ಈ ಯಜ್ಞವೇದಿಯ ಅಳತೆಗಳು ಮೊಳದ ಪ್ರಕಾರವೇ ಇವೆ; ಮೊಳ ಅಂದರೆ ಮೊಳದ ಮೇಲೆ ಒಂದು ಹಿಡಿ ಉದ್ದ; ಕೆಳಭಾಗದ ಎತ್ತರವು ಒಂದು ಮೊಳ, ಮೇಲಿನ ಕೈ ಅಗಲದಷ್ಟು ಅಂಚಿನ ಉದ್ದವು ಸುತ್ತಲೂ ಒಂದು ಮೊಳ, ಅಂಚಿನ ತುದಿಯಲ್ಲಿ; ಸುತ್ತಲೂ ದಿಂಡಿನ ಅಗಲವು ಒಂದು ಮೊಳ; ಇದೇ ಯಜ್ಞವೇದಿಯ ಉನ್ನತ ಸ್ಥಳ.
Cross references
ಇದಲ್ಲದೆ ಜಾಲೀ ಮರದಿಂದ ಯಜ್ಞವೇದಿಯನ್ನು ಐದು ಮೊಳ ಉದ್ದವಾಗಿಯೂ ಐದು ಮೊಳ ಅಗಲವಾಗಿಯೂ ಮಾಡಬೇಕು. ಆ ಯಜ್ಞವೇದಿಯು ಚಚ್ಚೌಕವಾಗಿರಬೇಕು. ಅದರ ಎತ್ತ ರವು ಮೂರು ಮೊಳ ಇರಬೇಕು.
ಇದಲ್ಲದೆ ಅವನು ತಾಮ್ರದ ಬಲಿಪೀಠ ವನ್ನು ಮಾಡಿದನು. ಅದರ ಉದ್ದ ಇಪ್ಪತ್ತು ಮೊಳ, ಅಗಲ ಇಪ್ಪತ್ತು ಮೊಳ, ಎತ್ತರ ಹತ್ತು ಮೊಳ.
ನೋಡು, ಮನೆಯ ಹೊರಗೆ ಸುತ್ತಮುತ್ತಲೂ ಇರುವ ಗೋಡೆ; ಆ ಮನುಷ್ಯನ ಕೈಯಲ್ಲಿ ಒಂದು ಹಿಡಿ ಉದ್ಧವಾದಂಥ ಆರುಮೊಳ ಉದ್ದ ಅಳತೆ ಕೋಲು ಇತ್ತು; ಹಾಗೆಯೇ ಅವನು ಆ ಕಟ್ಟಡದ ಅಗಲವನ್ನು ಅಳತೆ ಮಾಡಿದಾಗ ಅದರ ಎತ್ತರ ಅಗಲ ಒಂದೇ ಕೋಲಾಗಿತ್ತು.
ಆಲಯದ ಸುತ್ತ ಮುತ್ತಲೂ ಒಂದು ಜಗುಲಿಯನ್ನು ನಾನು ನೋಡಿ ದೆನು. ಅದು ಪಾರ್ಶ್ವದ ಕೊಠಡಿಗಳಿಗೆ ತಳಹದಿಯಾಗಿ ನೆಲಮಟ್ಟದಿಂದ ಸುಮಾರು ಆರು ಮಹಾ ಮೊಳಗಳಷ್ಠು ಎತ್ತರವಾಗಿತ್ತು.