ಪ್ರಧಾನರು ಕರ್ತನಿಗೆ ಸಬ್ಬತ್ ದಿನದಲ್ಲಿ ಪೂರ್ಣಾಂಗವಾದ ಆರು ಕುರಿಮರಿಗಳು, ಪೂರ್ಣಾಂಗವಾದ ಒಂದು ಟಗರು ದಹನಬಲಿಯಾಗಿ ಅರ್ಪಿಸಬೇಕು.
Cross references
ಆದರೆ ಸಬ್ಬತ್ ದಿವಸದಲ್ಲಿ ಆಹಾರದ ಅರ್ಪಣೆ ಗಾಗಿ ಮಚ್ಚೆಯಿಲ್ಲದ ಒಂದು ವರುಷದ ಎರಡು ಕುರಿ ಮರಿಗಳನ್ನೂ ಎರಡು ದಶಾಂಶಗಳಷ್ಟು ಎಣ್ಣೇ ಕಲಸಿದ ಹಿಟ್ಟನ್ನೂ ಅದಕ್ಕೆ ಪಾನದ ಅರ್ಪಣೆಯನ್ನೂ
ನಿತ್ಯ ದಹನಬಲಿಯ ಹೊರತು ಪ್ರತಿ ಸಬ್ಬತ್ತಿಗೆ ತಕ್ಕ ದಹನ ಬಲಿಯೂ ಅದರ ಪಾನದ ಅರ್ಪಣೆಯೂ ಇದೇ.
ಇವುಗಳಿಗೆ ತಕ್ಕ ಪಾನದ ಅರ್ಪಣೆಗಳು ಅಂದರೆ ಹೋರಿಗೆ ಅರ್ಧ ಹಿನ್ನಿನ ದ್ರಾಕ್ಷಾರಸವು; ಟಗರಿಗೆ ಹಿನ್ನಿನ ಮೂರನೇ ಪಾಲು ದ್ರಾಕ್ಷಾರಸವು; ಕುರಿಮರಿಗೆ ಕಾಲು ಹಿನ್ನಿನ ದ್ರಾಕ್ಷಾರಸವು ಇರಬೇಕು; ಇದು ವರುಷಕ್ಕಿರುವ ತಿಂಗಳುಗಳಲ್ಲಿ ಒಂದೊಂದಕ್ಕೆ ತಕ್ಕ ದಹನ ಬಲಿಯಾಗಿದೆ.
ಹಬ್ಬಗಳಲ್ಲಿಯೂ ಅಮಾ ವಾಸ್ಯೆಗಳಲ್ಲಿಯೂ ಸಬ್ಬತ್ತುಗಳಲ್ಲಿಯೂ ಇಸ್ರಾಯೇಲಿನ ಮನೆತನದವರ ಎಲ್ಲಾ ಸಭೆಗಳಲ್ಲಿಯೂ ಹೋಮ ಗಳನ್ನು ಅರ್ಪಣೆಗಳನ್ನು ನೈವೇದ್ಯಗಳನ್ನು ಕೊಡುವದು ಪ್ರಭುವಿನ ಕೆಲಸವಾಗಿರುವದು; ಅವನೇ ಇಸ್ರಾಯೇ ಲಿನ ಮನೆತನದವರಿಗಾಗಿ ಸಮಾಧಾನಕ್ಕಾಗಿ ಪಾಪಬಲಿ ಯನ್ನೂ ಅರ್ಪಣೆಯನ್ನೂ ದಹನಬಲಿಯನ್ನೂ ಸಮಾಧಾನ ಯಜ್ಞವನ್ನೂ ಸಿದ್ಧಮಾಡಬೇಕು.
ಆ ದಿನದಲ್ಲಿ ಪ್ರಭುವು ತನಗಾಗಿಯೂ ದೇಶದ ಎಲ್ಲಾ ಜನರಿಗಾಗಿಯೂ ಪಾಪಬಲಿಗಾಗಿ ಹೋರಿಯನ್ನು ಸಿದ್ಧಮಾಡಬೇಕು.