Home Bibles ಯೆಹೆಜ್ಕೇಲ 37:16 · ಕನ್ನಡ ಬೈಬಲ್
ಯೆಹೆಜ್ಕೇಲ 37:16 · ಕನ್ನಡ ಬೈಬಲ್

ಇದಾದ ಮೇಲೆ ಮನುಷ್ಯಪುತ್ರನೇ, ನೀನು ಒಂದು ಕೋಲನ್ನು ತೆಗೆದುಕೊಂಡು ಅದರ ಮೇಲೆ ಯೆಹೂದನ ಮತ್ತು ಅವನ ಜೊತೆಗಾರರಾದ ಇಸ್ರಾಯೇಲಿನ ಮಕ್ಕಳದು ಎಂದು ಬರೆದಿಡು. ಆಮೇಲೆ ಮತ್ತೊಂದು ಕೋಲನ್ನು ತೆಗೆದುಕೊಂಡು ಅದರ ಮೇಲೆ ಯೋಸೇಫನಿಗೂ ಎಫ್ರಾಯಾಮಿಗೂ ಅವನ ಜೊತೆ ಗಾರರಾದ ಇಸ್ರಾಯೇಲನ ಮನೆತನದವರೆಲ್ಲರಿಗೂ ಇರುವ ಕೋಲು ಎಂದು ಬರೆದಿಡು.

Cross references

ಅಂಕೆಗಳ ಪುಸ್ತಕ 17:2

ನೀನು ಇಸ್ರಾಯೇಲ್‌ ಮಕ್ಕಳ ಸಂಗಡ ಮಾತನಾಡಿ ಅವರಿಂದ ಅವರ ಪಿತೃಗಳ ಮನೆಯ ಪ್ರಕಾರ, ಅವರ ಪ್ರಧಾನರೆಲ್ಲರ ಪಿತೃಗಳ ಮನೆಯ ಪ್ರಕಾರ, ಒಂದೊಂದು ಕೋಲನ್ನಾಗಿ ಹನ್ನೆರಡು ಕೋಲುಗಳನ್ನು ತಕ್ಕೊಂಡು ಒಬ್ಬೊಬ್ಬನ ಹೆಸರನ್ನು ಅವನವನ ಕೋಲಿನ ಮೇಲೆ ಬರೆ.

1 ಅರಸುಗಳು 12:16

ಅರಸನು ಅವರ ಮಾತನ್ನು ಕೇಳದೆ ಹೋದನೆಂದು ಸಮಸ್ತ ಇಸ್ರಾಯೇಲ್ಯರು ನೋಡಿದಾಗ ಜನರು ಅರಸನಿಗೆ ಪ್ರತ್ಯುತ್ತರವಾಗಿ ದಾವೀದನಲ್ಲಿ ನಮಗೆ ಭಾಗವೇನು? ಇಷಯನ ಮಗನಲ್ಲಿ ನಮಗೆ ಬಾಧ್ಯತೆ ಏನು? ಇಸ್ರಾ ಯೇಲ್ಯರೇ, ನಿಮ್ಮ ಡೇರೆಗಳಿಗೆ ಹೋಗಿರಿ; ದಾವೀ ದನೇ, ಈಗ ನಿನ್ನ ಮನೆಯನ್ನು ನೋಡಿಕೋ ಎಂದು ಹೇಳಿ ಇಸ್ರಾಯೇಲ್ಯರು ತಮ್ಮ ತಮ್ಮ ಡೇರೆಗಳಿಗೆ ಹೋದರು.

1 ಅರಸುಗಳು 12:19

ಹೀಗೆಯೇ ಇಂದಿನ ವರೆಗೂ ಇಸ್ರಾಯೇಲ್ಯರು ದಾವೀದನ ಮನೆಯ ಮೇಲೆ ತಿರುಗಿಬಿದ್ದರು.

2 ದಿನವೃತ್ತಾಂತ 10:17

ಆದರೆ ಯೆಹೂದದ ಪಟ್ಟಣಗಳಲ್ಲಿ ವಾಸವಾಗಿರುವ ಇಸ್ರಾಯೇಲಿನ ಮಕ್ಕಳ ಮೇಲೆ ರೆಹಬ್ಬಾಮನು ಆಳಿದನು.

2 ದಿನವೃತ್ತಾಂತ 10:19

ಹೀಗೆ ಇಂದಿನ ವರೆಗೂ ಇಸ್ರಾಯೇಲ್ಯರು ದಾವೀದನ ಮನೆಗೆ ವಿರೋಧವಾಗಿ ತಿರುಗಿಬಿದ್ದರು.

2 ದಿನವೃತ್ತಾಂತ 11:11

ಇದಲ್ಲದೆ ಅವನು ಕೋಟೆಗಳನ್ನು ಬಲ ಪಡಿಸಿ ಅವುಗಳಲ್ಲಿ ನಾಯಕರನ್ನೂ ಆಹಾರ ಎಣ್ಣೆ ದ್ರಾಕ್ಷಾರಸ ಇರುವ ಉಗ್ರಾಣಗಳನ್ನೂ ಇಟ್ಟನು.

2 ದಿನವೃತ್ತಾಂತ 11:12

ಪ್ರತಿ ಪಟ್ಣಣದಲ್ಲಿ ಖೇಡ್ಯಗಳನ್ನೂ ಈಟಿಗಳನ್ನೂ ಇಟ್ಟು ಯೆಹೂದ ಬೆನ್ಯಾವಿಾನಿನವರು ಅವನ ಕಡೆ ಇದ್ದದ್ದರಿಂದ ಅವುಗಳನ್ನು ಬಹಳ ಭದ್ರಪಡಿಸಿದನು.

2 ದಿನವೃತ್ತಾಂತ 15:9

ಇದಲ್ಲದೆ ಅವನು ಯೆಹೂದದ ಬೆನ್ಯಾ ವಿಾನನ ಸಮಸ್ತರನ್ನೂ ಎಫ್ರಾಯಾಮಿನಿಂದಲೂ ಮನಸ್ಸೆಯಿಂದಲೂ ಸಿಮೆಯೋನಿನಿಂದಲೂ ಅವರ ಕಡೆಗೆ ಬಂದ ಅನ್ಯರನ್ನೂ ಕೂಡಿಸಿದನು. ಅವನ ದೇವರಾದ ಕರ್ತನು ಅವನ ಸಂಗಡ ಇದ್ದಾನೆಂದು ಇವರು ಕಂಡು ಇಸ್ರಾಯೇಲಿನೊಳಗಿಂದ ಅನೇಕರು ಅವನ ಕಡೆಗೆ ಹೋದರು.

2 ದಿನವೃತ್ತಾಂತ 30:11

ಆದಾಗ್ಯೂ ಅಶೇರ, ಮನಸ್ಸೆ, ಜೆಬುಲೂನ್‌ ಇವರಲ್ಲಿ ಕೆಲವರು ತಮ್ಮನ್ನು ತಗ್ಗಿಸಿಕೊಂಡು ಯೆರೂಸಲೇಮಿಗೆ ಬಂದರು.

Interlinear

Choose Theme