Home Bibles ☰ Books ಗಲಾತ್ಯದವರಿಗೆ 2:3 · ಕನ್ನಡ ಬೈಬಲ್
ಗಲಾತ್ಯದವರಿಗೆ 2:3 · ಕನ್ನಡ ಬೈಬಲ್

ನನ್ನ ಜೊತೆಯಲ್ಲಿದ್ದ ತೀತನು ಗ್ರೀಕನಾಗಿದ್ದರೂ ಅವನಿಗೆ ಸುನ್ನತಿಯಾಗಬೇಕೆಂದು ಯಾರೂ ಬಲಾತ್ಕಾರ ಮಾಡ ಲಿಲ್ಲ.

Cross references

ಅಪೋಸ್ತಲರ ಕೃತ್ಯಗಳು 15:24

ನಮ್ಮಿಂದ ಅಪ್ಪಣೆಹೊಂದದೆ ನಮ್ಮೊಳಗಿಂದ ಹೊರಟುಹೋದ ಕೆಲವರು--ನೀವು ಸುನ್ನತಿ ಮಾಡಿಸಿಕೊಂಡು ನ್ಯಾಯಪ್ರಮಾಣವನ್ನು ಅನುಸರಿಸಬೇಕೆಂದು ತಮ್ಮ ಮಾತುಗಳಿಂದ ನಿಮ್ಮನ್ನು ತೊಂದರೆಪಡಿಸಿ ನಿಮ್ಮ ಮನಸ್ಸುಗಳನ್ನು ಕಳವಳ ಗೊಳಿಸಿದ್ದಾರೆಂದು ಕೇಳಿದ್ದರಿಂದ

ಅಪೋಸ್ತಲರ ಕೃತ್ಯಗಳು 16:3

ಇವನನ್ನು ತನ್ನ ಸಂಗಡ ಕರಕೊಂಡು ಹೋಗಬೇಕೆಂದು ಪೌಲನು ಅಪೇಕ್ಷಿಸಿ ಆಯಾ ಸ್ಥಳಗಳಲ್ಲಿದ್ದ ಯೆಹೂದ್ಯರ ನಿಮಿತ್ತವಾಗಿ ಅವನಿಗೆ ಸುನ್ನತಿ ಮಾಡಿಸಿದನು. ಯಾಕಂದರೆ ಅವನ ತಂದೆ ಗ್ರೀಕನೆಂದು ಎಲ್ಲರಿಗೂ ಗೊತ್ತಿತ್ತು.

1 ಕೊರಿಂಥದವರಿಗೆ 9:20

ಇದಲ್ಲದೆ ಯೆಹೂದ್ಯರನ್ನು ಸಂಪಾದಿಸಿಕೊಳ್ಳುವಂತೆ ಯೆಹೂದ್ಯರಿಗೆ ನಾನು ಯೆಹೂದ್ಯನಾಗಿಯೂ ನ್ಯಾಯ ಪ್ರಮಾಣದ ಅಧೀನದಲ್ಲಿರುವವರನ್ನು ಸಂಪಾದಿಸಿ ಕೊಳ್ಳುವಂತೆ ನ್ಯಾಯಪ್ರಮಾಣಕ್ಕೆ ಅಧೀನರಾಗಿರು ವವರಿಗೆ ನ್ಯಾಯಪ್ರಮಾಣಕ್ಕೆ ಅಧೀನನಾಗಿಯೂ

2 ಕೊರಿಂಥದವರಿಗೆ 2:13

ಆದರೂ ನನ್ನ ಸಹೋದರನಾದ ತೀತನು ನನಗೆ ಸಿಕ್ಕಲಿಲ್ಲವಾದ ಕಾರಣ ನನ್ನ ಆತ್ಮಕ್ಕೆ ಉಪಶಮನವಿಲ್ಲದೆ ಅಲ್ಲಿದ್ದವರಿಂದ ಕಳುಹಿಸಿ ಕೊಂಡವನಾಗಿ ಹೊರಟು ಮಕೆದೋನ್ಯಕ್ಕೆ ಬಂದೆನು.

ಗಲಾತ್ಯದವರಿಗೆ 5:2

ಇಗೋ, ಪೌಲನೆಂಬ ನಾನು ನಿಮಗೆ ಹೇಳುವದೇನಂದರೆ, ನೀವು ಸುನ್ನತಿ ಮಾಡಿಸಿಕೊಂಡರೆ ಕ್ರಿಸ್ತನಿಂದ ನಿಮಗೆ ಏನು ಪ್ರಯೋಜನವಿಲ್ಲ.

Interlinear

Choose Theme