ಅವರು ಗೋಳಾಡುತ್ತಾ ನಿನ್ನ ವಿಷಯವಾಗಿ ಶೋಕ ಗೀತವನ್ನೆತ್ತಿ ಹೀಗೆ ಪ್ರಲಾಪಿಸುವರು--ಸಮುದ್ರದ ನಡುವೆ ಹಾಳಾಗಿರುವ ತೂರಿನಂತ ಪಟ್ಟಣ ಯಾವದು?
Cross references
ಹಾದು ಹೋಗುವ ವರೆಲ್ಲರೇ, ಇದು ನಿಮಗೆ ಏನೂ ಅಲ್ಲವೋ? ಇಗೋ, ಕರ್ತನ ಕೋಪ ಉರಿಯುವ ದಿನದಲ್ಲಿ ನನ್ನನ್ನು ಸಂಕಟಪಡಿಸಿದ ನನ್ನ ದುಃಖದ ಹಾಗೆ ಬೇರೆ ಯಾವ ದುಃಖವಾದರೂ ಇದ್ದರೆ ನೋಡಿರಿ.
ಯೆರೂಸಲೇಮಿನ ಕುಮಾರ್ತೆಯೇ, ನಾನು ಯಾವದನ್ನು ನಿನಗೆ ಸಾಕ್ಷಿಯ ನ್ನಾಗಿಡಲಿ? ಯಾವದನ್ನು ನಿನಗೆ ಸಮಾನ ಮಾಡಲಿ? ಚೀಯೋನಿನ ಮಗಳಾದ ಕನ್ಯೆಯೇ, ನಿನ್ನನ್ನು ಆದರಿಸುವ ಹಾಗೆ ನಾನು ಯಾವದನ್ನು ನಿನಗೆ ಸಮಾನಮಾಡಲಿ? ನಿನ್ನ ಮುರಿಯುವಿಕೆಯು ಸಮುದ್ರದ ಹಾಗೆ ದೊಡ್ಡ ದಾಗಿದೆ, ನಿನ್ನನ್ನು ಗುಣಪಡಿಸುವವರು ಯಾರು?
ಅವರು ತೂರಿನ ಗೋಡೆಗಳನ್ನು ಕೆಡಿಸಿ ಅದರ ಗೋಪುರಗಳನ್ನು ಒಡೆದು ಬಿಡುವರು, ನಾನು ಅದರ ದೂಳನ್ನು ಅದರಿಂದ ಒರಿಸಿ ಅದನ್ನು ಬಂಡೆಯ ತುದಿಯಂತೆ ಮಾಡುವೆನು.
ನಿನ್ನ ವಿಷಯದಲ್ಲಿ ಗೋಳಾಟವನ್ನೆತ್ತಿ ನಿನಗೆ ಹೇಳುವದೇನಂದರೆ, ಸಮು ದ್ರಗಳ ಬಳಿಯಲ್ಲಿ ವಾಸಿಸಿದವಳೇ, ಹೆಸರು ಗೊಂಡ ಪಟ್ಟಣವೇ, ನೀನೂ ತನ್ನ ನಿವಾಸಿಗಳೂ ಸಮುದ್ರದಲ್ಲಿ ಬಲವಾಗಿದ್ದವಳೇ, ಅದರ ಸಮುದ್ರ ಸಂಚಾರವನ್ನೂ ಭಯಪಡಿಸಿದವಳೇ, ಅಯ್ಯೋ, ಹೇಗೆ ನಾಶವಾದಿ?
ಮನುಷ್ಯಪುತ್ರನೇ, ಈಗ ತೂರಿನ ಬಗ್ಗೆ ನೀನು ಗೋಳಾಟವನ್ನೆತ್ತು;
ಹುಟ್ಟುಹಾಕುವವರು ನಿನ್ನನ್ನು (ಮಹಾತರಂಗ ಗಳಿಗೆ) ಸಿಕ್ಕಿಸಿದ್ದಾರೆ. ಮೂಡಣ ಗಾಳಿಯು ಸಮುದ್ರದ ಮಧ್ಯದಲ್ಲಿ ನಿನ್ನನ್ನು ಮುರಿದಿದೆ.
ಅವಳ ದಹನದ ಹೊಗೆಯನ್ನು ನೋಡುತ್ತಾ--ಈ ಮಹಾ ಪಟ್ಟಣಕ್ಕೆ ಸಮಾನವಾದ ಪಟ್ಟಣವು ಯಾವದು ಎಂದು ಕೂಗಿ ಹೇಳಿದರು.