Home Bibles ಎಜ್ರಾ 6:1 · ಕನ್ನಡ ಬೈಬಲ್
ಎಜ್ರಾ 6:1 · ಕನ್ನಡ ಬೈಬಲ್

ಆಗ ಅರಸನಾದ ದಾರ್ಯಾವೆಷನ ಅಪ್ಪ ಣೆಯ ಪ್ರಕಾರ ಅವರು ಪುಸ್ತಕ ಶಾಲೆ ಯಾಗಿದ್ದ ಬಾಬೆಲಿನ ಬೊಕ್ಕಸಗಳಲ್ಲಿ ಹುಡುಕಿದರು.

Cross references

ಎಜ್ರಾ 4:15

ನಿನ್ನ ತಂದೆಗಳ ವೃತಾಂತಗಳ ಪುಸ್ತಕದಲ್ಲಿ ವಿಚಾರಿಸಿದರೆ ಈ ಪಟ್ಟಣವು ತಿರಿಗಿ ಬೀಳುವುದೆಂದೂ ಅರಸುಗಳಿಗೂ ದೇಶಗಳಿಗೂ ನಷ್ಟಮಾಡುವಂಥ ದೆಂದೂ ಪೂರ್ವ ಕಾಲದಲ್ಲಿ ಅದರೊಳಗಿದ್ದವರು ತಿರಿಗಿ ಬಿದ್ದಿದ್ದಾರೆಂದೂ ಅದರ ನಿಮಿತ್ತ ಈ ಪಟ್ಟಣವು ನಾಶವಾಯಿತೆಂದೂ ನೀನು ವೃತಾಂತಗಳ ಪುಸ್ತಕದಲ್ಲಿ ಕಂಡು ತಿಳಿಯುವಿ.

ಎಜ್ರಾ 4:19

ಆಗ ನಾನು ಆಜ್ಞಾಪಿಸಿದ್ದರಿಂದ ಶೋಧಿಸಿ ನೋಡು ವಾಗ ಆ ಪಟ್ಟಣವು ಪೂರ್ವ ಕಾಲದಿಂದ ಅರಸುಗಳಿಗೆ ವಿರೋಧವಾಗಿ ತಿರುಗಿ ಬಿದ್ದಿತ್ತು; ಅದರಲ್ಲಿ ಕಲಹವೂ ದುರಾಲೋಚನೆಯೂ ಮಾಡಲ್ಪಟ್ಟಿತು;

ಎಜ್ರಾ 5:17

ಆದದರಿಂದ ಅರಸನಿಗೆ ಚೆನ್ನಾಗಿ ಕಾಣಿಸಿದರೆ ಯೆರೂಸಲೇಮಿನಲ್ಲಿರುವ ದೇವರ ಆಲಯವನ್ನು ಕಟ್ಟಲು ಅರಸನಾದ ಕೋರೆಷನು ಅಪ್ಪಣೆ ಮಾಡಿದ್ದು ಉಂಟೋ ಇಲ್ಲವೋ ಹುಡುಕು; ಬಾಬೆಲಿನಲ್ಲಿರುವ ಅರಸನ ಬೊಕ್ಕಸದ ಮನೆಯಲ್ಲಿ ವಿಚಾರಿಸಲ್ಪಡಲಿ. ತರುವಾಯ ಅರಸನು ಈ ಕಾರ್ಯಕ್ಕೋಸ್ಕರ ತನ್ನ ಚಿತ್ತವೇನೆಂದು ನಮಗೆ ತಿಳಿಸಲಿ.

ಯೋಬ 29:16

ದರಿದ್ರರಿಗೆ ನಾನು ತಂದೆಯಾಗಿದ್ದೆನು; ನಾನರಿಯದವನ ವ್ಯಾಜ್ಯವನ್ನು ಪರಿಶೋಧಿಸಿದೆನು.

ಕೀರ್ತನೆಗಳು 40:7

ಆಗ ನಾನು--ಇಗೋ, ನಾನು ಇದ್ದೇನೆ; ಪುಸ್ತಕದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದದೆ.

ಸಾಮೇತಿಗಳು 25:2

ವಿಷಯವನ್ನು ರಹಸ್ಯ ಮಾಡುವದು ದೇವರ ಮಹಿಮೆ; ಅರಸರ ಘನತೆಯು ವಿಷಯವನ್ನು ಶೋಧಿಸುವದು.

ಯೆರೆಮಿಯ 36:2

ಆದರೆ ಕರ್ತನು ಪ್ರವಾದಿಯಾದ ಯೆರೆವಿಾಯನಿಂದ ಹೇಳಿಸಿದ ವಾಕ್ಯಗಳಿಗೆ ಅವನೂ ಅವನ ಸೇವಕರೂ ದೇಶದ ಜನರೂ ಕಿವಿಗೊಡಲಿಲ್ಲ.

ಯೆರೆಮಿಯ 36:20

ಅರಸನಾದ ನನ್ನೊ ಡೆಯನೇ, ನನ್ನ ವಿಜ್ಞಾಪನೆ ನಿನ್ನ ಮುಂದೆ ಅಂಗೀ ಕಾರವಾಗಲಿ, ಲೇಖಕನಾದ ಯೋನಾತಾನನ ಮನೆ ಯಲ್ಲಿ ನಾನು ಸಾಯದ ಹಾಗೆ ನನ್ನನ್ನು ತಿರುಗಿ ಕಳುಹಿಸಬೇಡ ಅಂದನುಆಗ ಅರಸನಾದ ಚಿದ್ಕೀ ಯನು ಯೆರೆವಿಾಯನನ್ನು ಸೆರೆಮನೆಯ ಅಂಗಳದಲ್ಲಿ ಇರಿಸಬೇಕೆಂದೂ ಪಟ್ಟಣದಲ್ಲಿರುವ ರೊಟ್ಟಿಯೆಲ್ಲಾ ಮುಗಿದು ಹೋಗುವ ವರೆಗೆ ಅವನಿಗೆ ರೊಟ್ಟಿಗಾರರ ಅಂಗಡಿಯಿಂದ ದಿನಕ್ಕೆ ಒಂದು ತುಂಡು ರೊಟ್ಟಿಕೊಡ ಬೇಕೆಂದೂ ಆಜ್ಞಾಪಿಸಿದನು; ಹಾಗೆಯೇ ಯೆರೆವಿಾ ಯನು ಸೆರೆಮನೆಯ ಅಂಗಳದಲ್ಲಿ ವಾಸಿಸಿದನು.

ಯೆಹೆಜ್ಕೇಲ 2:9

ನಾನು ನೋಡಿದಾಗ ಇಗೋ, ಅದರಲ್ಲಿ ಒಂದು ಪುಸ್ತಕದ ಸುರಳಿ ಇತ್ತು.ಆತನು ಅದನ್ನು ನನ್ನ ಮುಂದೆ ಹರಡಿದನು; ಅದರ ಒಳಗಡೆಯೂ ಹೊರಗಡೆಯೂ ಬರಹವು ಇತ್ತು. ಆ ಬರಹವೇನಂದರೆ--ಗೋಳಾಟವೂ ಮೂಲುಗುವಿಕೆಯೂ ಸಂಕಟಗಳೂ ಇವೆ ಎಂಬದೇ.

ಯೆಹೆಜ್ಕೇಲ 3:1

ಇದಾದ ಮೇಲೆ ಆತನು ನನಗೆ--ಮನುಷ್ಯ ಪುತ್ರನೇ, ನಿನಗೆ ಸಿಕ್ಕಿದ್ದನ್ನು ತಿನ್ನು; ಈ ಸುರಳಿಯನ್ನು ತಿಂದು, ಹೋಗಿ ಇಸ್ರಾಯೇಲಿನ ಮನೆತನದವರ ಸಂಗಡ ಮಾತನಾಡು ಅಂದನು.

ಪ್ರಕಟನೆ 5:1

ಸಿಂಹಾಸನದ ಮೇಲೆ ಕೂತಿದ್ದಾತನ ಬಲಗೈಯಲ್ಲಿ ಒಂದು ಪುಸ್ತಕವನ್ನು ಕಂಡೆನು; ಅದರ ಒಳಗೂ ಹಿಂದಿನ ಭಾಗದ ಮೇಲೆಯೂ ಬರೆದಿತ್ತು; ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು.

Interlinear

Choose Theme