Home Bibles ಯೆಹೆಜ್ಕೇಲ 7:9 · ಕನ್ನಡ ಬೈಬಲ್
ಯೆಹೆಜ್ಕೇಲ 7:9 · ಕನ್ನಡ ಬೈಬಲ್

ನನ್ನ ಕಣ್ಣು ಕಟಾಕ್ಷಿಸುವದಿಲ್ಲ; ನಾನು ನಿನ್ನನ್ನು ಕನಿಕರಿಸುವದೂ ಇಲ್ಲ, ನಿನ್ನ ಮಾರ್ಗಗಳಿಗೂ ನಿನ್ನ ಮಧ್ಯದಲ್ಲಿರುವ ಅಸಹ್ಯಗಳಿಗೂ ತಕ್ಕದ್ದನ್ನು ನಿನಗೆ ಮುಯ್ಯಿ ತೀರಿಸುತ್ತೇನೆ. ಆಗ ಕರ್ತನಾದ ನಾನೇ ಹೊಡೆಯುತ್ತಿರುವನೆಂದು ನಿನಗೆ ತಿಳಿಯುವದು.

Cross references

ಯೆಶಾಯ 9:13

ಹೀಗಿದ್ದಾಗ್ಯೂ ಆ ಜನರು ತಮ್ಮನ್ನು ಹೊಡೆ ದಾತನ ಕಡೆಗೆ ತಿರುಗದೆಯೂ ಇಲ್ಲವೆ ಸೈನ್ಯಗಳ ಕರ್ತನನ್ನು ಹುಡುಕದೆಯೂ ಇದ್ದಾರೆ.

ಯೆರೆಮಿಯ 13:14

ಆಗ ಕರ್ತನು ನನಗೆ ಹೇಳಿದ್ದೇನಂದರೆ --ಪ್ರವಾದಿಗಳು ನನ್ನ ಹೆಸರಿನಲ್ಲಿ ಸುಳ್ಳಾಗಿ ಪ್ರವಾದಿ ಸುತ್ತಾರೆ; ನಾನು ಅವರನ್ನು ಕಳುಹಿಸಲಿಲ್ಲ; ಅವ ರಿಗೆ ಆಜ್ಞೆ ಕೊಡಲಿಲ್ಲ; ಅವರ ಸಂಗಡ ಮಾತಾಡ ಲಿಲ್ಲ; ಸುಳ್ಳಿನ ದರ್ಶನವನ್ನೂ ಶಕುನವನ್ನೂ ಶೂನ್ಯ ವನ್ನೂ ತಮ್ಮ ಹೃದಯದ ಕಪಟವನ್ನೂ ನಿಮಗೆ ಪ್ರವಾದಿಸುತ್ತಾರೆ.

ಯೆಹೆಜ್ಕೇಲ 5:11

ಆದಕಾರಣ ನನ್ನ ಜೀವದಾಣೆ, ದೇವರಾದ ಕರ್ತನು --ನಿಶ್ಚಯವಾಗಿ ನೀನು ನನ್ನ ಪರಿಶುದ್ಧ ಸ್ಥಳವನ್ನು ನಿನ್ನ ಎಲ್ಲಾ ಹೇಸಿಗೆಗಳಿಂದಲೂ ಅಸಹ್ಯಗಳಿಂದಲೂ ಅಪವಿತ್ರಪಡಿಸಿದ ಕಾರಣ ನಾನೂ ಸಹ ನಿನ್ನನ್ನು ಕುಂದಿಸುವೆನು ಮತ್ತು ನನ್ನ ಕಣ್ಣು ಕನಿಕರಿಸುವದಿಲ್ಲ, ಇಲ್ಲವೆ ಕಟಾಕ್ಷವನ್ನು ತೋರಿಸುವದಿಲ್ಲ.

ಯೆಹೆಜ್ಕೇಲ 22:22

ಬೆಳ್ಳಿಯು ಕುಲುಮೆಯಲ್ಲಿ ಕರಗುವ ಹಾಗೆ ನೀವು ನನ್ನ ರೋಷಾಗ್ನಿಯಲ್ಲಿ ಕರಗು ವಿರಿ; ನಿನ್ನ ಮೇಲೆ ರೋಷಾಗ್ನಿಯನ್ನು ಸುರಿಸಿದಾತನು ಕರ್ತನಾದ ನಾನೇ ಎಂದು ನಿಮಗೆ ತಿಳಿಯುತ್ತದೆ.

ಮೀಕ 6:9

ಕರ್ತನ ಸ್ವರವು ಪಟ್ಟಣಕ್ಕೆ ಕೂಗುತ್ತದೆ, ಮತ್ತು ಬುದ್ಧಿವಂತನು ನಿನ್ನ ಹೆಸರನ್ನು ನೋಡುವನು; ಬೆತ್ತ ವನ್ನೂ ಅದನ್ನು ನೇಮಿಸಿದವನನ್ನೂ ಕೇಳಿರಿ.

ಗಲಾತ್ಯದವರಿಗೆ 6:7

ಮೋಸ ಹೊಗಬೇಡಿರಿ; ದೇವರು ಪರಿಹಾಸ್ಯ ಮಾಡಲ್ಪಡುವಾತನಲ್ಲ; ಯಾಕಂದರೆ ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.

ಪ್ರಕಟನೆ 20:13

ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು; ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಯಿತು.

Interlinear

Choose Theme