ಅವರ ಸಂಗಡ ಸಮಾ ಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಕೆಟ್ಟ ಮೃಗಗಳನ್ನು ದೇಶದೊಳಗೆ ಇಲ್ಲದಂತೆ ಮಾಡುವೆನು; ಅವರು ನಿರ್ಭಯವಾಗಿ ಅರಣ್ಯಗಳಲ್ಲಿ ವಾಸಿಸಿ ಅಡವಿಗಳಲ್ಲಿ ಮಲಗುವರು.
Cross references
ಭೂಮಿಯು ತನ್ನ ಫಲವನ್ನು ಕೊಡುವದು; ನೀವು ತಿಂದು ತೃಪ್ತ ರಾಗುವಿರಿ, ಅದರಲ್ಲಿ ಸುರಕ್ಷಿತವಾಗಿ ವಾಸಿಸುವಿರಿ.
ನಾನು ದೇಶದಲ್ಲಿ ಸಮಾಧಾನವನ್ನು ಕೊಡುವೆನು. ಯಾರ ಭಯವೂ ಇಲ್ಲದೆ ನೀವು ಮಲಗಿಕೊಳ್ಳುವಿರಿ; ದೇಶದಲ್ಲಿ ದುಷ್ಟ ಮೃಗಗಳು ಇಲ್ಲದಂತೆ ಮಾಡುವೆನು. ಇಲ್ಲವೆ ಕತ್ತಿ ನಿಮ್ಮ ದೇಶದಲ್ಲಿ ಹಾದುಹೋಗುವದಿಲ್ಲ.
ನಾಶನಕ್ಕೂ ಕ್ಷಾಮಕ್ಕೂ ನಗುವಿ; ಭೂಮಿಯ ಮೃಗಗಳಿಗೂ ಭಯಪಡುವದಿಲ್ಲ.
ಹೊಲದ ಕಲ್ಲುಗಳ ಸಂಗಡ ನಿನಗೆ ಒಡಂಬಡಿಕೆ ಇರುವದು; ಹೊಲದ ಮೃಗಗಳು ನಿನ್ನೊಂದಿಗೆ ಸಮಾ ಧಾನವಾಗಿರುವವು.
ಸಮಾಧಾನವಾಗಿ ಮಲಗಿ ನಿದ್ರೆ ಸಹ ಮಾಡುವೆನು; ಯಾಕಂದರೆ ಕರ್ತನೇ, ನೀನೋಬ್ಬನೇ ನನ್ನನ್ನು ಸುರ ಕ್ಷಿತವಾಗಿ ವಾಸಿಸುವಂತೆ ಮಾಡುತ್ತೀ.
ನೀನು ಮಲಗುವಾಗ ನಿನಗೆ ಹೆದರಿಕೆ ಇರುವದಿಲ್ಲ, ಹೌದು, ನೀನು ಮಲಗಿಕೊಳ್ಳುವಿ. ನಿನ್ನ ನಿದ್ರೆಯು ಸುಖವಾಗಿರುವದು.
ತೋಳವು ಕುರಿಯ ಸಂಗಡ ವಾಸಿಸುವದು, ಚಿರತೆಯು ಮೇಕೆ ಮರಿಯೊಂದಿಗೆ ಮಲಗುವದು; ಕರುವೂ ಪ್ರಾಯದ ಸಿಂಹವೂ ಪುಷ್ಟ ಪಶುವೂ ಒಟ್ಟಿಗಿರುವವು; ಇವುಗಳನ್ನು ಒಂದು ಚಿಕ್ಕ ಮಗುವು ನಡಿಸುವದು.
ಸಿಂಹವು ಅಲ್ಲಿ ಇರದು ಇಲ್ಲವೆ ಕ್ರೂರ ವಾದ ಮೃಗಗಳು ಅದರ ಮೇಲೆ ಹೋಗವು, ಅವು ಅಲ್ಲಿ ಕಾಣುವದೇ ಇಲ್ಲ; ಬಿಡುಗಡೆಯಾದವರೇ ಅಲ್ಲಿ ನಡೆಯುವರು.ಕರ್ತನಿಂದ ವಿಮೋಚಿಸಲ್ಪಟ್ಟವರು ಹಿಂತಿರುಗಿಕೊಂಡು ತಮ್ಮ ತಲೆಗಳ ಮೇಲೆ ಉತ್ಸಾಹಧ್ವನಿ ನಿತ್ಯವಾದ ಸಂತೋಷಗಳೊಂದಿಗೆ ಚೀಯೋನಿಗೆ ಬರು ವರು; ಅವರು ಹರ್ಷಾನಂದಗಳನ್ನು ಅನುಭವಿಸು ವರು. ದುಃಖವೂ, ನಿಟ್ಟುಸಿರೂ ಓಡಿಹೋಗುವವು.
ಪರ್ವತಗಳು ಹೊರಟುಹೋಗುವವು, ಮತ್ತು ಗುಡ್ಡಗಳು ತೆಗೆದುಹಾಕಲ್ಪಡುವವು; ಆದರೆ ನನ್ನ ದಯೆಯು ನಿನ್ನನ್ನು ಬಿಟ್ಟುಹೋಗದು ಇಲ್ಲವೆ ನನ್ನ ಸಮಾಧಾನದ ಒಡಂಬಡಿಕೆಯು ತೆಗೆಯಲ್ಪಡುವದಿಲ್ಲ ಎಂದು ನಿನ್ನ ಮೇಲೆ ಕರುಣೆಯನ್ನು ಇಟ್ಟಿರುವ ಕರ್ತನು ಹೇಳುತ್ತಾನೆ.
ನಿಮ್ಮ ಕಿವಿಗಳನ್ನು ಬಾಗಿಸಿಕೊಂಡು ನನ್ನ ಬಳಿಗೆ ಬನ್ನಿರಿ; ಕೇಳಿರಿ, ನಿಮ್ಮ ಪ್ರಾಣವು ಬದುಕು ವದು; ನಿಶ್ಚಯವಾಗಿ ದಾವೀದನಿಗೆ ಖಂಡಿತವಾಗಿ ಮಾಡಿದ ಕರುಣೆಗಳ ಪ್ರಕಾರ ನಿಮ್ಮ ಸಂಗಡ ನಿತ್ಯ ವಾದ ಒಡಂಬಡಿಕೆಯನ್ನು ಮಾಡುವೆನು.
ಕರ್ತನಾದ ನಾನು ನ್ಯಾಯವನ್ನು ಪ್ರೀತಿಮಾಡು ತ್ತೇನೆ, ಸುಲಿಗೆಯಿಂದಾದ ದಹನಬಲಿಯನ್ನು ಹಗೆ ಮಾಡುತ್ತೇನೆ. ಅವರ ಕೆಲಸವನ್ನು ಸತ್ಯದಲ್ಲಿ ನಡಿಸು ತ್ತೇನೆ; ಅವರ ಸಂಗಡ ನಿತ್ಯವಾದ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ.
ಆಗ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ --
ನಾನು ನನ್ನ ಕಣ್ಣುಗಳನ್ನು ಅವರ ಮೇಲೆ ಒಳ್ಳೇದಕ್ಕಾಗಿ ಇಡುವೆನು. ಈ ದೇಶಕ್ಕೆ ಅವರನ್ನು ತಿರಿಗಿ ಬರಮಾಡುವೆನು; ಕೆಡವಿ ಹಾಕದೆ ಅವರನ್ನು ಕಟ್ಟುವೆನು, ಕೀಳದೆ ಅವರನ್ನು ನೆಡುವೆನು.
ಈ ಪಟ್ಟಣವು ಅದು ಕಟ್ಟಲ್ಪಟ್ಟ ದಿನವು ಮೊದಲುಗೊಂಡು ಈ ದಿನದ ವರೆಗೂ ನನ್ನ ಕೋಪಕ್ಕೂ ಉಗ್ರಕ್ಕೂ ಗುರಿಯಾಗಿತ್ತು.
ಆದರೆ ತಿರುಗಿಕೊಂಡು ನನ್ನ ಹೆಸರನ್ನು ಅಪವಿತ್ರ ಮಾಡಿ ನೀವು ಅವರ ಮನಸ್ಸು ಬಂದ ಹಾಗೆ ಬಿಡುಗಡೆಯಾಗಿ ಕಳುಹಿಸಿದ್ದ ನಿಮ್ಮ ನಿಮ್ಮ ದಾಸದಾಸಿ ಯರನ್ನು ಒಬ್ಬೊಬ್ಬನು ತಿರಿಗಿ ಬರಮಾಡಿ ನಿಮಗೆ ದಾಸದಾಸಿಯರಾಗುವ ಹಾಗೆ ವಶಮಾಡಿಕೊಂಡಿ ದ್ದೀರಿ.
ಅವರು ನಿರ್ಭಯರಾಗಿ ಅಲ್ಲಿ ವಾಸಿಸುವರು; ಮನೆ ಗಳನ್ನು ಕಟ್ಟುವರು; ದ್ರಾಕ್ಷೇತೋಟಗಳನ್ನು ನೆಡುವರು; ಹೌದು, ಸುತ್ತಲಾಗಿ ಅವರನ್ನು ಅಸಡ್ಡೆ ಮಾಡಿದವರೆಲ್ಲರ ಮೇಲೆ ನಾನು ನ್ಯಾಯ ತೀರಿಸಿದ ಮೇಲೆ ಅವರು ನಿರ್ಭಯರಾಗಿ ವಾಸಿಸುವರು. ಕರ್ತನಾದ ನಾನೇ ಅವರ ದೇವರೆಂದು ತಿಳಿಯುವರು.
ಅವರು ಇನ್ನು ಮೇಲೆ ಅನ್ಯಜನಾಂಗಗಳಿಗೆ ಕೊಳ್ಳೆಯಾಗು ವದಿಲ್ಲ; ಭೂಮಿಯ ಮೃಗಗಳು ಅವರನ್ನು ತಿನ್ನುವದಿಲ್ಲ; ಯಾರೂ ಅವರನ್ನು ಹೆದರಿಸುವವರಿಲ್ಲದೆ ನಿರ್ಭಯ ವಾಗಿ ವಾಸಿಸುವರು.
ಇದಾದ ಮೇಲೆ ನಾನು ಅವರೊಂದಿಗೆ ಸಮಾ ಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಇದು ಅವರೊಂದಿಗೆ ನಿತ್ಯವಾದ ಒಡಂಬಡಿಕೆಯಾಗಿ ರುವದು; ನಾನು ಅವರನ್ನು ಆ ಸ್ಥಳದಲ್ಲಿರಿಸುವೆನು ಅವರನ್ನು ವೃದ್ಧಿಗೊಳಿಸುವೆನು; ನನ್ನ ಪರಿಶುದ್ಧ ಸ್ಥಳವನ್ನು ಎಂದೆಂದಿಗೂ ಅವರ ಮಧ್ಯದಲ್ಲಿಡುವೆನು.
ಬಹಳ ದಿವಸಗಳಾದ ಮೇಲೆ ನಾನು ನಿನ್ನನ್ನು ಪರಿಶೀ ಲಿಸುತ್ತೇನೆ; ವರುಷಗಳ ಅಂತ್ಯದಲ್ಲಿ ನೀನು ಕತ್ತಿಯಿಂದ ಹಿಂತಿರುಗಿಸಲ್ಪಟ್ಟಂಥ ದೇಶಕ್ಕೂ ಯಾವಾಗಲೂ ಬೀಡಾ ಗಿದ್ದ ಇಸ್ರಾಯೇಲ್ ಪರ್ವತಗಳ ಮೇಲೆಯೂ ಜನಾಂಗಗಳೊಳಗಿಂದ ಮುಂದೆ ತರಲ್ಪಟ್ಟು ಎಲ್ಲರೂ ಭದ್ರವಾಗಿ ವಾಸಿಸುವವರ ಬಳಿಗೂ ಬರುವಿ.
ಅವರು ಹೆದರಿಸುವವರಿಲ್ಲದೆ ಕ್ಷೇಮವಾಗಿ ತಮ್ಮ ದೇಶದಲ್ಲಿ ವಾಸಮಾಡಿದಾಗ ಉಂಟಾದ ತಮ್ಮ ನಾಚಿಕೆಯನ್ನೂ ನನಗೆ ವಿರೋಧವಾಗಿ ಅತಿಕ್ರಮಿಸಿದ ಎಲ್ಲಾ ಅತಿಕ್ರಮ ಗಳನ್ನು ಹೊತ್ತ ತರುವಾಯ,
ಆ ದಿನದಲ್ಲಿ ಅವರಿ ಗೋಸ್ಕರ ಅಡವಿಯ ಮೃಗಗಳ ಸಂಗಡಲೂ ಆಕಾಶದ ಪಕ್ಷಿಗಳ ಸಂಗಡಲೂ ಭೂಮಿಯ ಕ್ರಿಮಿಗಳ ಸಂಗಡಲೂ ಒಡಂಬಡಿಕೆ ಮಾಡುವೆನು. ನಾನು ಬಿಲ್ಲನ್ನೂ ಕತ್ತಿ ಯನ್ನೂ ಯುದ್ಧವನ್ನೂ ದೇಶದೊಳಗಿಂದ ಮುರಿದು ಹಾಕಿ ಅವರನ್ನು ನಿರ್ಭಯವಾಗಿ ಮಲಗುವಂತೆ ಮಾಡುವೆನು.
ನಾನು ನಿನ್ನನ್ನು ನಂಬಿಕೆಯಿಂದಲೇ ನಿಶ್ಚಿತಾರ್ಥ ಮಾಡಿಕೊಳ್ಳುವೆನು; ಆಗ ನೀನು ಕರ್ತನನ್ನು ತಿಳಿದುಕೊಳ್ಳುವಿ.
ಹೌದು, ಆತನು ಕರ್ತನ ದೇವಾಲಯವನ್ನು ಕಟ್ಟು ವನು; ಆತನು ಮಹಿಮೆಯನ್ನು ಧರಿಸುವನು; ಕೂತು ಕೊಂಡು ತನ್ನ ಸಿಂಹಾಸನದಲ್ಲಿ ಆಳುವನು, ತನ್ನ ಸಿಂಹಾಸನದಲ್ಲಿ ಯಾಜಕನಾಗಿರುವನು; ಸಮಾಧಾನದ ಆಲೋಚನೆ ಅವರಿಬ್ಬರೊಳಗೆ ಇರುವದು.
ಶಾಶ್ವತವಾದ ಒಡಂಬಡಿಕೆಯ ರಕ್ತದ ಮೂಲಕ ಕುರಿ ಹಿಂಡಿಗೆ ದೊಡ್ಡ ಕುರುಬನಾಗಿರುವ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಬರ ಮಾಡಿದ ಶಾಂತಿದಾಯಕನಾದ ದೇವರು