ಆದರೆ ಆತನು ತನ್ನ ಸ್ವಾಸ್ತ್ಯದೊಳ ಗಿಂದ ತನ್ನ ಸೇವಕರಲ್ಲಿ ಒಬ್ಬರಿಗೆ ದಾನವಾಗಿ ಕೊಟ್ಟರೆ, ಅದು ಬಿಡುಗಡೆ ವರುಷದ ವರೆಗೂ ಅವನಿಗಾಗಿ ರುವದು; ಆ ಮೇಲೆ ಮತ್ತೆ ಪ್ರಧಾನನಿಗೆ ಸೇರಬೇಕು. ಅವನ ಸ್ವಾಸ್ಥ್ಯವು ಅವನ ಕುಮಾರರಿಗೆ ಮಾತ್ರ ಸಲ್ಲಬೇಕು.
Cross references
ಐವತ್ತ ನೆಯ ವರುಷವನ್ನು ಪರಿಶುದ್ಧಮಾಡಿ ದೇಶದಲ್ಲಿ ಎಲ್ಲಾ ನಿವಾಸಿಗಳಿಗೆ ಬಿಡುಗಡೆಯನ್ನು ಪ್ರಕಟಿಸಬೇಕು. ಅದು ನಿಮಗೆ ಐವತ್ತನೇ ವರುಷದ ವಾರ್ಷಿಕೋತ್ಸವವಾ ಗಿರಬೇಕು; ನಿಮ್ಮಲ್ಲಿ ಪ್ರತಿಯೊಬ್ಬನು ಅವನವನ ಸ್ವಾಸ್ತ್ಯಕ್ಕೂ ಕುಟುಂಬಕ್ಕೂ ಹಿಂದಿರುಗಿ ಹೋಗಬೇಕು.
ಯಾಕಂದರೆ ಪರಲೋಕರಾಜ್ಯವು ದೂರ ದೇಶಕ್ಕೆ ಪ್ರಯಾಣಮಾಡುವ ಒಬ್ಬ ಮನುಷ್ಯನು ತನ್ನ ಸ್ವಂತ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿದಂತೆ ಇದೆ.
(ಆಗ ಅವರು ಅವ ನಿಗೆ--ಒಡೆಯನೇ, ಅವನಿಗೆ ಹತ್ತು ಮೊಹರಿಗಳಿವೆ ಯಲ್ಲಾ ಅಂದರು.)
ಆದರೂ ಬರಹವು ಏನು ಹೇಳುತ್ತದೆ? ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು; ಯಾಕಂದರೆ ದಾಸಿಯ ಮಗನು ಸ್ವತಂತ್ರಳ ಮಗನೊಂದಿಗೆ ಎಷ್ಟು ಮಾತ್ರಕ್ಕೂ ಬಾಧ್ಯ ನಾಗಬಾರದು ಎಂದು ಹೇಳುತ್ತದೆ.ಹೀಗಿರುವಲ್ಲಿ ಸಹೋದರರೇ, ನಾವು ದಾಸಿಯ ಮಕ್ಕಳಲ್ಲ, ಆ ಸ್ವತಂತ್ರಳ ಮಕ್ಕಳೇ ಆಗಿದ್ದೇವೆ.