Cross references
ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬವುಗಳೂ
ಈ ಅಬಾರೀಮ್ ಪರ್ವತದ ಮೇಲೆ ಮೋವಾಬ್ ದೇಶದ ಲ್ಲಿಯೂ ಯೆರಿಕೋವಿಗೆ ಎದುರಾಗಿಯೂ ಇರುವ ನೆಬೋ ಬೆಟ್ಟದ ಮೇಲೆ ಏರಿಹೋಗು; ನಾನು ಇಸ್ರಾ ಯೇಲ್ ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಡುವ ಕಾನಾನ್ ದೇಶವನ್ನು ನೋಡು,
ನೆಬೋನ ಕುಮಾರರಲ್ಲಿ ಯೆಗೀಯೇಲ್, ಮತ್ತಿತ್ಯ, ಜಾಬಾದ್, ಜೆಬೀನ, ಯದ್ದೈ, ಯೋವೇಲ್, ಬೆನಾಯ.ಇವರೆಲ್ಲರೂ ಅನ್ಯಸ್ತ್ರೀಯರನ್ನು ತಕ್ಕೊಂಡ ವರಾಗಿದ್ದರು; ಇವರಲ್ಲಿ ಕೆಲವರು ತಮಗೆ ಮಕ್ಕಳನ್ನು ಹೆತ್ತ ಸ್ತ್ರೀಯರನ್ನು ತಕ್ಕೊಂಡವರಾಗಿದ್ದರು.
ಮತ್ತೊಂದು ನೆಬೋ ವಿನವರು ಐವತ್ತೆರಡು ಮಂದಿಯು.
ಬಯಿತ್ ಮತ್ತು ದೀಬೋನಿನವನು ಎತ್ತರವಾದ ಸ್ಥಳಗಳಿಗೆ ಅಳುವದಕ್ಕಾಗಿ ಹೋಗಿದ್ದಾನೆ; ನೆಬೋವಿಗೋಸ್ಕರವೂ ಮೇದೆಬಕ್ಕೋಸ್ಕರವೂ ಮೋವಾಬು ಗೋಳಾಡುತ್ತದೆ. ಅವರೆಲ್ಲರ ತಲೆಗಳೆಲ್ಲಾ ಬೋಳಾಗಿರುವವು, ಪ್ರತಿ ಯೊಬ್ಬರ ಗಡ್ಡವು ಕತ್ತರಿಸಿಹಾಕಲ್ಪಡುವದು.
ಅಮ್ಮೋನ್ಯರ ವಿಷಯವಾಗಿ ಕರ್ತನು ಹೀಗೆ ಹೇಳುತ್ತಾನೆ--ಇಸ್ರಾಯೇಲಿಗೆ ಕುಮಾರರಿ ಲ್ಲವೋ? ಅವನಿಗೆ ಬಾಧ್ಯನಿಲ್ಲವೋ? ಅವರ ಅರಸನು ಗಾದನ್ನು ಬಾಧ್ಯವಾಗಿ ತಕ್ಕೊಳ್ಳುವದು ಯಾಕೆ? ಅವನ ಜನರು ಅದರ ಪಟ್ಟಣಗಳಲ್ಲಿ ವಾಸಮಾಡುವದು ಯಾಕೆ?
ಇಗೋ, ಅವನು ಹದ್ದಿನಂತೆ ಹಾರುವನು; ಬೊಚ್ರದ ಮೇಲೆ ತನ್ನ ರೆಕ್ಕೆಗಳನ್ನು ಚಾಚುವನು; ಎದೋಮಿನ ಪರಾಕ್ರಮ ಶಾಲಿಗಳ ಹೃದಯವು ಆ ದಿವಸದಲ್ಲಿ ಪ್ರಸವ ವೇದನೆಯುಳ್ಳ ಸ್ತ್ರೀಯ ಹೃದಯದ ಹಾಗೆ ಇರುವದು.