ಆಮೇಲೆ ಅವನು ನನ್ನನ್ನು ದಕ್ಷಿಣದ ಕಡೆಗೆ ತಂದನು; ಇಗೋ, ದಕ್ಷಿಣದ ಕಡೆಗೆ ಬಾಗಲು ಇತ್ತು, ಅವನು ಅದರ ಕಂಬಗಳನ್ನು ಕೈಸಾಲೆಗಳನ್ನು ಈ ಅಳತೆಯ ಪ್ರಕಾರವೇ ಅಳೆದನು.
Cross references
ಆಮೇಲೆ ಅವನು ಮೂಡಣಕ್ಕೆ ಅಭಿಮುಖವಾಗಿರುವ ಬಾಗಲಿಗೆ ಬಂದು, ಅದರ ಮೆಟ್ಟಲುಗಳನ್ನು ಹತ್ತಿ ಆ ಬಾಗಲಿನ ಹೊಸ್ತಿಲನ್ನು ಅಳೆದನು, ಅದು ಒಂದೇ ಕೋಲಿನ ಅಗಲವಾಗಿತ್ತು, ಮತ್ತು ಒಂದೇ ಕೋಲು ಅಗಲವಾದ ಹೊಸ್ತಿಲಿನ ಬಾಗಲೂ ಅಲ್ಲಿ ಇತ್ತು.
ಇದಲ್ಲದೆ ಉತ್ತರದ ಕಡೆಗೆ ಅಭಿಮುಖವಾದ ಹೊರ ಗಿನ ಬಾಗಲಿನ ಉದ್ದವನ್ನೂ ಅಗಲವನ್ನೂ ಅಳೆದನು.
ಆಮೇಲೆ ಅವನು ನನ್ನನ್ನು ದಕ್ಷಿಣ ಬಾಗಲಿನಿಂದ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಅವನು ಈ ಅಳತೆಗಳ ಪ್ರಕಾರ ದಕ್ಷಿಣದ ಬಾಗಲನ್ನು ಅಳೆದನು;
ಅಲ್ಲಿನ ಚಿಕ್ಕ ಕೊಠಡಿಗಳನ್ನೂ ಕಂಬಗಳನ್ನೂ ಕಮಾನುಗಳನ್ನೂ ಈ ಅಳತೆಗಳ ಪ್ರಕಾರವೇ ಅವನು ಅಳೆದನು; ಅದರಲ್ಲಿ ಸಹ ಸುತ್ತಲೂ ಇರುವ ಅದರ ಕಮಾನುಗಳಲ್ಲಿಯೂ ಕಿಟಕಿಗಳು ಇದ್ದವು. ಅದರ ಉದ್ದವು ಐವತ್ತು ಮೊಳ ಅಗಲವು ಇಪ್ಪತ್ತೈದು ಮೊಳ.
ಇದಲ್ಲದೆ ಅವನು ನನ್ನನ್ನು ಉತ್ತರದ ಬಾಗಲಿನ ಬಳಿಗೆ ಕರೆದುಕೊಂಡು ಹೋಗಿ ಈ ಅಳತೆಗಳ ಪ್ರಕಾರ ಅಳೆದನು;
ಆದರೆ ದೇಶದ ಜನರು ಪರಿಶುದ್ಧ ಹಬ್ಬಗಳಲ್ಲಿ ಕರ್ತನ ಮುಂದೆ ಬರುವಾಗ ಉತ್ತರದ ಬಾಗಲಿನಿಂದ ಪ್ರವೇಶಿಸಿ ಆರಾ ಧಿಸಿದ ಮೇಲೆ ಅವನು ದಕ್ಷಿಣ ಬಾಗಲಿನ ಮಾರ್ಗ ವಾಗಿ ಹೊರಗೆ ಹೋಗಬೇಕು. ದಕ್ಷಿಣ ಬಾಗಲಿನ ಮಾರ್ಗವಾಗಿ ಪ್ರವೇಶಿಸಿದವನು ಉತ್ತರ ಬಾಗಲಿನ ಮಾರ್ಗವಾಗಿ ಹೊರಗೆ ಹೋಗಬೇಕು. ಅವನು ಪ್ರವೇಶಿಸಿದ ಬಾಗಲಿನ ಮಾರ್ಗವಾಗಿಯೇ ತಿರುಗಿ ಹೊರಗೆ ಹೋಗಬಾರದು; ಆದರೆ ಅದಕ್ಕೆ ಎದುರಾಗಿ ಹೊರಗೆ ಹೋಗಬೇಕು.