ಪಾರಸೀಯರೂ ಲೂದ್ಯರೂ ಪೂಟ್ಯರೂ ನಿನ್ನ ಸೈನ್ಯಾಧಿಕಾರಿಗಳಾಗಿ ನಿನ್ನ ಸೈನ್ಯದಲ್ಲಿದ್ದರು; ಗುರಾಣಿ ಯನ್ನೂ ಶಿರಸ್ತ್ರಾಣವನ್ನೂ ನಿನ್ನಲ್ಲಿ ತೂಗಿಸಿದರು. ಇವರು ನಿನಗೆ ಮಹತ್ತನ್ನು ಕೊಟ್ಟರು.
Cross references
ಹಾಮನ ಕುಮಾರರು ಯಾರಂದರೆ, ಕೂಷ್ ಮಿಚ್ರಯಿಮ್ ಪೂತ್ ಕಾನಾನ್ ಎಂಬವರು.
ಮಿಚ್ರಯಿಮ್ಯನಿಂದ ಲೂದ್ಯರೂ ಅನಾಮ್ಯರೂ ಲೆಹಾಬ್ಯರೂ ನಫ್ತುಹ್ಯರೂ
ಶೇಮನ ಮಕ್ಕಳು ಯಾರಂದರೆ, ಏಲಾಮ್ ಅಶ್ಶೂರ್ ಅರ್ಪಕ್ಷದ್ ಲೂದ್ ಅರಾಮ್.
ಹಾಮನ ಮಕ್ಕಳು -- ಕೂಷನು, ಮಿಚ್ರಯಾ ಮನು, ಪೂಟನು, ಕಾನಾನನು.
ಮಿಚ್ರಯಿಮ್ಯನ್ನೂ ಲೂದ್ಯರನ್ನೂ ಅನಾಮ್ಯರನ್ನೂ ಲೆಹಾಬ್ಯರನ್ನೂ ನಫ್ತುಹ್ಯರನ್ನೂ ಪತ್ರುಸ್ಯರನ್ನೂ ಕಫ್ತೋರ್ಯರನ್ನೂ ಕಸ್ಲುಹ್ಯರನ್ನೂ ಪಡೆದನು;
ಶೇಮನ ಮಕ್ಕಳು--ಏಲಾಮನು ಅಶ್ಯೂರನು, ಅರ್ಪಕ್ಷದನು, ಲೂದನು, ಅರಾಮನು, ಊಚನು, ಹೂಲನು, ಗೆತೆರನು, ಮೆಷಕನು.
ನಿನ್ನ ಕುತ್ತಿಗೆ ದಾವೀದನ ಆಯುಧ ಶಾಲೆಗೋಸ್ಕರ ಕಟ್ಟಿಸಲ್ಪಟ್ಟ ಬುರುಜಿನ ಹಾಗೆ ಇದೆ; ಅದರಲ್ಲಿ ಸಾವಿರ ಗುರಾಣಿಗಳು ತೂಗ ಹಾಕಿವೆ; ಅವುಗಳೆಲ್ಲಾ ಪರಾಕ್ರಮಶಾಲಿಗಳ ಡಾಲುಗಳು.
ಅವರ ಮಧ್ಯದಲ್ಲಿ ಒಂದು ಗುರುತನ್ನಿಟ್ಟು ಅವರಲ್ಲಿ ತಪ್ಪಿಸಿಕೊಂಡವರನ್ನು ಜನಾಂಗಗಳಿಗೂ ತಾರ್ಷೀಷಿಗೂ ಫೂಲಿಗೂ ಲೂದಿಗೂ ಬಿಲ್ಲು ಬೊಗ್ಗಿಸುವವರಿಗೂ ತೂಬಲಿಗೂ ಯಾವಾನಿಗೂ ನನ್ನ ಸಮಾಚಾರವನ್ನು ಕೇಳದೆ ನನ್ನ ಮಹಿಮೆಯನ್ನು ನೋಡದೆ ಇರುವ ದೂರದ ದ್ವೀಪ ಗಳಿಗೂ ಕಳುಹಿಸುವೆನು; ಅವರು ಅನ್ಯಜನಾಂಗಗಳಲ್ಲಿ ನನ್ನ ಮಹಿಮೆಯನ್ನು ತಿಳಿಸುವರು.
ಅರ್ವಾದಿನವರು ನಿನ್ನ ದಂಡಿನ ಸಂಗಡ ನಿನ್ನ ಗೋಡೆಗಳ ಸುತ್ತಲೂ ಮೇಲೆ ಇದ್ದರು; ಗಮ್ಮಾದ್ಯರು ನಿನ್ನ ಕೊತ್ತಲುಗಳಲ್ಲಿ ಕಾವಲಾಗಿದ್ದರು. ತಮ್ಮ ಖೇಡ್ಯಗಳನ್ನು ಸುತ್ತ ಮುತ್ತಲೂ ನಿನ್ನ ಗೋಡೆಗಳ ಮೇಲೆ ನೇತುಹಾಕಿ ಇವರು ನಿನ್ನ ಸೌಂದರ್ಯವನ್ನು ಪೂರ್ತಿಗೊಳಿಸಿದರು.
ಐಥಿಯೋಪ್ಯ, ಲಿಬಿಯ ಮತ್ತು ಲಿಡಿಯ ಎಲ್ಲಾ ಮಿಶ್ರಜನರೂ ಕೂಬ್ಯರೂ ಮಿತ್ರರಾಜ್ಯ ದವರೂ ಅವರ ಸಂಗಡ ಕತ್ತಿಯಿಂದ ಹತರಾಗುವರು.
ಅವರೊಂದಿಗೆ ಪರ್ಷಿಯಾ ಇಥಿಯೋಪ್ಯ ಲಿಬಿಯಾ ಇವರೆಲ್ಲರೊಂದಿಗೆ ಗುರಾಣಿ ಮತ್ತು ಶಿರಸ್ತ್ರಾಣಗಳು ಇದ್ದವು.
ಪೆರೇಸ್ ಅಂದರೆ ನಿನ್ನ ರಾಜ್ಯವು ವಿಭಿನ್ನವಾಗಿ ಮೇದ್ಯಯರಿಗೂ ಪಾರಸೀಯರಿಗೂ ಕೊಡಲ್ಪಟ್ಟಿದೆ ಎಂಬದಾಗಿ ಅರಿಕೆಮಾಡಿದನು.
ಕೂಷೂ ಐಗುಪ್ತವೂ ಅದರ ಬಲ ವಾಗಿದ್ದವು; ಮತ್ತು ಲೆಕ್ಕವಿಲ್ಲದ್ದಾಗಿತ್ತು; ಪೂಟರೂ ಲೂಬ್ಯರೂ ನಿನ್ನ ಸಹಾಯಕರಾಗಿದ್ದರು.