ಆ ಪಾರ್ಶ್ವದ ಕೊಠಡಿಗಳು ನೂರು ಇದ್ದವು. ಒಂದರ ಮೇಲೆ ಒಂದರಂತೆ ಮೂವತ್ತು ಅಂತಸ್ತು ಇದ್ದವು; ಅವರು ಹಿಡಿಯಲ್ಪಡುವ ಹಾಗೆ ಪಾರ್ಶ್ವದ ಕೊಠಡಿಗಳಿಗಾಗಿ ಇರುವ ಆಲಯವನ್ನು ಹೊಂದಿದ ಗೋಡೆಯಲ್ಲಿ ಸುತ್ತ ಲಾಗಿ ಸೇರಿಸಲ್ಪಟ್ಟಿದ್ದವು. ಆದರೆ ಮನೆಯ ಗೋಡೆಯಲ್ಲಿ ಹಿಡಿಸಲ್ಪಡಲಿಲ್ಲ.
Cross references
ಮಂದಿರದ ಸುತ್ತಲೂ ದೈವೋಕ್ತಿಯ ಸುತ್ತಲೂ ಗೋಡೆಗಳಿಗೆ ಸವಿಾಪವಾಗಿ ಕೊಠಡಿಗಳನ್ನು ಕಟ್ಟಿಸಿದನು.
ಅವನು ಐದು ಮೊಳ ಎತ್ತರವಾದ ಕೊಠಡಿಗಳನ್ನು ಮನೆಯ ಬಳಿಯಲ್ಲಿ ಸುತ್ತಲೂ ಕಟ್ಟಿಸಿದನು; ಅವು ಮನೆಯ ಮೇಲೆ ಇರಿ ಸಿದ ದೇವದಾರು ತೊಲೆಗಳ ಮೇಲೆ ನಿಂತಿದ್ದವು.
ಆಗ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ತಂದನು; ಇಗೋ, ಕೊಠಡಿಗಳೂ ಕಲ್ಲು ಹಾಸಿದ ನೆಲವೂ ಅಂಗಳದ ಸುತ್ತಲೂ ಮಾಡಲ್ಪಟ್ಟಿದ್ದವು; ಕಲ್ಲು ಹಾಸಿದ ನೆಲದ ಬದಿಯಲ್ಲಿ ಮೂವತ್ತು ಕೊಠಡಿ ಗಳಿದ್ದವು.
ಇವು ಮೂರು ಅಂತಸ್ತು ಗಳಾಗಿದ್ದವು; ಆದರೆ ಅಂಗಳದ ಕಂಬಗಳ ಹಾಗೆ ಇವುಗಳಿಗೆ ಕಂಬಗಳಿರಲಿಲ್ಲ; ಆದದರಿಂದ ನೆಲಕ್ಕೆ ಎತ್ತರದಲ್ಲಿನ ಮೇಲಣ ಕೋಣೆಗಳು ಕೆಳಗಿನ ಮತ್ತು ಮಧ್ಯದ ಕೋಣೆಗಳಿಗೆ ಚಾಚಿಕೊಂಡಿದ್ದವು.
ಅಂತ್ಯ ಕಾಲದಲ್ಲಿ ಪ್ರಕಟವಾಗುವದಕ್ಕೆ ಸಿದ್ಧವಾಗಿರುವ ರಕ್ಷಣೆಗೆ ನಂಬಿಕೆಯ ಮುಖಾಂತರ ದೇವರು ನಿಮ್ಮನ್ನು ತನ್ನ ಬಲದಿಂದ ಕಾಯುತ್ತಾನೆ.