ಯೆಹೆಜ್ಕೇಲ 40:42 · ಕನ್ನಡ ಬೈಬಲ್
ದಹನಬಲಿಗಾಗಿ ಇದ್ದ ಆ ನಾಲ್ಕು ಮೇಜುಗಳು ಕೆತ್ತಿದ ಕಲ್ಲುಗಳಿಂದ ಮಾಡಲ್ಪಟ್ಟಿದ್ದವು; ಅವುಗಳ ಉದ್ದ ಅಗಲ ಒಂದುವರೆ ಮೊಳ, ಎತ್ತರ ಒಂದುವರೆ ಮೊಳ, ಇವುಗಳ ಮೇಲೆ ಅವರು ದಹನಬಲಿಯನ್ನೂ ಅರ್ಪಣೆಯನ್ನೂ ವಧಿ ಸುವ ಸಾಮಾನುಗಳನ್ನೂ ಇಟ್ಟರು.
Cross references
ನಿರ್ಗಮಕಾಂಡ 20:25
ನೀನು ನನಗೆ ಯಜ್ಞವೇದಿ ಯನ್ನು ಕಲ್ಲಿನಿಂದ ಮಾಡಿದರೆ ಅದನ್ನು ಕೆತ್ತಿದ ಕಲ್ಲಿನಿಂದ ಕಟ್ಟಬಾರದು. ಉಳಿಯನ್ನು ಅದರ ಮೇಲೆ ಎತ್ತಿದರೆ ನೀನು ಅದನ್ನು ಅಪವಿತ್ರ ಮಾಡಿದವನಾಗಿದ್ದೀ.ಇಲ್ಲವೆ ನೀನು ನನ್ನ ಯಜ್ಞವೇದಿಯ ಮೇಲೆ ನಿನ್ನ ಬೆತ್ತಲೆಯು ಕಾಣುವಂತೆ ಅದರ ಮೆಟ್ಟಲುಗಳನ್ನು ಹತ್ತಬಾರದು ಎಂದು ಹೇಳಿದನು.
ಯೆಹೆಜ್ಕೇಲ 40:39
ಬಾಗಲ ದ್ವಾರಾಂಗಣದಲ್ಲಿ ಎರಡು ಮೇಜುಗಳು ಆ ಕಡೆಗೆ ಇದ್ದವು. ದಹನಬಲಿ ಯನ್ನೂ ಪಾಪ ಬಲಿಯನ್ನೂ ಅಪರಾಧ ಬಲಿಯನ್ನೂ ವಧಿಸುವ ಹಾಗೆ ಅವು ಇದ್ದವು.