ಯೆಹೆಜ್ಕೇಲ 48:22 · ಕನ್ನಡ ಬೈಬಲ್
ಇದಲ್ಲದೆ ಲೇವಿಯರ ಸ್ವಾಸ್ತ್ಯದಿಂದ ಮೊದಲುಗೊಂಡು ಮತ್ತು ಪಟ್ಟಣದ ಸ್ವಾಸ್ತ್ಯದಿಂದ ಪ್ರಧಾನನ ನಡುವೆ ಇರುವಂಥ ದ್ದು ಯೆಹೂದದ ಮೇರೆಗೂ ಬೆನ್ಯಾವಿಾನನ ಮೇರೆಗೂ ಮಧ್ಯದಲ್ಲಿರುವಂಥದ್ದೂ ಪ್ರಧಾನನಿಗೆ ಆಗಬೇಕು.
Cross references
ಅಂಕೆಗಳ ಪುಸ್ತಕ 35:2
ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸಬೇಕಾದದ್ದೇ ನಂದರೆ--ಅವರು ತಮ್ಮ ಸ್ವಾಸ್ತ್ಯದ ಭಾಗದಿಂದ ಲೇವಿ ಯರಿಗೆ ವಾಸಮಾಡುವದಕ್ಕೆ ಪಟ್ಟಣಗಳನ್ನು ಕೊಡ ಬೇಕು; ಪಟ್ಟಣಗಳ ಸುತ್ತಮುತ್ತಲಿರುವ ಉಪನಗರ ಗಳನ್ನು ನೀವು ಲೇವಿಯರಿಗೆ ಕೊಡಬೇಕು.
ಯೆಹೆಜ್ಕೇಲ 48:21
ಪರಿಶುದ್ಧ ಕಾಣಿಕೆಗೂ ಪಟ್ಟಣದ ಸ್ವಾಸ್ತ್ಯಕ್ಕೂ ಈ ಕಡೆಗೂ ಆ ಕಡೆಗೂ ಮಿಕ್ಕಾದದ್ದು ಕಾಣಿಕೆಯ ಇಪ್ಪತ್ತೈದು ಸಾವಿರ ಮೊಳಕ್ಕೆ ಎದುರಾಗಿ ಪೂರ್ವದ ಮೇರೆಯಲ್ಲಿರು ವಂಥದ್ದೂ ಪಶ್ಚಿಮದಲ್ಲಿ ಇಪ್ಪತ್ತೈದು ಸಾವಿರ ಮೊಳಕ್ಕೆ ಎದುರಾಗಿ ಪಶ್ಚಿಮದ ಮೇರೆಯಲ್ಲಿರುವಂತದ್ದೂ ಪ್ರಧಾನನಿಗಾದ ಪಾಲಿಗೆ ಎದುರಾಗಿಯೂ ಇರಬೇಕು. ಅದು ಪರಿಶುದ್ಧ ಕಾಣಿಕೆಯೇ; ಆಲಯದ ಪರಿಶುದ್ಧ ಸ್ಥಳವೂ ಅದರ ಮಧ್ಯದಲ್ಲಿ ಇರಬೇಕು.