ಅವರು ಯೆರೂಸಲೇಮಿನಲ್ಲಿದ್ದ ದೇವರ ಆಲಯಕ್ಕೆ ಬಂದ ಎರಡನೇ ವರುಷದ ಎರ ಡನೇ ತಿಂಗಳಲ್ಲಿ ಶೆಯಲ್ತಿಯೇಲನ ಮಗನಾದ ಜೆರುಬ್ಬಾ ಬೆಲನೂ ಯೋಚಾದಾಕನ ಮಗನಾದ ಯೇಷೂ ವನೂ ಉಳಿದ ಅವರ ಸಹೋದರರಾದ ಯಾಜಕರೂ ಲೇವಿಯರೂ ಸೆರೆಯಿಂದ ಯೆರೂಸಲೇಮಿಗೆ ಬಂದ ಎಲ್ಲರೂ ಪ್ರಾರಂಭಿಸಿ ಇಪ್ಪತ್ತು ವರುಷ ಪ್ರಾಯಕ್ಕೆ ಹೆಚ್ಚಿದ ಲೇವಿಯರನ್ನು ಕರ್ತನ ಆಲಯದ ಕೆಲಸ ನಡಿಸುವದಕ್ಕೆ ಇಟ್ಟರು.
Cross references
ಮೂವತ್ತು ವರುಷವಾದವರನ್ನೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ವರನ್ನೂ ಅಂದರೆ ಐವತ್ತು ವರುಷದ ವರೆಗೆ ಸಭೆಯ ಗುಡಾರದಲ್ಲಿ ಕೆಲಸ ಮಾಡುವದಕ್ಕೆ ಸೈನ್ಯದಲ್ಲಿ ಸೇರುವವ ರನ್ನೆಲ್ಲಾ ಎಣಿಸಿ ಕೆಹಾತನ ಮಕ್ಕಳ ಲೆಕ್ಕವನ್ನು ತಕ್ಕೊಳ್ಳಿರಿ.
ಯೆಕೊನ್ಯನ ಮಕ್ಕಳು -- ಅಸ್ಸೀರನು; ಅವನ ಮಗನು ಶೆಯಲ್ತೀಯೇಲನು,
ಇವರಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಕರ್ತನ ಮನೆಯ ಕೆಲಸವನ್ನು ನಡಿಸುವವರಾಗಿದ್ದರು; ಆರು ಸಾವಿರ ಮಂದಿ ಪಾರುಪತ್ಯಗಾರರೂ ನ್ಯಾಯಾಧಿ ಪತಿಗಳೂ ಆಗಿದ್ದರು.
ಇವರು ತಮ್ಮ ಪಿತೃಗಳ ವಂಶದ ಪ್ರಕಾರವಾಗಿ ಲೇವಿಯ ಕುಮಾರರಾಗಿದ್ದರು; ಇವರು ತಮ್ಮ ಹೆಸರು ಗಳಿಂದಲೂ ತಮ್ಮ ತಲೆಗಳಿಂದಲೂ ಎಣಿಸಲ್ಪಟ್ಟಿದ್ದ ತಮ್ಮ ಪಿತೃಗಳಲ್ಲಿ ಮುಖ್ಯಸ್ಥರಾಗಿದ್ದರು; ಇಪ್ಪತ್ತು ವರುಷ ಪ್ರಾಯದವರು ಮೊದಲುಗೊಂಡು ಕರ್ತನ ಮನೆಯ ಸೇವೆಗೋಸ್ಕರ ಕೆಲಸ ಮಾಡಿದರು.
ಜೆರುಬ್ಬಾಬೆಲನ ಸಂಗಡ ಬಂದ ಸೀಮೆಗಳ ಮಕ್ಕಳು ಯಾರಂದರೆ -- ಯೆಷೂವನು, ನೆಹೆವಿಾಯನು, ಸೆರಾಯನು, ರೆಲಾಯನು ಮೊರ್ದೆಕಾಯನು, ಬಿಲ್ಷಾ ನನು, ಮಿಸ್ಪಾರನು, ಬಿಗ್ವಾಯನು, ರೆಹೂಮನು, ಬಾಣನು, ಇಸ್ರಾಯೇಲ್ ಜನರಾದ ಮನುಷ್ಯರ ಲೆಕ್ಕವೇನಂದರೆ--
ಆದರೆ ಜೆರುಬ್ಬಾ ಬೆಲನೂ ಯೇಷೂವನೂ ಮಿಕ್ಕಾದ ಇಸ್ರಾಯೇಲಿನ ಪಿತೃಗಳಲ್ಲಿ ಮುಖ್ಯಸ್ಥರೂ ಅವರಿಗೆ--ನಮ್ಮ ದೇವರಿಗೆ ಆಲಯವನ್ನು ಕಟ್ಟುವದಕ್ಕೆ ನಮಗೂ ನಿಮಗೂ ಏನು? ಪಾರಸಿಯರ ಅರಸನಾದ ಕೋರೆಷನೆಂಬ ಅರಸನು ನಮಗೆ ಆಜ್ಞಾಪಿಸಿದ ಹಾಗೆ ನಾವು ಇಸ್ರಾ ಯೇಲ್ ದೇವರಾಗಿರುವ ಕರ್ತನಿಗೆ ಅದನ್ನು ಕಟ್ಟು ವೆವು ಅಂದರು.
ಆಗ ಯೆರೂಸಲೇಮಿನಲ್ಲಿರುವ ದೇವರ ಆಲ ಯದ ಕೆಲಸವು ನಿಲ್ಲಿಸಲ್ಪಟ್ಟಿತು. ಪಾರಸಿಯರ ಅರಸ ನಾದ ದಾರ್ಯಾವೆಷನ ಆಳ್ವಿಕೆಯ ಎರಡನೇ ವರುಷದ ವರೆಗೆ ನಿಲ್ಲಿಸಲ್ಪಟ್ಟಿತು.
ಆಗ ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲನೂ ಯೋಚಾದಾಕನ ಮಗ ನಾದ ಯೇಷೂವನೂ ಎದ್ದು ಯೆರೂಸಲೇಮಿನಲ್ಲಿ ರುವ ದೇವರ ಆಲಯವನ್ನು ಕಟ್ಟಿಸಲು ಪ್ರಾರಂಭಿಸಿ ದರು; ಅವರಿಗೆ ಸಹಾಯಕರಾಗಿ ದೇವರ ಪ್ರವಾದಿಗಳು ಅವರ ಸಂಗಡ ಇದ್ದರು.
ಯಾಜಕರ ಕುಮಾರರಲ್ಲಿ ಅನ್ಯಸ್ತ್ರೀಯರನ್ನು ತಕ್ಕೊಂಡವರಾಗಿ ಕಾಣಿಸಲ್ಪಟ್ಟವರು ಯಾರಂದರೆ-- ಯೋಚಾದಾಕನ ಮಗನಾದ ಯೇಷೊವನ ಕುಮಾರ ರಲ್ಲಿಯೂ ಅವನ ಸಹೋದರರಲ್ಲಿಯೂ ಮಾಸೇ ಯ, ಎಲಿಯೇಜರ, ಯಾರೀಬ, ಗೆದಲ್ಯ.
ಅರಸನಾದ ದಾರ್ಯಾವೆಷನ ಎರಡನೇ ವರುಷದ, ಆರನೇ ತಿಂಗಳಿನ ಮೊದಲನೇ ದಿನದಲ್ಲಿ ಕರ್ತನ ವಾಕ್ಯವು ಪ್ರವಾದಿಯಾದ ಹಗ್ಗಾಯನ ಕೈಯಿಂದ ಯೆಹೂದದ ಅಧಿಪತಿಯಾದ ಶೆಯಲ್ತಿ ಯೇಲನ ಮಗನಾದ ಜೆರುಬ್ಬಾಬೆಲನಿಗೂ ಪ್ರಧಾನ ಯಾಜಕನಾದ ಯೆಹೋಚಾದಾಕನ ಮಗನಾದ ಯೆಹೋಶುವನಿಗೂ ಉಂಟಾಯಿತು.
ಜೆರುಬ್ಬಾಬೆಲನ ಕೈಗಳು ಈ ಮನೆಯ ಅಸ್ತಿವಾರವನ್ನು ಹಾಕಿವೆ, ಅವನ ಕೈಗಳು ಸಹ ಅದನ್ನು ಪೂರೈಸುವವು; ಸೈನ್ಯಗಳ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ತಿಳಿಯುವಿರಿ.