ಅದರ ಚಿಕ್ಕ ಕೊಠಡಿಗಳು ಈ ಕಡೆಗೂ ಆ ಕಡೆಗೂ ಮೂರು ಮೂರು ಇದ್ದವು; ಅದರ ಕಂಬಗಳು ಕೈಸಾಲೆ ಗಳು ಮೊದಲನೇ ಭಾಗಲಿನ ಅಳತೆಯ ಹಾಗಿದ್ದವು; ಅದರ ಉದ್ದ ಐವತ್ತು ಮೊಳ ಅಗಲ ಇಪ್ಪತ್ತೈದು ಮೊಳ.
Cross references
ಪ್ರತಿಯೊಂದು ಚಿಕ್ಕ ಕೋಣೆಯು ಒಂದು ಕೋಲು ಉದ್ದವಾಗಿ ಒಂದು ಕೋಲು ಅಗಲವಾಗಿ ಇತ್ತು; ಕೊಠಡಿಗಳ ನಡುವೆ ಐದು ಮೊಳ ಒಳಬಾಗಲಿನ ಪಡಸಾಲೆಯ ಬಳಿಯಲ್ಲಿ ರುವ ಬಾಗಲಿನ ಹೊಸ್ತಿಲು ಒಂದು ಕೋಲಿನ ಅಳತೆ ಯಷ್ಟಿತ್ತು.
ಮೂಡ ಣದ ಕಡೆಗಿರುವ ಬಾಗಲಿನ ಕೊಠಡಿಗಳು ಈ ಕಡೆ ಯಲ್ಲಿ ಮೂರು ಆ ಕಡೆಯಲ್ಲಿ ಮೂರು ಇದ್ದವು; ಆ ಮೂರಕ್ಕೂ ಒಂದೇ ಅಳತೆ ಇತ್ತು. ಈ ಕಡೆಯೂ ಆ ಕಡೆಯೂ ಕಂಬಗಳಿಗೂ ಸಹ ಒಂದೇ ಅಳತೆ ಇತ್ತು.
ಅದರಲ್ಲಿಯೂ ಅದರ ಕೈಸಾಲೆಗಳಲ್ಲಿಯೂ ಸುತ್ತಲೂ ಆ ಕಿಟಕಿಗಳ ಹಾಗೆಯೇ ಕಿಟಕಿಗಳೂ ಇದ್ದವು. ಉದ್ದವು ಐವತ್ತು ಮೊಳ ಅಗಲವು ಇಪ್ಪತ್ತೈದು ಮೊಳ;
ಅಲ್ಲಿನ ಆ ಚಿಕ್ಕ ಕೊಠಡಿಗಳನ್ನೂ ಅದರ ಕಂಬ ಗಳನ್ನೂ ಕಮಾನುಗಳನ್ನೂ ಈ ಅಳತೆಯ ಪ್ರಕಾರ ಅಳೆದನು. ಅದರಲ್ಲಿಯೂ ಅದರ ಸುತ್ತಲಿರುವ ಕಮಾ ನುಗಳಲ್ಲಿಯೂ ಕಿಟಕಿಗಳಿದ್ದವು ಅದರ ಉದ್ದ ಐವತ್ತು ಮೊಳ, ಅಗಲ ಇಪ್ಪತ್ತೈದು ಮೊಳ;
ಅದರ ಕಮಾನುಗಳು ಹೊರಗಿನ ಅಂಗಳದ ಕಡೆಗೆ ಇದ್ದವು; ಖರ್ಜೂರದ ಮರಗಳು ಆ ಕಡೆ ಈ ಕಡೆ ಅಲ್ಲಿನ ಕಂಬಗಳ ಮೇಲೆ ಇದ್ದವು; ಮೇಲೆ ಹೋಗುವದಕ್ಕೆ ಅದಕ್ಕೆ ಎಂಟು ಮೆಟ್ಟಲುಗಳು ಇದ್ದವು.
ಅಲ್ಲಿನ ಚಿಕ್ಕ ಕೋಣೆಗಳು, ಕಂಬಗಳು ಕಮಾನುಗಳು ಮತ್ತು ಅದರ ಸುತ್ತಲೂ ಇರುವ ಕಿಟಕಿಗಳ ಉದ್ದವು ಐವತ್ತು ಮೊಳ, ಅಗಲವು ಇಪ್ಪತ್ತೈದು ಮೊಳ;