ಆದದರಿಂದ ನಾವು ಉಪವಾಸ ಮಾಡಿ ಇದಕ್ಕೋಸ್ಕರ ನಮ್ಮ ದೇವರನ್ನು ಬೇಡಿಕೊಂಡೆವು. ಆತನು ನಮ್ಮ ವಿಜ್ಞಾಪನೆಯನ್ನು ಕೇಳಿದನು.
Cross references
ಅಲ್ಲಿಂದ ನಿನ್ನ ದೇವರಾದ ಕರ್ತನನ್ನು ಹುಡುಕಿದರೆ ಆತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ಹುಡುಕಿದರೆ, ಆತ ನನ್ನು ಕಂಡುಕೊಳ್ಳುವಿ.
ಆದರೆ ಯೆಹೋವಾಹಾಜನು ಕರ್ತನನ್ನು ಬೇಡಿಕೊಂಡದ್ದರಿಂದ ಕರ್ತನು ಅವನ ಮೊರೆಯನ್ನು ಕೇಳಿದನು. ಯಾಕಂದರೆ ಅರಾಮ್ಯರ ಅರಸನು ಅವರನ್ನು ಬಾಧೆಪಡಿಸಿದ ಇಸ್ರಾಯೇಲಿನ ಬಾಧೆಯನ್ನು ಅವನು ಲಕ್ಷಿಸಿದನು.
ಇವರು ಅವರಿಗೆ ವಿರೋಧವಾಗಿ ಸಹಾಯಹೊಂದಿ ದ್ದರಿಂದ ಹಗ್ರೀಯರೂ ಅವರ ಸಂಗಡ ಕೂಡಿದ್ದ ವರೆಲ್ಲರೂ ಇವರ ಕೈಯಲ್ಲಿ ಒಪ್ಪಿಸಲ್ಪಟ್ಟರು. ಯಾಕಂದರೆ ಅವರು ಯುದ್ಧದಲ್ಲಿ ದೇವರಿಗೆ ಮೊರೆಯಿಟ್ಟು ಆತನಲ್ಲಿ ಭರವಸವಿಟ್ಟದ್ದರಿಂದ ಆತನು ಅವರ ಮನವಿಯನ್ನು ಕೇಳಿದನು.
ಅವನು ಬಾಧೆಯಲ್ಲಿರುವಾಗ ತನ್ನ ದೇವ ರಾದ ಕರ್ತನನ್ನು ಬೇಡಿಕೊಂಡದ್ದಲ್ಲದೆ ತನ್ನ ಪಿತೃಗಳ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು ಆತನಿಗೆ ಪ್ರಾರ್ಥನೆ ಮಾಡಿದನು.
ಆಗ ಆತನು ಕನಿಕರಪಟ್ಟು ಅವನ ಬಿನ್ನಹವನ್ನು ಕೇಳಿ ಯೆರೂಸ ಲೇಮಿಗೆ ತನ್ನ ರಾಜ್ಯಕ್ಕೆ ಅವನನ್ನು ತಿರಿಗಿ ಬರಮಾಡಿ ದನು. ಆಗ ಕರ್ತನೇ ದೇವರೆಂದು ಮನಸ್ಸೆಯು ತಿಳಿದುಕೊಂಡನು.
ನಾವು ಯೆರೂಸಲೇಮಿಗೆ ಹೋದ ಮೊದಲನೇ ತಿಂಗಳ ಹನ್ನೆರಡನೇ ದಿವಸದಲ್ಲಿ ಅಹವಾ ನದಿಯನ್ನು ಬಿಟ್ಟು ಹೊರಟೆವು. ನಮ್ಮ ದೇವರ ಹಸ್ತವು ನಮ್ಮ ಮೇಲೆ ಇದ್ದದ್ದರಿಂದ ಆತನು ಶತ್ರುವಿನ ಕೈಗೂ ಮಾರ್ಗದಲ್ಲಿ ಹೊಂಚಿಕೊಂಡವರ ಕೈಗೂ ನಮ್ಮನ್ನು ತಪ್ಪಿಸಿಬಿಟ್ಟನು.
ಅದೇ ತಿಂಗಳಿನ ಇಪ್ಪತ್ತನಾಲ್ಕನೇ ದಿವಸದಲ್ಲಿ ಇಸ್ರಾಯೇಲ್ ಮಕ್ಕಳು ಉಪವಾಸ ಮಾಡಿ ಗೋಣೀತಟ್ಟನ್ನು ಉಟ್ಟುಕೊಂಡು ತಮ್ಮ ಮೇಲೆ ಧೂಳನ್ನು ಹಾಕಿಕೊಂಡು ನೆರೆದುಬಂದರು.
ನಾನೂ ನನ್ನ ದಾಸಿಯರೂ ಹಾಗೆಯೇ ಉಪವಾಸ ಮಾಡುವೆವು. ಅನಂತರ ನಾನು ಆಜ್ಞೆ ವಿಾರಿ ಅರಸನ ಬಳಿಗೆ ಪ್ರವೇಶಿಸುವೆನು. ನಾನು ನಾಶವಾದರೆ ನಾಶವಾಗುವೆನು ಅಂದಳು.ಆಗ ಮೊರ್ದೆಕೈ ಹೊರಟು ಹೋಗಿ ಎಸ್ತೇರಳು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿದನು.
ನನ್ನ ಹೃದಯದಲ್ಲಿ ಅಪರಾಧವನ್ನು ನಾನು ಆಶಿಸಿದ್ದರೆ ಕರ್ತನು ನನ್ನ ಪ್ರಾರ್ಥನೆಯನ್ನು ಕೇಳುವದಿಲ್ಲ.
ಪೂರ್ಣಹೃದಯದಿಂದ ಕರ್ತನಲ್ಲಿ ಭರವಸವಿಡು; ನಿನ್ನ ಸ್ವಂತ ಬುದ್ಧಿಯ ಮೇಲೆ ಆಧಾರ ಮಾಡಿಕೊಳ್ಳಬೇಡ.
ಇದಲ್ಲದೆ ಕರ್ತನು ಐಗುಪ್ತ್ಯರನ್ನು ಹೊಡೆಯುವನು, ಹೊಡೆದು ಸ್ವಸ್ಥಮಾಡುವನು. ಅವರು ಕರ್ತನ ಕಡೆಗೆ ತಿರುಗಿಕೊಳ್ಳುವರು, ಆತನು ಅವರನ್ನು ಆಲೈಸಿ ಸ್ವಸ್ಥಮಾಡುವನು.
ಕರ್ತನು ಹೀಗೆ ಹೇಳುತ್ತಾನೆ--ನಿನ್ನ ಗಾಯವು ಗುಣಹೊಂದದು ನಿನ್ನ ಬಾಸುಂಡೆಯು ಅಘೋರ ವಾದದ್ದು.
ನೀನು ಅವನ ಕೈಯೊಳಗಿಂದ ತಪ್ಪಿಸಿಕೊಳ್ಳು ವದಿಲ್ಲ; ಆದರೆ ನಿಶ್ಚಯವಾಗಿ ಹಿಡಿಯಲ್ಪಟ್ಟು, ಅವನ ಕೈಯಲ್ಲಿ ಒಪ್ಪಿಸಲ್ಪಡುವಿ; ನಿನ್ನ ಕಣ್ಣುಗಳು ಬಾಬೆಲಿನ ಅರಸನ ಕಣ್ಣುಗಳನ್ನು ನೋಡುವವು, ಅವನು ಎದುರೆ ದುರಾಗಿ ಸಾಕ್ಷಾತ್ತಾಗಿ ನಿನ್ನ ಸಂಗಡ ಮಾತನಾಡು ವನು; ನೀನು ಬಾಬೆಲಿಗೆ ಹೋಗುವಿ.