ಇದಲ್ಲದೆ ಅವರು ಹೊರಗಿನ ಅಂಗಳಕ್ಕೆ ತೀರಾ ಹೊರಗಿನ ಅಂಗಳಕ್ಕೆ ಜನರ ಬಳಿಗೆ ಹೋಗುವಾಗ ತಾವು ಸೇವೆಮಾಡಿದ ತಮ್ಮ ವಸ್ತ್ರ ಗಳನ್ನು ತೆಗೆದು ಪರಿಶುದ್ಧ ಕೊಠಡಿಗಳಲ್ಲಿ ಇಟ್ಟು ಬೇರೆ ವಸ್ತ್ರಗಳನ್ನು ಧರಿಸಿಕೊಳ್ಳಬೇಕು; ತಮ್ಮ ವಸ್ತ್ರಗಳಿಂದ ಜನರನ್ನು ಪರಿಶುದ್ಧಗೊಳಿಸಬಾರದು.
Cross references
ಏಳು ದಿವಸ ಯಜ್ಞವೇದಿಗೋಸ್ಕರ ಪ್ರಾಯಶ್ಚಿತ್ತ ಮಾಡಿ ಅದನ್ನು ಪವಿತ್ರಮಾಡಬೇಕು. ಆಗ ಯಜ್ಞ ವೇದಿಯು ಅತಿಪರಿಶುದ್ಧವಾಗಿರುವದು. ಯಜ್ಞವೇದಿ ಯನ್ನು ಮುಟ್ಟುವದೆಲ್ಲಾ ಪವಿತ್ರವಾಗಿರಬೇಕು.
ಅವು ಅತಿಪರಿಶುದ್ಧವಾಗುವಂತೆ ಅವುಗಳನ್ನು ಶುದ್ಧಮಾಡು. ಅವುಗಳನ್ನು ಮುಟ್ಟುವದೆಲ್ಲವೂ ಪರಿಶುದ್ಧವಾಗಿರ ಬೇಕು.
ಕಳೆದುಹೋಗಿದ್ದು ಸಿಕ್ಕಿ ಅದರ ವಿಷಯದಲ್ಲಿ ಸುಳ್ಳಾ ಡಿದರೆ ಮತ್ತು ಸುಳ್ಳಾಗಿ ಪ್ರಮಾಣಮಾಡಿದರೆ ಇವೆಲ್ಲವುಗಳಲ್ಲಿ ಯಾವದನ್ನಾದರೂ ಒಬ್ಬ ಮನುಷ್ಯನು ಮಾಡಿದ್ದರೆ ಅವುಗಳಲ್ಲಿ ಪಾಪಮಾಡುವನು.
ಅವನು ಪಾಪಮಾಡಿ ಅಪರಾಧಿಯಾಗಿರುವದರಿಂದ ಅವನು ಬಲಾತ್ಕಾರವಾಗಿ ಪಡೆದುಕೊಂಡದ್ದನ್ನೂ ಮೋಸದಿಂದ ಪಡೆದ ವಸ್ತುವನ್ನೂ ಅವನ ವಶಕ್ಕೆ ಇಟ್ಟುಕೊಳ್ಳಲು ಕೊಟ್ಟದ್ದನ್ನೂ ಕಳೆದುಹೋಗಿ ಸಿಕ್ಕಿದ ವಸ್ತುವನ್ನೂ ಹಿಂದಕ್ಕೆ ಕೊಡುವಂತಾಗಬೇಕು.
ಯಾಜಕನು ತನ್ನ ನಾರು ಮಡಿಯ ಉಡುಪನ್ನೂ ತನ್ನ ಶರೀರದ ಮೇಲೆ ನಾರು ಮಡಿಯ ಇಜಾರುಗಳನ್ನೂ ಹಾಕಿಕೊಂಡು ಯಜ್ಞ ವೇದಿಯ ಮೇಲೆ ದಹನಬಲಿಯೊಂದಿಗೆ ಬೆಂಕಿಯಲ್ಲಿ ಸುಟ್ಟು ಬೂದಿಯನ್ನು ತೆಗೆದುಕೊಂಡು ಅದನ್ನು ಯಜ್ಞ ವೇದಿಯ ಬಳಿಯಲ್ಲಿ ಹಾಕಬೇಕು.
ಅವನು ತನ್ನ ಉಡುಪುಗಳನ್ನು ತೆಗೆದುಹಾಕಿ ಬೇರೆ ಉಡುಪುಗಳನ್ನು ಧರಿಸಿಕೊಂಡು ಆ ಬೂದಿಯನ್ನು ಪಾಳೆಯದ ಆಚೆಗೆ ಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.
ಯಾವನಾದರೂ ಅದರ ಮಾಂಸವನ್ನು ಮುಟ್ಟಿದರೆ ಅದು ಪರಿಶುದ್ಧವಾಗುವದು; ಯಾವದಾ ದರೂ ಉಡುಪಿನ ಮೇಲೆ ಅದರ ರಕ್ತವು ಚಿಮುಕಿಸ ಲ್ಪಟ್ಟಾಗ ನೀನು ಅದನ್ನು ಚಿಮುಕಿಸದ ಪರಿಶುದ್ಧ ಸ್ಥಳದಲ್ಲಿಯೇ ತೊಳೆಯಬೇಕು.
ಆಗ ಅವನು ನನಗೆ ಪ್ರತ್ಯೇಕ ಸ್ಥಳದ ಮುಂದೆ ಇರುವ ಉತ್ತರದ ಕೊಠಡಿಗಳು ದಕ್ಷಿಣದ ಕೊಠಡಿಗಳು ಪರಿಶುದ್ಧ ಕೊಠಡಿ ಗಳಾಗಿತ್ತು; ಅಲ್ಲಿ ಕರ್ತನಿಗಾಗಿ ಬರುವ ಯಾಜಕರು ಅತಿ ಪರಿಶುದ್ಧವಾದವುಗಳನ್ನು ತಿನ್ನಬೇಕು; ಅಂದರೆ ಕಾಣಿಕೆಯನ್ನೂ ಪಾಪದ ಬಲಿಯನ್ನೂ ಅಪರಾಧದ ಬಲಿಯನ್ನೂ ಅರ್ಪಿಸಬೇಕು; ಆ ಸ್ಥಳವು ಪರಿಶುದ್ಧ ವಾಗಿತ್ತು.
ಯಾಜಕರು ಅವುಗಳಲ್ಲಿ ಪ್ರವೇಶಿಸು ವಾಗ ಅವರು ಪರಿಶುದ್ಧ ಸ್ಥಳವನ್ನು ಬಿಟ್ಟು ಹೊರಗಿನ ಅಂಗಳಕ್ಕೆ ಹೋಗಬಾರದು; ಅವರು ತಾವು ಸೇವೆಗಾಗಿ ಧರಿಸಿದ ವಸ್ತ್ರಗಳನ್ನು ಅಲ್ಲೇ ತೆಗೆದಿಡಬೇಕು; ಅವು ಪರಿಶುದ್ಧವಾಗಿವೆ. ಅವರು ಜನರಿಗೆ ಸಂಬಂಧಪಟ್ಟ ಬೇರೆ ವಸ್ತ್ರಗಳನ್ನು ಧರಿಸಿಕೊಂಡು ಸವಿಾಪಿಸಬೇಕು ಅಂದನು.
ಆಗ ಅವನು ನನಗೆ--ಯಾಜಕರು ಅಪರಾಧ ಬಲಿಯನ್ನೂ ಪಾಪ ಬಲಿಯನ್ನೂ ಬೇಯಿಸಿದ ಆಹಾರದ ಅರ್ಪಣೆಯನ್ನು ಸುಡುವಂತೆ ಏರ್ಪಡಿ ಸಿರುವ ಸ್ಥಳವು ಇದೇ. ಜನರನ್ನು ಪರಿಶುದ್ಧ ಮಾಡು ವದಕ್ಕೆ ಅವರು ಅವುಗಳನ್ನು ಹೊರಗಿನ ಅಂಗಳಕ್ಕೆ ತೆಗೆದುಕೊಂಡು ಹೋಗಬಾರದು ಎಂದು ಹೇಳಿದನು.
ಮೂರ್ಖರೇ, ಕುರುಡರೇ, ಯಾವದು ದೊಡ್ಡದು? ಚಿನ್ನವೋ ಇಲ್ಲವೆ ಚಿನ್ನವನ್ನು ಪಾವನ ಮಾಡುವ ದೇವಾಲಯವೋ?
ಹಾಗಾದರೆ ಪೌಲನು ಯಾರು? ಅಪೊಲ್ಲೋಸನು ಯಾರು? ಅವರು ಸೇವಕರು, ಅವರ ಮುಖಾಂತರ ನೀವು ನಂಬುವವರಾದಿರಿ; ಕರ್ತನು ಒಬ್ಬೊಬ್ಬನಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆ ಮಾಡುವವ ರಾಗಿದ್ದಾರೆ.