Home Bibles ಯೆಹೆಜ್ಕೇಲ 3:24 · ಕನ್ನಡ ಬೈಬಲ್
ಯೆಹೆಜ್ಕೇಲ 3:24 · ಕನ್ನಡ ಬೈಬಲ್

ಆಮೇಲೆ ಆತ್ಮನು ನನ್ನೊಳಗೆ ಪ್ರವೇಶಿಸಿ ನನ್ನನ್ನು ನನ್ನ ಪಾದದ ಮೇಲೆ ನಿಲ್ಲಿಸಿ ಮಾತಾಡಿ ನನಗೆ ಹೇಳಿದ್ದೇನೆಂದರೆ--ಹೋಗು, ನಿನ್ನ ಮನೆಯಲ್ಲಿ ನೀನು ಅಡಗಿಕೋ.

Cross references

ಯೆಹೆಜ್ಕೇಲ 2:2

ಹೀಗೆ ಆತನು ನನ್ನ ಸಂಗಡ ಮಾತನಾಡಿದಾಗ ಆತ್ಮನು ನನ್ನೊಳಗೆ ಪ್ರವೇಶಿಸಿ ನನ್ನನ್ನು ನಿಂತುಕೊಳ್ಳುವಂತೆ ಮಾಡಿತು; ಈ ರೀತಿ ನನ್ನ ಸಂಗಡ ಮಾತನಾಡುವದನ್ನು ನಾನು ಕೇಳಿದೆನು.

ಯೆಹೆಜ್ಕೇಲ 4:1

ಇದಲ್ಲದೆ ಮನುಷ್ಯಪುತ್ರನೇ, ನೀನು ಒಂದು ಹಂಚನ್ನು ತೆಗೆದುಕೊಂಡು ನಿನ್ನ ಮುಂದಿಟ್ಟು ಅದರ ಮೇಲೆ ಯೆರೂಸಲೇಮ್‌ ನಗರದ ನಕ್ಷೆಯನ್ನು ಬರೆ.

ಯೆಹೆಜ್ಕೇಲ 37:10

ನಾನು ಆತನ ಆಜ್ಞೆಯ ಹಾಗೆಯೇ ಪ್ರವಾದಿಸಿದೆನು; ಅವುಗಳಲ್ಲಿ ಉಸಿರು ಬಂತು; ಅವುಗಳೆಲ್ಲಾ ಕಾಲೂರಿ ನಿಂತು ಅತ್ಯಂತ ಮಹಾ ಸೈನ್ಯ ವಾದವು.

ದಾನಿಯೇಲ 10:8

ನಾನು ಒಬ್ಬನೇ ಉಳಿದು ಈ ದೊಡ್ಡ ದರ್ಶನವನ್ನು ನೋಡಿದೆನು; ನನ್ನಲ್ಲಿ ತ್ರಾಣವು ಇರ ಲಿಲ್ಲ. ನನ್ನ ಸೌಂದರ್ಯವು ನನ್ನಲ್ಲಿ ಕುಂದಿಹೋಯಿತು. ನನಗೆ ತ್ರಾಣವು ಇಲ್ಲದೆ ಹೋಯಿತು.

ದಾನಿಯೇಲ 10:19

ಹೇಳಿದ್ದೇ ನಂದರೆ--ಓ ಅತಿಪ್ರಿಯನಾದ ಮನುಷ್ಯನೇ, ಭಯಪಡ ಬೇಡ; ನಿನಗೆ ಸಮಾಧಾನವಾಗಲಿ; ಬಲವಾಗಿರು; ಹೌದು ಬಲವಾಗಿರು; ಯಾವಾಗ ಅವನು ನನ್ನ ಸಂಗಡ ಹೀಗೆ ಮಾತನಾಡಿದನೋ ನಾನು ನನ್ನ ಬಲವನ್ನು ಹೊಂದಿ--ನನ್ನ ಒಡೆಯನೇ ಮಾತನಾಡು, ನೀನು ನನ್ನನ್ನು ಬಲಪಡಿಸಿದ್ದೀ ಎಂದು ಹೇಳಿದೆನು.

Interlinear

Choose Theme