೂ ಪ್ರೀತಿಪೂರ್ವಕವಾದ ನಿಮ್ಮ ಪ್ರಯಾಸವನ್ನೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೇಲಣ ನಿರೀಕ್ಷೆಯಿಂದುಂಟಾದ ನಿಮ್ಮ ಸೈರಣೆ ಯನ್ನೂ ನಾವು ನಮ್ಮ ತಂದೆಯಾದ ದೇವರ ಮುಂದೆ ಎಡೆಬಿಡದೆ ಜ್ಞಾಪಕಮಾಡಿಕೊಳ್ಳುತ್ತೇವೆ.

ಹೆಬ್ರಿಯರಿಗೆ 11:8

ನಂಬಿಕೆಯಿಂದಲೇ ಅಬ್ರಹಾಮನು ಕರೆಯ ಲ್ಪಟ್ಟಾಗ ವಿಧೇಯನಾಗಿ ತಾನು ಬಾಧ್ಯವಾಗಿ ಹೊಂದ ಬೇಕಾಗಿದ್ದ ಸ್ಥಳಕ್ಕೆ ಹೊರಟುಹೋದನು; ತಾನು ಹೋಗಬೇಕಾದ ಸ್ಥಳವು ಯಾವದೆಂದು ತಿಳಿಯದೆ ಹೊರಟನು.

ಹೆಬ್ರಿಯರಿಗೆ 11:17

ಅಬ್ರಹಾಮನು ಶೋಧಿತನಾಗಿ ನಂಬಿಕೆ ಯಿಂದಲೇ ಇಸಾಕನನ್ನು ಸಮರ್ಪಿಸಿದನು; ಆ ವಾಗ್ದಾನ ಗಳನ್ನು ಹೊಂದಿದ ಅವನು ತನ್ನ ಒಬ್ಬನೇ ಮಗನನ್ನು ಸಮರ್ಪಿಸಿದನು.

ಯಾಕೋಬ 2:14

ನನ್ನ ಸಹೋದರರೇ, ಒಬ್ಬನು ತನಗೆ ನಂಬಿಕೆ ಯುಂಟೆಂದು ಹೇಳಿಕೊಂಡು ಕ್ರಿಯೆಗಳಿಲ್ಲದವನಾಗಿದ್ದರೆ ಪ್ರಯೋಜನವೇನು? ಅಂಥ ನಂಬಿಕೆಯು ಅವನನ್ನು ರಕ್ಷಿಸುವದೋ?

1 ಪೇತ್ರ 1:8

ನೀವು ಆತನನ್ನು ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ; ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು ಹೇಳಲಶಕ್ಯವಾದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.

1 ಯೋಹಾನ 3:14

ನಾವಂತೂ ಸಹೋದರರನ್ನು ಪ್ರೀತಿಸುವವರಾಗಿರುವದರಿಂದ ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದೇವೆಂಬದು ನಮಗೆ ಗೊತ್ತಾಗಿದೆ. ತನ್ನ ಸಹೋದರನನ್ನು ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ.

1 ಯೋಹಾನ 4:18

ಪ್ರೀತಿಯಲ್ಲಿ ಹೆದರಿಕೆಯಿಲ್ಲ; ಆದರೆ ಪೂರ್ಣ ಪ್ರೀತಿಯು ಹೆದರಿಕೆ ಯನ್ನು ಹೊರಡಿಸಿಬಿಡುತ್ತದೆ. ಯಾಕಂದರೆ ಭಯವಿರು ವಲ್ಲಿ ಯಾತನೆಯಿರುವದು. ಭಯಪಡುವವನು ಪ್ರೀತಿ ಯಲ್ಲಿ ಸಿದ್ಧಿಗೆ ಬಂದವನಲ್ಲ.

Interlinear

Choose Theme