ಇದಲ್ಲದೆ ಆತನು ಮಹಾಶಬ್ದದಿಂದ ನನ್ನ ಕಿವಿಗಳಲ್ಲಿ ಕೂಗಿ ಹೇಳಿದ್ದೇನಂದರೆ-- ಪಟ್ಟಣದಲ್ಲಿ ವಿಚಾರಣೆ ಹೊಂದಿದ ಪ್ರತಿಯೊಬ್ಬರೂ ಕೈಯಲ್ಲಿ ನಾಶಮಾಡುವ ಆಯುಧಗಳನ್ನು ಹಿಡಿದು ಕೊಂಡು ಸವಿಾಪಕ್ಕೆ ಬನ್ನಿರಿ ಅಂದಾಗ
Cross references
ಕರ್ತನು ಐಗುಪ್ತ್ಯರನ್ನು ಸಂಹರಿ ಸುವದಕ್ಕಾಗಿ ಹಾದುಹೋಗುವನು; ಆತನು ಮೇಲಿನ ಅಡ್ಡಗಂಬದ ಮೇಲೂ ಪಕ್ಕದ ಎರಡು ನಿಲುವು ಕಂಬಗಳ ಮೇಲೂ ರಕ್ತವನ್ನು ನೋಡಿದಾಗ ಸಂಹಾರಕನು ನಿಮ್ಮ ಮನೆಗಳೊಳಗೆ ಬಂದು ನಿಮ್ಮನ್ನು ಸಂಹಾರಮಾಡ ದಂತೆ ನಿಮ್ಮ ಬಾಗಿಲುಗಳನ್ನು ದಾಟಿ ಹೋಗುವನು.
ಅವರು ಬಲಿಗ ಳನ್ನೂ ದಹನಬಲಿಗಳನ್ನೂ ಅರ್ಪಿಸಲು ಒಳಗೆ ಪ್ರವೇ ಶಿಸಿದ ತರುವಾಯ ಯೇಹುವು ಹೊರಗೆ ಎಂಭತ್ತು ಮಂದಿಯನ್ನು ಇರಿಸಿಕೊಂಡು ಅವರಿಗೆ--ನಾನು ನಿಮ್ಮ ಕೈಗೆ ಒಪ್ಪಿಸಿದ ಜನರಲ್ಲಿ ಯಾವನಾದರೂ ತಪ್ಪಿಸಿಕೊಂಡು ಹೋದರೆ ಅವನ ಪ್ರಾಣಕ್ಕೆ ನಿಮ್ಮ ಪ್ರಾಣ ಈಡಾಗಿ ರುವದು ಅಂದನು.
ಇದ ಲ್ಲದೆ ಯೆರೂಸಲೇಮನ್ನು ನಾಶಮಾಡುವದಕ್ಕೆ ದೇವರು ದೂತನನ್ನು ಕಳುಹಿಸಿದನು. ಅವನು ನಾಶಮಾಡು ವದನ್ನು ಕರ್ತನು ನೋಡಿ ಆ ಕೇಡಿಗೋಸ್ಕರ ಪಶ್ಚಾ ತ್ತಾಪಪಟ್ಟು ನಾಶಮಾಡುವ ದೂತನಿಗೆ--ಸಾಕು; ನಿನ್ನ ಕೈಯನ್ನು ಹಿಂದೆಗೆ ಅಂದನು. ಆದರೆ ಕರ್ತನ ದೂತನು ಯೆಬೂಸಿಯನಾದ ಒರ್ನಾನನ ಕಣದ ಬಳಿಯಲ್ಲಿ ನಿಂತಿದ್ದನು.
ಆಗ ನಾನು -- ಯಾರನ್ನು ಕಳುಹಿಸಲಿ; ಯಾವನು ನಮ ಗೋಸ್ಕರ ಹೋಗುವನು ಎಂಬ ಕರ್ತನ ನುಡಿಯನ್ನು ಸಹ ಕೇಳಿ -- ನಾನು ಇದ್ದೇನೆ; ನನ್ನನ್ನು ಕಳುಹಿಸು ಅಂದೆನು.
ನಾನು ಅವನನ್ನು ಭ್ರಷ್ಠಜನರಿಗೆ ವಿರುದ್ಧವಾಗಿ ಕಳುಹಿಸಿ ನನ್ನ ಕೋಪಕ್ಕೆ ಗುರಿಯಾದ (ನನ್ನ) ಪ್ರಜೆಯನ್ನು ಸೂರೆ ಮಾಡಿ ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದು ಹಾಕಬೇಕೆಂದು ಅಪ್ಪಣೆ ಕೊಡು ವೆನು.
ಚೀಯೋನಿನ ಕಡೆಗೆ ಧ್ವಜವನ್ನೆತ್ತಿರಿ; ಹಿಂದಕ್ಕೆ ಹೋಗಿರಿ, ನಿಲ್ಲಬೇಡಿರಿ; ನಾನು ಉತ್ತರದಿಂದ ಕೇಡನ್ನೂ ದೊಡ್ಡ ನಾಶನವನ್ನೂ ತರುತ್ತೇನೆ.
ನಾನು ಆಲಯದೊಳಗಿಂದ ನನ್ನ ಸಂಗಡ ಮಾತನಾಡುವದನ್ನು ಕೇಳಿದೆನು; ಆ ಪುರುಷನು ನನ್ನ ಬಳಿಯಲ್ಲಿಯೇ ನಿಂತಿ ದ್ದನು.
ನಿಶ್ಚಯ ವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ಮರ್ಮ ವನ್ನು ತಿಳಿಸದೆ ಕರ್ತನಾದ ದೇವರು ಏನನ್ನೂ ಮಾಡು ವದಿಲ್ಲ.
ನಾನು ಕರ್ತನ ದಿನದಲ್ಲಿ ಆತ್ಮನ ವಶದಲ್ಲಿದ್ದಾಗ ನನ್ನ ಹಿಂದುಗಡೆ ತುತೂರಿಯ ಶಬ್ದದಂತಿ ರುವ ಮಹಾಶಬ್ದವನ್ನು ಕೇಳಿದೆನು.
ಅವನು--ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ; ಯಾಕಂದರೆ ಆತನು ನ್ಯಾಯತೀರ್ಪು ಮಾಡುವ ಗಳಿಗೆ ಬಂದದೆ; ಪರಲೋಕವನ್ನೂ ಭೂ ಲೋಕವನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟು ಮಾಡಿದಾತನನ್ನೇ ಆರಾಧಿಸಿರಿ ಎಂದು ಮಹಾ ಶಬ್ದದಿಂದ ಹೇಳಿದನು.