ಆಗ ಆತನು ನನಗೆ--ಓ ಮನುಷ್ಯಪುತ್ರನೇ, ನೋಡಿ ದೆಯಾ? ಅವರು ಇಲ್ಲಿ ಮಾಡುವ ಅಸಹ್ಯವಾದವುಗಳು ಯೆಹೂದನ ಮನೆತನದವರಿಗಲ್ಲವೇ? ಅವರು ದೇಶವನ್ನು ಹಿಂಸೆಯಿಂದ ತುಂಬಿಸಿದ್ದಲ್ಲದೆ ನನ್ನನ್ನು ಕೆಣಕಬೇಕೆಂದು ಮತ್ತೆ ಯತ್ನಿಸುತ್ತಿದ್ದಾರೆ. ನೋಡು, ಅವರ ಮೂಗಿಗೆ ಕೊಂಬೆಗಳನ್ನಿಟ್ಟು ಕೊಳ್ಳುತ್ತಾರೆ.ಆದದರಿಂದ ನಾನು ಸಹ ಉಗ್ರ ದಿಂದಲೇ ಇರುವೆನು. ನನ್ನ ಕಣ್ಣು ಕನಿಕರಿಸುವದೂ ಇಲ್ಲ, ನಾನು ಕಟಾಕ್ಷಿಸುವದೂ ಇಲ್ಲ, ಅವರು ನನ್ನ ಕಿವಿಗಳಲ್ಲಿ ಮಹಾಧ್ವನಿಯಿಂದ ಕಿರಿಚಿದರೂ ನಾನು ಕೇಳಿಸಿಕೊಳ್ಳುವದೂ ಇಲ್ಲ.
Cross references
ಆಗ ದೇವರು ನೋಹನಿಗೆ--ಮನುಷ್ಯರೆಲ್ಲರ ಅಂತ್ಯವು ನನ್ನ ಮುಂದೆ ಬಂತು; ಅವರಿಂದ ಭೂಮಿಯು ಬಲಾತ್ಕಾರದಿಂದ ತುಂಬಿದೆ; ಇಗೋ, ನಾನು ಭೂಮಿಯೊಂದಿಗೆ ಅವರನ್ನು ನಾಶಮಾಡು ವೆನು.
ಇದಲ್ಲದೆ ಮನಸ್ಸೆಯು ಕರ್ತನ ದೃಷ್ಟಿಯಲ್ಲಿ ಕೇಡನ್ನು ಮಾಡಿದ್ದರಲ್ಲಿ ಯೆಹೂದವು ಪಾಪವನ್ನು ಮಾಡಲು ಪ್ರೇರೇಪಿಸಿದ ತನ್ನ ಪಾಪದ ಹೊರತು ಅವನು ಯೆರೂಸಲೇಮನ್ನು ಒಂದು ಕೊನೆಯಿಂದ ಮತ್ತೊಂದು ಕೊನೆಯ ವರೆಗೂ ತಾನು ಬಹು ಹೆಚ್ಚಾಗಿ ಚೆಲ್ಲಿದ ನಿರಾಪರಾಧದ ರಕ್ತದಿಂದ ತುಂಬಿಸಿದನು.
ಇದಲ್ಲದೆ ಅವನು ಚೆಲ್ಲಿದ ನಿರಪರಾಧದ ರಕ್ತದ ನಿಮಿತ್ತ ಇದು ಉಂಟಾಯಿತು. ಅವನು ನಿರಪರಾಧದ ರಕ್ತದಿಂದ ಯೆರೂಸಲೇಮನ್ನು ತುಂಬಿಸಿದ್ದನು. ಕರ್ತನು ಅದನ್ನು ಮನ್ನಿಸಲೊಲ್ಲದೆ ಇದ್ದನು.
ನಾನು ನಿಮ್ಮನ್ನು ಈ ಸ್ಥಳದಲ್ಲಿ ಅಂದರೆ ನಾನು ನಿಮ್ಮ ಪಿತೃಗಳಿಗೆ ಕೊಟ್ಟ ದೇಶದಲ್ಲಿ ಎಂದೆಂದಿಗೂ ವಾಸಿಸುವಂತೆ ಮಾಡುವೆನು.
ದುಃಖದ ನಿಮಿತ್ತ ನನ್ನನ್ನು ಆದರಿಸಿಕೊಳ್ಳಲು ನಾನು ಮನಸ್ಸು ಮಾಡಿದಾಗ ನನ್ನ ಹೃದಯವು ನನ್ನಲ್ಲಿ ಕುಂದಿಹೋಗಿದೆ. ದೂರ ದೇಶದಿಂದ ನನ್ನ ಜನರ ಮಗಳು ಕೂಗುವ ಶಬ್ದವನ್ನು ನೋಡಿರಿ.
ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿನ್ನನ್ನು ನಿನ್ನ ಸ್ನೇಹಿತರೆಲ್ಲರೂ ದಿಗಿಲುಪಡುವಂತೆ ಮಾಡುತ್ತೇನೆ; ಅವರು ತಮ್ಮ ಶತ್ರುಗಳ ಕತ್ತಿಯಿಂದ ಬೀಳುವರು; ನಿನ್ನ ಕಣ್ಣುಗಳು ಅದನ್ನು ನೋಡುವವು; ಯೆಹೂದವನ್ನೆಲ್ಲಾ ನಾನು ಬಾಬೆಲಿನ ಅರಸನ ಕೈಗೆ ಒಪ್ಪಿಸುವೆನು; ಅವನು ಅವರನ್ನು ಬಾಬೆಲಿಗೆ ಒಯ್ದು ಕತ್ತಿಯಿಂದ ಕೊಲ್ಲುವನು.
ನೀನು ಈ ಜನಕ್ಕೆ ಹೇಳಬೇಕಾದದ್ದೇನಂದರೆ --ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಜೀವದ ಮಾರ್ಗವನ್ನೂ ಮರಣದ ಮಾರ್ಗವನ್ನೂ ನಿಮ್ಮ ಮುಂದೆ ಇಡುತ್ತೇನೆ.
ಬಲಾತ್ಕಾರವು ದುಷ್ಟತ್ವದ ಕೋಲಾಗಿ ಎದ್ದಿತು; ಅವರಲ್ಲಿಯೂ ಅವರ ಜನ ಸಮೂಹದಲ್ಲಿಯೂ ಅವರ ಸಂಪತ್ತಿನಲ್ಲಿಯೂ ಏನೂ ಉಳಿಯುವದಿಲ್ಲ; ಅವರಿಗೋಸ್ಕರ ಗೋಳಾಟವೂ ಇರುವದಿಲ್ಲ.
ಒಂದು ಸರಪಳಿಯನ್ನು ಮಾಡು; ಯಾಕಂದರೆ ದೇಶವು ರಕ್ತಾಪರಾಧದಿಂದ ತುಂಬಿದೆ ಮತ್ತು ನಗರವು ಹಿಂಸೆಯಿಂದ ತುಂಬಿದೆ.
ಆಗ ಆತನು ನನಗೆ ಹೇಳಿದ್ದೇನಂದರೆಇಸ್ರಾಯೇಲಿನ ಮತ್ತು ಯೆಹೂದ ಮನೆತನದವರ ಅಕ್ರಮವು ಅತಿ ದೊಡ್ಡದಾಗಿದೆ; ದೇಶವು ರಕ್ತದಿಂದ ತುಂಬಿದೆ; ಪಟ್ಟಣವು ವಕ್ರತ್ವದಿಂದ ತುಂಬಿದೆ; ಯಾಕಂದರೆ ಕರ್ತನು ಭೂಮಿಯನ್ನು ತೊರೆದುಬಿಟ್ಟಿದ್ದಾನೆ; ಕರ್ತನು ನೋಡುವದಿಲ್ಲ ಎಂದು ಅವರು ಹೇಳುತ್ತಾರೆ.
ನೀವು ಈ ಪಟ್ಟಣದಲ್ಲಿ ನರಹತ್ಯವನ್ನು ಹೆಚ್ಚೆಚ್ಚಾಗಿ ಮಾಡಿ ಹತರಾದವರಿಂದ ಬೀದಿಗಳನ್ನು ತುಂಬಿಸಿದ್ದೀರಿ.
ಇದಲ್ಲದೆ ಮಾಂಸದಲ್ಲಿ (ಶರೀರಭಾವದಲ್ಲಿ) ಮದಿ ಸಿದ ನಿನ್ನ ನೆರೆಯವರಾದ ಐಗುಪ್ತ್ಯರ ಸಂಗಡ ವ್ಯಭಿ ಚಾರ ಮಾಡಿದಿ; ಮತ್ತು ನನ್ನನ್ನು ರೇಗಿಸುವ ಹಾಗೆ ವ್ಯಭಿಚಾರವನ್ನು ಹೆಚ್ಚಿಸಿದಿ.
ತಮ್ಮ ಅರಮನೆಗಳಲ್ಲಿ ಬಲಾತ್ಕಾರವನ್ನೂ ಕೊಳ್ಳೆಯನ್ನೂ ನಿಕ್ಷೇಪವಾಗಿ ಕೂಡಿಸಿಕೊಂಡಿರುವವರು ನ್ಯಾಯವಾದ ದ್ದನ್ನು ಮಾಡುವದಕ್ಕೆ ಅವರಿಗೆ ತಿಳಿಯುವದಿಲ್ಲ ಎಂದು ಕರ್ತನು ಹೇಳುತ್ತಾನೆ.
ನೀವು ಕೆಟ್ಟ ದಿನವನ್ನು ದೂರಮಾಡಿ ಕೊಂಡು ಬಲಾತ್ಕಾರದ ಪೀಠವನ್ನು ಹತ್ತಿರ ಮಾಡಿಕೊ ಳ್ಳುತ್ತೀರಿ.
ಅವರು ಹೊಲಗಳನ್ನು ಆಶಿಸಿ ಬಲಾತ್ಕಾರದಿಂದ ತಕ್ಕೊಳ್ಳುತ್ತಾರೆ; ಮನೆಗಳನ್ನು ಸಹ ತೆಗೆದುಕೊಳ್ಳುತ್ತಾರೆ; ಮನುಷ್ಯನಿಗೂ ಅವನ ಮನೆಗೂ ಹೌದು, ಮನುಷ್ಯನಿಗೂ ಅವನ ಸ್ವಾಸ್ತ್ಯಕ್ಕೂ ಬಲಾತ್ಕಾರ ಮಾಡುತ್ತಾರೆ.
ಅದರ ಐಶ್ವರ್ಯವಂತರು ಬಲಾತ್ಕಾರದಿಂದ ತುಂಬಿ ದ್ದಾರೆ, ಅದರ ನಿವಾಸಿಗಳು ಸುಳ್ಳುಗಳನ್ನು ಹೇಳುವವ ರಾಗಿದ್ದಾರೆ; ಅವರ ನಾಲಿಗೆ ಅವರ ಬಾಯಿಯಲ್ಲಿ ಕಪಟವುಳ್ಳದ್ದೇ.
ಆ ದಿನದಲ್ಲಿ ಹೊಸ್ತಿಲನ್ನು ಹಾರಿ ದಾಟುವವರೆಲ್ಲರನ್ನೂ ತಮ್ಮ ಯಜಮಾನರ ಮನೆ ಗಳನ್ನು ಬಲಾತ್ಕಾರ ಮೋಸಗಳಿಂದ ತುಂಬಿಸುವವರನ್ನೂ ದಂಡಿಸುವೆನು.