Home Bibles ☰ Books ಎಜ್ರಾ 3:6 · ಕನ್ನಡ ಬೈಬಲ್
ಎಜ್ರಾ 3:6 · ಕನ್ನಡ ಬೈಬಲ್

ಏಳನೇಯ ತಿಂಗಳಿನ ಮೊದಲನೇ ದಿವಸದಲ್ಲಿ ಕರ್ತ ನಿಗೆ ದಹನಬಲಿಗಳನ್ನು ಅರ್ಪಿಸಲು ಪ್ರಾರಂಭಿಸಿದರು. ಆದರೆ ಕರ್ತನ ಮಂದಿರದ ಅಸ್ತಿವಾರವು ಇನ್ನೂ ಹಾಕಲ್ಪಟ್ಟಿರಲಿಲ್ಲ.

Cross references

ಲೇವ್ಯಕಾಂಡ 23:24

ಇಸ್ರಾಯೇಲ್‌ ಮಕ್ಕಳೊಂದಿಗೆ ಮಾತ ನಾಡಿ--ಏಳನೆಯ ತಿಂಗಳಿನ ಮೊದಲನೆಯ ದಿವಸ ದಲ್ಲಿ ನಿಮಗೆ ತುತೂರಿಗಳನ್ನು ಊದುವ ಜ್ಞಾಪಕಾರ್ಥ ವಾದ ಸಬ್ಬತ್ತೂ ಪರಿಶುದ್ಧ ಸಭೆಯ ಕೂಟವೂ ಇರ ಬೇಕು.

ಲೇವ್ಯಕಾಂಡ 23:25

ನೀವು ಅದರಲ್ಲಿ ಕಷ್ಟಕರವಾದ ಕೆಲಸವನ್ನು ಮಾಡಬಾರದು. ಆದರೆ ಬೆಂಕಿಯಿಂದ ಸಮರ್ಪಿಸುವ ಕಾಣಿಕೆಯನ್ನು ಕರ್ತನಿಗೆ ಅರ್ಪಿಸಬೇಕು ಎಂದು ಹೇಳಿದನು.

ಅಂಕೆಗಳ ಪುಸ್ತಕ 29:1

ಏಳನೇ ತಿಂಗಳಿನ ಮೊದಲನೇ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿರಬೇಕು; ಕಷ್ಟಕರವಾದ ಕೆಲಸವನ್ನು ನೀವು ಮಾಡಬಾರದು; ಅದು ನಿಮಗೆ ತುತೂರಿಗಳನ್ನು ಊದುವ ದಿವಸ ವಾಗಿರುವದು.

ಅಂಕೆಗಳ ಪುಸ್ತಕ 29:2

ನೀವು ಕರ್ತನಿಗೆ ಸುವಾಸನೆಗಾಗಿ ದೋಷವಿಲ್ಲದ ಒಂದು ಎಳೇ ಹೋರಿಯನ್ನೂ ಒಂದು ಟಗರನ್ನೂ ವರುಷದ ಏಳು ಕುರಿಮರಿಗಳನ್ನೂ ದಹನ ಬಲಿಯಾಗಿ ಅರ್ಪಿಸಬೇಕು.

Interlinear

Choose Theme