Home Bibles ಎಜ್ರಾ 2:61 · ಕನ್ನಡ ಬೈಬಲ್
ಎಜ್ರಾ 2:61 · ಕನ್ನಡ ಬೈಬಲ್

ಇದ ಲ್ಲದೆ ಯಾಜಕರ ಮಕ್ಕಳಲ್ಲಿ ಹಬಯ್ಯನ ಮಕ್ಕಳೂ ಹಕ್ಕೋಜ್‌ನ ಮಕ್ಕಳೂ ಗಿಲ್ಯಾದ್ಯನಾದ ಬರ್ಜಿಲ್ಲೈಯ ಕುಮಾರ್ತೆಯಲ್ಲಿ ಒಬ್ಬಳನ್ನು ಹೆಂಡತಿಯಾಗಿ ತಕ್ಕೊಂಡು ಅವಳ ಹೆಸರಿನಿಂದ ಕರೆಯಲ್ಪಟ್ಟ ಬರ್ಜಿಲ್ಲೈಯ ಮಕ್ಕಳೂ.

Cross references

2 ಸಮುವೇಲ 17:27

ದಾವೀದನು ಮಹನಯಿಮಿಗೆ ಬಂದಾಗ ಏನಾ ಯಿತಂದರೆ, ಅಮ್ಮೋನನ ಮಕ್ಕಳ ರಬ್ಬಾ ಪಟ್ಟಣದ ನಾಹಾಷನ ಮಗನಾದ ಶೋಬಿಯೂ ಲೋದೆಬಾ ರಿನ ಊರಿನವನಾಗಿರುವ ಅವ್ಮೆಾಯೇಲನ ಮಗನಾದ ಮಾಕೀರ್‌

2 ಸಮುವೇಲ 19:31

ಇದಲ್ಲದೆ ಗಿಲ್ಯಾದ್ಯನಾದ ಬರ್ಜಿಲ್ಲೈಯು ಅರಸ ನನ್ನು ಎನ್‌ರೋಗೆಲೀಮಿನಿಂದ ಯೊರ್ದನನ್ನು ದಾಟಿ ಸಲು ಬಂದನು. ಈ ಬರ್ಜಿಲ್ಲೈಯು ಎಂಭತ್ತು ವರುಷ ದವನಾಗಿ ಮಹಾವೃದ್ಧನಾಗಿದ್ದನು.

1 ಅರಸುಗಳು 2:7

ಆದರೆ ನೀನು ಗಿಲ್ಯಾದ್ಯನಾದ ಬರ್ಜಿಲ್ಲೈಯನ ಮಕ್ಕಳಿಗೆ ಕೃಪೆ ಮಾಡು; ಅವರು ನಿನ್ನ ಮೇಜಿನಲ್ಲಿ ಊಟಮಾಡುವವರಾಗಿ ನಿನ್ನ ಸಂಗಡ ಇರಲಿ. ಯಾಕಂದರೆ ನಾನು ನಿನ್ನ ಸಹೋದರನಾದ ಅಬ್ಷಾಲೋಮನ ಮುಂದೆ ಓಡಿಹೋದಾಗ ಅವರು ಹಾಗೆಯೇ ನನ್ನ ಹತ್ತಿರಕ್ಕೆ ಬಂದರು.

1 ದಿನವೃತ್ತಾಂತ 24:10

ಏಳನೆಯದು ಹಕ್ಕೋಚನಿಗೆ, ಎಂಟನೆಯದು ಅಬೀಯನಿಗೆ,

ನೆಹೆಮ್ಯ 3:4

ಇವರ ತರುವಾಯ ಹಕ್ಕೋಚನ ಮಗನಾದ ಊರೀಯನ ಮಗನಾದ ಮೆರೇಮೋತನು ಹಳೇದನ್ನು ಭದ್ರಪಡಿಸಿದನು. ಇವರ ತರುವಾಯ ಮೆಷೇಜಬೇಲನ ಮಗನಾದ ಬೆರೆಕ್ಯನ ಮಗನಾದ ಮೆಷುಲ್ಲಾಮನು ಹಳೇದನ್ನು ಭದ್ರಪಡಿಸಿದನು; ಇವರ ತರುವಾಯ ಬಾಣನ ಮಗನಾದ ಚಾದೋಕನು ಭದ್ರ ಪಡಿಸಿದನು.

ನೆಹೆಮ್ಯ 7:63

ಯಾಜಕರಲ್ಲಿ -- ಹೋಬಾಯನ ಮಕ್ಕಳೂ ಬರ್ಜಿಲ್ಲೈಯನ ವಂಶಸ್ಥನಾದ ಹಕ್ಕೋಚನ ಮಕ್ಕಳೂ; ಇವನು ಗಿಲ್ಯಾದ್ಯನಾದ ಬರ್ಜಿಲ್ಲೈಯನ ಕುಮಾರ್ತೆಯರಲ್ಲಿ ಒಬ್ಬಳನ್ನು ತಕ್ಕೊಂಡ ಕಾರಣ ಅವರ ಹೆಸರಿನಿಂದ ಕರೆಯಲ್ಪಟ್ಟವನಾದನು.

Interlinear

Choose Theme