Home Bibles ಗಲಾತ್ಯದವರಿಗೆ 1:13 · ಕನ್ನಡ ಬೈಬಲ್
ಗಲಾತ್ಯದವರಿಗೆ 1:13 · ಕನ್ನಡ ಬೈಬಲ್

ಹಿಂದೆ ನಾನು ಯೆಹೂದ್ಯ ಮತದಲ್ಲಿದ್ದಾಗ ನನ್ನ ನಡತೆ ಎಂಥದ್ದಾಗಿತ್ತೆಂದು ನೀವು ಕೇಳಿದ್ದೀರಷ್ಟೆ; ನಾನು ದೇವರ ಸಭೆಯನ್ನು ಮಿತಿವಿಾರಿ ಹಿಂಸೆಪಡಿಸಿ ಹಾಳುಮಾಡುತ್ತಿದ್ದೆನು.

Cross references

ಅಪೋಸ್ತಲರ ಕೃತ್ಯಗಳು 8:1

ಸೌಲನು ಅವನ ಕೊಲೆಗೆ ಸಮ್ಮತಿಸು ವವನಾಗಿದ್ದನು. ಆ ಕಾಲದಲ್ಲಿ ಯೆರೂಸ ಲೇಮಿನಲ್ಲಿದ್ದ ಸಭೆಗೆ ದೊಡ್ಡ ಹಿಂಸೆ ಉಂಟಾಯಿತು. ಅಪೊಸ್ತಲರ ಹೊರತಾಗಿ ಎಲ್ಲರೂ ಯೂದಾಯ ಸಮಾರ್ಯ ಸೀಮೆಗಳಲ್ಲಿ ಚದರಿಹೋದರು.

ಅಪೋಸ್ತಲರ ಕೃತ್ಯಗಳು 8:3

ಆದರೆ ಸೌಲನು ಮನೆಮನೆಗಳಲ್ಲಿ ಹೊಕ್ಕು ಗಂಡಸರನ್ನೂ ಹೆಂಗಸರನ್ನೂ ಎಳಕೊಂಡು ಬಂದು ಸೆರೆಮನೆಗೆ ಹಾಕಿಸಿ ಸಭೆಯನ್ನು ಹಾಳುಮಾಡುತ್ತಿದ್ದನು.

ಅಪೋಸ್ತಲರ ಕೃತ್ಯಗಳು 9:1

ಸೌಲನು ಕರ್ತನ ಶಿಷ್ಯರಿಗೆ ಇನ್ನೂ ವಿರೋಧವಾಗಿ ಬೆದರಿಕೆಯ ಮಾತುಗಳ ನ್ನಾಡುತ್ತಾ ಅವರನ್ನು ಸಂಹರಿಸಬೇಕೆಂದು ಮಹಾ ಯಾಜಕನ ಬಳಿಗೆ ಹೋಗಿ

ಅಪೋಸ್ತಲರ ಕೃತ್ಯಗಳು 9:13

ಅದಕ್ಕೆ ಅನನೀಯನು--ಕರ್ತನೇ, ಆ ಮನುಷ್ಯನು ಯೆರೂಸಲೇಮಿನಲ್ಲಿ ನಿನ್ನ ಪರಿಶುದ್ಧರಿಗೆ ಎಷ್ಟೋ ಕೇಡನ್ನುಂಟು ಮಾಡಿದನೆಂದು ಅವನ ವಿಷಯವಾಗಿ ಅನೇಕರಿಂದ ನಾನು ಕೇಳಿದ್ದೇನೆ;

ಅಪೋಸ್ತಲರ ಕೃತ್ಯಗಳು 9:21

ಆದರೆ ಕೇಳಿದವರೆಲ್ಲರೂ ಬೆರಗಾಗಿ--ಈ ಹೆಸರು ಹೇಳುವವರನ್ನು ಯೆರೂಸಲೇಮಿನಲ್ಲಿ ಹಾಳು ಮಾಡಿದವನು ಇವನೇ ಅಲ್ಲವೇ, ಅಂಥವರನ್ನು ಬಂಧಿಸಿ ಪ್ರಧಾನಯಾಜಕರ ಬಳಿಗೆ ತೆಗೆದುಕೊಂಡು ಹೋಗಬೇಕೆಂಬ ಉದ್ದೇಶದಿಂದ ಇಲ್ಲಿಗೆ ಬಂದನಲ್ಲವೇ ಎಂದು ಮಾತನಾಡಿಕೊಂಡರು.

ಅಪೋಸ್ತಲರ ಕೃತ್ಯಗಳು 9:26

ಸೌಲನು ಯೆರೂಸಲೇಮಿಗೆ ಬಂದು ಶಿಷ್ಯ ರೊಳಗೆ ಸೇರಿಕೊಳ್ಳಬೇಕೆಂದು ಪ್ರಯತ್ನಮಾಡಿದಾಗ ಎಲ್ಲರೂ ಅವನಿಗೆ ಭಯಪಟ್ಟು ಅವನನ್ನು ಶಿಷ್ಯನೆಂದು ನಂಬದೆ ಹೋದರು.

ಅಪೋಸ್ತಲರ ಕೃತ್ಯಗಳು 22:3

ನಿಜವಾಗಿಯೂ ನಾನು ಕಿಲಿಕ್ಯದ ತಾರ್ಸ ಪಟ್ಟಣದಲ್ಲಿ ಹುಟ್ಟಿದ ಒಬ್ಬ ಯೆಹೂದ್ಯನು; ಆದರೂ ಈ ಪಟ್ಟಣದಲ್ಲಿ ಗಮಲಿ ಯೇಲನ ಪಾದದ ಬಳಿಯಲ್ಲಿ ಬೆಳೆದವನಾಗಿದ್ದು ಪಿತೃಗಳ ನ್ಯಾಯಪ್ರಮಾಣದ ಸಂಪೂರ್ಣಕ್ರಮಕ್ಕನು ಸಾರವಾಗಿ ಶಿಕ್ಷಣ ಹೊಂದಿ ಈ ದಿನ ನೀವೆಲ್ಲರೂ ಹೇಗೋ ಹಾಗೇ ದೇವರ ಕಡೆಗೆ ಆಸಕ್ತಿಯುಳ್ಳ ವನಾಗಿದ

ಅಪೋಸ್ತಲರ ಕೃತ್ಯಗಳು 26:4

ನಾನು ಮೊದಲಿನಿಂದಲೂ ಯೆರೂಸಲೇಮಿನಲ್ಲಿರುವ ನನ್ನ ಸ್ವಂತ ಜನಾಂಗದವರ ಮಧ್ಯದಲ್ಲಿ ಬಾಲ್ಯದಿಂದ ನಾನು ಬದುಕಿದ ವಿಧಾನವು ಎಲ್ಲಾ ಯೆಹೂದ್ಯರಿಗೆ ತಿಳಿದದೆ.

ಅಪೋಸ್ತಲರ ಕೃತ್ಯಗಳು 26:9

ನಜರೇತಿನ ಯೇಸುವಿನ ಹೆಸರಿಗೆ ಪ್ರತಿಕೂಲವಾಗಿ ಅನೇಕ ಕಾರ್ಯಗಳನ್ನು ಮಾಡಲೇಬೇಕೆಂದು ನಾನು ನಿಜವಾಗಿ ಅಂದುಕೊಂಡಿದ್ದೆನು.

1 ಕೊರಿಂಥದವರಿಗೆ 15:9

ನಾನಂತೂ ಅಪೊಸ್ತಲರಲ್ಲಿ ಕನಿಷ್ಠನಷ್ಟೆ. ಯಾಕಂದರೆ ನಾನು ದೇವರ ಸಭೆಯನ್ನು ಹಿಂಸೆಪಡಿಸಿ ದ್ದರಿಂದ ಆಪೊಸ್ತಲನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ.

ಫಿಲಿಪ್ಪಿಯವರಿಗೆ 3:6

ಆಸಕ್ತಿಯನ್ನು ನೋಡಿದರೆ ನಾನು ಸಭೆಯ ಹಿಂಸಕನು, ನ್ಯಾಯಪ್ರಮಾಣದಲ್ಲಿ ಹೇಳಿರುವ ನೀತಿ ಯನ್ನು ನೋಡಿದರೆ ನಾನು ನಿರ್ದೋಷಿ.

1 ತಿಮೋಥೆಯ 1:13

ಮೊದಲು ದೇವದೂಷಕನೂ ಹಿಂಸಕನೂ ಕೇಡು ಮಾಡುವವನೂ ಆಗಿದ್ದ ನಾನು ಅವಿಶ್ವಾಸಿಯಾಗಿ ತಿಳಿಯದೆ ಹಾಗೆ ಮಾಡಿದ್ದರಿಂದ ನನ್ನ ಮೇಲೆ ಕರುಣೆ ಉಂಟಾಯಿತು.

Interlinear

Choose Theme