Cross references
ಲೇವಿಯರನ್ನು ಆರೋನನಿಗೂ ಅವನ ಕುಮಾರರಿಗೂ ಕೊಡಬೇಕು; ಅವರು ಇಸ್ರಾಯೇಲ್ ಮಕ್ಕಳೊಳಗಿಂದ ಅವನಿಗೆ ಪೂರ್ಣವಾಗಿ ಕೊಡಲ್ಪಟ್ಟ ವರೇ.
ಆದರೆ ತಮ್ಮ ಸ್ವಾಸ್ತ್ಯಗಳಲ್ಲಿ ತಮ್ಮ ಪಟ್ಟಣಗಳಲ್ಲಿ ಮೊದಲು ವಾಸ ವಾಗಿದ್ದವರು ಇಸ್ರಾಯೇಲ್ಯರೂ ಯಾಜಕರೂ ಲೇವಿ ಯರೂ ನೆತಿನಿಯರೂ.
ನೆತನಿಮಿನವರೂ ಸೊಲೊಮೋನನ ಸೇವಕ ಮಕ್ಕಳೂ--ಮುನ್ನೂರ ತೊಂಭತ್ತೆರಡು ಮಂದಿಯು.
ಇದಲ್ಲದೆ ಇವನ ಸಂಗಡ ಇಸ್ರಾಯೇಲ್ ಮಕ್ಕಳಲ್ಲಿಯೂ ಯಾಜಕರಲ್ಲಿಯೂ ಲೇವಿಯರಲ್ಲಿಯೂ ಹಾಡುಗಾರರಲ್ಲಿಯೂ ದ್ವಾರಪಾಲಕರಲ್ಲಿಯೂ ನೆತಿನಿ ಯರಲ್ಲಿಯೂ ಕೆಲವರು ಅರ್ತಷಸ್ತನ ಆಳಿಕೆಯು ಏಳನೇ ವರುಷದಲ್ಲಿ ಯೆರೂಸಲೇಮಿಗೆ ಹೋದರು.
ಎಲ್ನಾತಾನನು ಎಂಬ ಗ್ರಹಿಕೆ ಯುಳ್ಳವರನ್ನೂ ಕರೇ ಕಳುಹಿಸಿ ಕಸಿಪ್ಯದಲ್ಲಿರುವ ಅಧಿ ಪತಿಯಾದ ಇದ್ದೋನನ ಬಳಿಗೆ ಅಪ್ಪಣೆಕೊಟ್ಟು ಕಳುಹಿಸಿ ಅವರು ನಮ್ಮ ದೇವರ ಆಲಯಕ್ಕೊಸ್ಕರ ಸೇವಕರನ್ನು ತರುವ ಹಾಗೆ ಅವರು ಕಾಸಿಪ್ಯವೆಂಬ ಸ್ಥಳದಲ್ಲಿರುವ ಇದ್ದೋವಿಗೂ ಅವನ ಸಹೋದರನಾದ ನೆತಿನಿಯರಿಗೂ ಹೇಳಬೇಕಾದದ್ದನ್ನು ತಿಳಿಸಿದೆನು.
ದಾವೀ ದನೂ ಪ್ರಧಾನರೂ ಲೇವಿಯರನ್ನು ಸೇವಿಸುವದಕ್ಕೆ ನೇಮಿಸಿದ ನೆತಿನಿಯರಲ್ಲಿ ಇನ್ನೂರ ಇಪ್ಪತ್ತು ಮಂದಿ ನೆತಿನಿಯರನ್ನೂ ನಮ್ಮ ಬಳಿಗೆ ಕರಕೊಂಡು ಬಂದರು. ಅವರೆಲ್ಲರೂ ಹೆಸರು ಹೆಸರಾಗಿ ಬರೆಯಲ್ಪಟ್ಟಿದ್ದರು.
ಓಫೇಲಿನಲ್ಲಿ ವಾಸವಾಗಿರುವ ನೆತಿನಿಯರು ಮೂಡಣ ಪಾರ್ಶ್ವವಾಗಿರುವ ನೀರು ಬಾಗಲಿಗೆದುರಾದ ಹೊರಪಾರ್ಶ್ವದಲ್ಲಿರುವ ಗೋಪುರದ ವರೆಗೂ ಭದ್ರ ಪಡಿಸಿದರು.
ನೆತಿನಿಯರು: ಜೀಹನ ಮಕ್ಕಳು, ಹಸೂಫನ ಮಕ್ಕಳು, ಟಬ್ಬಾವೋತನ ಮಕ್ಕಳು,
ಜನರಲ್ಲಿ ಉಳಿದವರಾದ ಯಾಜಕರೂ ಲೇವಿ ಯರೂ ದ್ವಾರಪಾಲಕರೂ ಹಾಡುಗಾರರೂ ನೆತಿನಿ ಯರೂ, ದೇವರ ನ್ಯಾಯಪ್ರಮಾಣದ ಪ್ರಕಾರವಾಗಿ ಆ ದೇಶಗಳ ಜನರೊಳಗಿಂದ ತಮ್ಮನ್ನು ಪ್ರತ್ಯೇಕಿಸಿ ಕೊಂಡವರೆಲ್ಲರೂ ಅವರ ಹೆಂಡತಿಯರೂ ಕುಮಾ ರರೂ ಕುಮಾರ್ತೆಯರೂ ತಿಳಿವಳಿಕೆಯೂ ಗ್ರಹಿಕೆಯೂ ಉಳ್ಳವರೆಲ್ಲರೂ;
ಆದರೆ ನೆತಿನಿಯರು ಓಫೇಲಿನಲ್ಲಿ ವಾಸವಾಗಿದ್ದರು. ಚೀಹನೂ ಗಿಷ್ಪನೂ ನೆತಿನಿಯರ ಮೇಲಿದ್ದರು;