Home Bibles ಯೆಹೆಜ್ಕೇಲ 48:19 · ಕನ್ನಡ ಬೈಬಲ್
ಯೆಹೆಜ್ಕೇಲ 48:19 · ಕನ್ನಡ ಬೈಬಲ್

ಪಟ್ಟಣದಲ್ಲಿ ಸೇವೆ ಮಾಡುವವರು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಂದ ಅದರಲ್ಲಿಯೇ ಸೇವೆಮಾಡಬೇಕು.

Cross references

1 ಅರಸುಗಳು 4:7

ಇದಲ್ಲದೆ ಅರಸನಿಗೂ ಅವನ ಮನೆಗೂ ಆಹಾರವನ್ನು ಸಿದ್ಧಮಾಡಿಸುವದಕ್ಕೊಸ್ಕರ ಸೊಲೊಮೋನನಿಗೆ ಸಮಸ್ತ ಇಸ್ರಾಯೇಲಿನ ಮೇಲೆ ಹನ್ನೆರಡು ಮಂದಿ ಅಧಿಪತಿಗಳಿದ್ದರು. ಅವನವನು ವರುಷದಲ್ಲಿ ತನ್ನ ವಂತಿನ ತಿಂಗಳು ಬಂದಾಗ ಆಹಾರವನ್ನು ಸಿದ್ಧಮಾಡಿ ದನು.

ನೆಹೆಮ್ಯ 11:1

ಅಧಿಕಾರಿಗಳು ಯೆರೂಸಲೇಮಿನಲ್ಲಿ ವಾಸವಾಗಿದ್ದರು. ಇದಲ್ಲದೆ ಹತ್ತು ಮಂದಿ ಯಲ್ಲಿ ಒಬ್ಬನು ಪರಿಶುದ್ಧ ಪಟ್ಟಣವಾದ ಯೆರೂ ಸಲೇಮಿನಲ್ಲಿ ವಾಸವಾಗಿರುವದಕ್ಕೂ ಉಳಿದ ಒಂಭತ್ತು ಮಂದಿ ಇತರ ಪಟ್ಟಣಗಳಲ್ಲಿ ವಾಸವಾಗಿರುವದಕ್ಕೂ ಚೀಟುಗಳನ್ನು ಹಾಕಿದರು.

ಯೆಹೆಜ್ಕೇಲ 45:6

ನೀವು ಪಟ್ಟಣದ ಸ್ವಾಸ್ತ್ಯವನ್ನು ಕಾಣಿಕೆಯಾದ ಪರಿಶುದ್ಧ ಭಾಗಕ್ಕೆ ಎದುರಾಗಿ ಐದು ಸಾವಿರ ಮೊಳ ಅಗಲವಾಗಿಯೂ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ನೇಮಿಸಬೇಕು, ಇದು ಸಮಸ್ತ ಇಸ್ರಾಯೇಲಿನ ಮನೆತನದವರಿಗೋಸ್ಕರ ಇರುವದು.

Interlinear

Choose Theme