Home Bibles ☰ Books ಯೆಹೆಜ್ಕೇಲ 33:4 · ಕನ್ನಡ ಬೈಬಲ್
ಯೆಹೆಜ್ಕೇಲ 33:4 · ಕನ್ನಡ ಬೈಬಲ್

ಯಾವನು ಕಹಳೆಯ ಧ್ವನಿಯನ್ನು ಕೇಳಿ ಎಚ್ಚರವಾಗುವದಿಲ್ಲವೋ? ಆಗ ಕತ್ತಿಯು ಬಂದು ಅವನನ್ನು ತೆಗೆದುಕೊಂಡರೆ ಅವನ ರಕ್ತವು ಅವನ ತಲೆಯ ಮೇಲೆಯೇ ಇರುವದು.

Cross references

ಲೇವ್ಯಕಾಂಡ 20:9

ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವ ವನಿಗೆ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು; ಯಾವನು ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವನೋ ಅವನ ರಕ್ತವು ಅವನ ಮೇಲೆಯೇ ಇರುವದು.

ಲೇವ್ಯಕಾಂಡ 20:11

ತನ್ನ ತಂದೆಯ ಹೆಂಡತಿಯೊಡನೆ ಸಂಗಮಿಸುವವನು ತನ್ನ ತಂದೆಯ ಬೆತ್ತಲೆತನವನ್ನು ಕಾಣುವಂತೆ ಮಾಡಿದ್ದಾನೆ; ಅವರಿಬ್ಬರಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸ ಬೇಕು; ಅವರ ರಕ್ತವು ಅವರ ಮೇಲೆ ಇರುವದು;

2 ಸಮುವೇಲ 1:16

ದಾವೀದನು ಅವ ನಿಗೆ--ಕರ್ತನ ಅಭಿಷಿಕ್ತನನ್ನು ಕೊಂದುಹಾಕಿದೆನೆಂದು ನಿನ್ನ ಬಾಯಿ ನಿನಗೆ ವಿರೋಧವಾಗಿ ಸಾಕ್ಷಿಹೇಳಿದ್ದರಿಂದ ನಿನ್ನ ರಕ್ತವು ನಿನ್ನ ತಲೆಯ ಮೇಲೆ ಇರಲಿ ಅಂದನು.

1 ಅರಸುಗಳು 2:37

ಯಾವ ದಿನದಲ್ಲಿ ನೀನು ಹೊರಟು ಕಿದ್ರೋನೆಂಬ ಹಳ್ಳವನ್ನು ದಾಟುವಿಯೋ ಆ ದಿನದಲ್ಲಿ ನಿಶ್ಚಯವಾಗಿ ಸಾಯುವಿ ಎಂದು ಖಂಡಿತಾ ತಿಳಿದುಕೋ. ನಿನ್ನ ರಕ್ತವು ನಿನ್ನ ತಲೆಯ ಮೇಲೆ ಇರುವದು ಅಂದನು.

2 ದಿನವೃತ್ತಾಂತ 25:16

ಅವನು ಅರ ಸನ ಸಂಗಡ ಮಾತನಾಡುತ್ತಿರುವಾಗ ಅರಸನು ಅವ ನಿಗೆ--ಅರಸನ ಯೋಚನಾಕರ್ತರಲ್ಲಿ ನೀನು ಒಬ್ಬ ನಾಗಿದ್ದೀಯೋ? ನೀನು ಯಾಕೆ ಹೊಡೆಯಲ್ಪಡಬೇಕು ಅಂದನು. ಆಗ ಪ್ರವಾದಿಯು--ನೀನು ನನ್ನ ಯೋಚನೆ ಯನ್ನು ಕೇಳದೆ ಇದನ್ನು ಮಾಡಿದ್ದರಿಂದ ದೇವರು ನಿನ್ನನ್ನು ನಾಶಮಾಡಲು ತೀರ್ಮಾನಿಸಿದ್ದಾನೆಂದು ನಾನು ಬಲ್ಲೆನು ಎಂದು ಹೇಳಿಬಿಟ್ಟನು.

ಸಾಮೇತಿಗಳು 29:1

ಅನೇಕ ಸಲ ಗದರಿಸಲ್ಪಟ್ಟರೂ ಬಗ್ಗದಕುತ್ತಿಗೆಯವನು ಏಳದ ಹಾಗೆ ಫಕ್ಕನೆ ಮುರಿದು ಬೀಳುವನು.

ಯೆರೆಮಿಯ 6:17

ಯೆಹೂದದ ಪಟ್ಟಣಗಳಲ್ಲಿಯೂ ಯೆರೂಸ ಲೇಮಿನ ಬೀದಿಗಳಲ್ಲಿಯೂ ಅವರು ಮಾಡುವದನ್ನು ನೀನು ನೋಡುವದಿಲ್ಲವೋ? ಆಕಾಶದ ರಾಣಿಗೆ ದೋಸೆಗಳನ್ನು ಮಾಡುವದಕ್ಕೂ ಬೇರೆ ದೇವರುಗಳಿಗೆ ಪಾನದರ್ಪಣೆಯನ್ನು ಹೊಯ್ಯುವದಕ್ಕೂ

ಯೆರೆಮಿಯ 25:3

ಒಂದು ವೇಳೆ ಅವರು ಕೇಳಿ ನಾನು ಅವರ ಕೃತ್ಯಗಳ ಕೆಟ್ಟತನದ ನಿಮಿತ್ತ ಅವರಿಗೆ ಮಾಡುವದಕ್ಕೆ ಆಲೋಚಿಸಿದ ಕೇಡಿನ ವಿಷಯ ಪಶ್ಚಾತ್ತಾಪಪಡುವ ಹಾಗೆ ತಮ್ಮ ತಮ್ಮ ಕೆಟ್ಟ ಮಾರ್ಗ ವನ್ನು ಬಿಟ್ಟು ತಿರುಗಿಕೊಂಡಾರು.

ಯೆಹೆಜ್ಕೇಲ 18:13

ಬಡ್ಡಿಗೆ ಕೊಟ್ಟು ಲಾಭ ತೆಗೆದುಕೊಂಡು ಅವನು ಬದುಕುವನೋ? ಅವನು ಬದುಕುವದಿಲ್ಲ, ಅವನು ಈ ಅಸಹ್ಯಗಳನ್ನೆಲ್ಲಾ ಮಾಡಿ ದ್ದಾನೆ; ಅವನು ನಿಶ್ಚಯವಾಗಿ ಸಾಯುವನು ಅವನ ರಕ್ತವು ಅವನ ಮೇಲೆಯೇ ಇರುವದು.

ಯೆಹೆಜ್ಕೇಲ 33:5

ಅವನು ಕಹಳೆಯ ಧ್ವನಿಯನ್ನು ಕೇಳಿ ಎಚ್ಚರಗೊಳ್ಳಲಿಲ್ಲ; ಅವನ ರಕ್ತವು ಅವನ ಮೇಲೆ ಇರುವದು. ಆದರೆ ಎಚ್ಚರಿಕೆಯಾಗುವವನು ತನ್ನ ಪ್ರಾಣವನ್ನು ಉಳಿಸಿಕೊ ಳ್ಳುವನು.

ಯೆಹೆಜ್ಕೇಲ 33:9

ಆದಾಗ್ಯೂ ನೀನು ಒಂದು ವೇಳೆ ದುಷ್ಟನನ್ನು ಅವನ ದುಮಾರ್ಗಗಳಿಂದ ತಿರುಗಲು ಎಚ್ಚರಿಸಿದರೂ ಅವನು ತನ್ನ ದುಷ್ಟಮಾರ್ಗದಿಂದ ತಿರುಗದಿದ್ದರೆ ಅವನ ಅಕ್ರಮಗಳಲ್ಲಿಯೇ ಸಾಯುವನು; ಆದರೆ ನೀನು ನಿನ್ನ ಪ್ರಾಣವನ್ನು ತಪ್ಪಿಸಿಕೊಳ್ಳುವಿ.

ಜೆಕರ್ಯ 1:2

ಕರ್ತನು ನಿಮ್ಮ ಪಿತೃಗಳ ಮೇಲೆ ಬಹು ಕೋಪಗೊಂಡಿ ದ್ದಾನೆ.

ಜೆಕರ್ಯ 1:4

ನೀವು ನಿಮ್ಮ ಪಿತೃಗಳ ಹಾಗಿರಬೇಡಿರಿ; ಅವರಿಗೆ ಪೂರ್ವದ ಪ್ರವಾದಿಗಳು ಕೂಗಿ--ನಿಮ್ಮ ಕೆಟ್ಟ ಮಾರ್ಗಗಳನ್ನೂ ನಿಮ್ಮ ಕೆಟ್ಟ ಕ್ರಿಯೆಗಳನ್ನೂ ಬಿಟ್ಟು ತಿರುಗಿರಿ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆಂದು ಹೇಳಿದರು; ಆದರೆ ಅವರು ಕೇಳಲಿಲ್ಲ; ನನ್ನಲ್ಲಿ ಲಕ್ಷ್ಯ ವಿಡಲಿಲ್ಲವೆಂದು ಕರ್ತನು ಅನ್ನುತ್ತಾನೆ.

ಅಪೋಸ್ತಲರ ಕೃತ್ಯಗಳು 18:6

ಅವರು ಎದುರಿಸಿ ದೇವದೂಷಣೆ ಮಾಡಲಾಗಿ ಅವನು ತನ್ನ ವಸ್ತ್ರವನ್ನು ಝಾಡಿಸಿ ಅವರಿಗೆ--ನಿಮ್ಮ ರಕ್ತವು ನಿಮ್ಮ ತಲೆಗಳ ಮೇಲೆ ಇರಲಿ; ನಾನು ಇಂದಿನಿಂದ ದೋಷರಹಿತನಾಗಿ ಅನ್ಯಜನರ ಬಳಿಗೆ ಹೋಗುತ್ತೇನೆ ಎಂದು ಹೇಳಿ

Interlinear

Choose Theme