Home Bibles ಯೆಹೆಜ್ಕೇಲ 24:23 · ಕನ್ನಡ ಬೈಬಲ್
ಯೆಹೆಜ್ಕೇಲ 24:23 · ಕನ್ನಡ ಬೈಬಲ್

ನಿಮ್ಮ ರುಮಾಲುಗಳು ತಲೆಯ ಮೇಲೆಯೂ ನಿಮ್ಮ ಜೋಡು ಗಳು ನಿಮ್ಮ ಪಾದಗಳ ಅಡಿಯಲ್ಲಿಯೂ ಇರುವವು; ನೀವು ಗೋಳಾಡದೆ ಅಳದೆ ನಿಮ್ಮ ಅಕ್ರಮಗಳಿಂದ ಕುಂದಿಹೋಗಿ ಒಬ್ಬರ ಸಂಗಡಲೊಬ್ಬರು ನರುಳುವಿರಿ.

Cross references

ಲೇವ್ಯಕಾಂಡ 26:39

ನಿಮ್ಮಲ್ಲಿ ಉಳಿದವರು ತಮ್ಮ ಅಕ್ರಮದಿಂದ ನಿಮ್ಮ ಶತ್ರುಗಳ ದೇಶದಲ್ಲಿ ಕ್ಷೀಣವಾಗುವರು; ತಮ್ಮ ಪಿತೃಗಳ ಅಕ್ರಮಗಳಿಂದ ಅವರ ಸಂಗಡ ಕ್ಷೀಣವಾಗುವರು.

ಯೋಬ 27:15

ಅವ ನಿಗೆ ಉಳಿದವರು ಮರಣದಲ್ಲಿ ಹೂಣಲ್ಪಡುವರು; ಅವನ ವಿಧವೆಗಳು ಅಳದೆ ಇರುವರು.

ಕೀರ್ತನೆಗಳು 78:64

ಅವರ ಯಾಜಕರು ಕತ್ತಿಯಿಂದ ಸಂಹಾರವಾದರು; ಅವರ ವಿಧವೆಯರು ಗೋಳಾಡಲಿಲ್ಲ.

ಯೆಶಾಯ 59:11

ನಾವೆಲ್ಲರೂ ಕರಡಿಗಳ ಹಾಗೆ ಗುರುಗುಟ್ಟುತ್ತೇವೆ; ಪಾರಿವಾಳಗಳ ಹಾಗೆ ಬಹಳವಾಗಿ ಮೂಲ್ಗುತ್ತೇವೆ; ನ್ಯಾಯಕ್ಕಾಗಿ ಕಾದುಕೊಳ್ಳುತ್ತೇವೆ, ಆದರೆ ಅದು ಇಲ್ಲವೇ ಇಲ್ಲ; ರಕ್ಷಣೆಯಾದರೋ ಅದು ನಮಗೆ ದೂರವಾಗಿದೆ.

ಯೆಹೆಜ್ಕೇಲ 4:17

ಅವರಿಗೆ ರೊಟ್ಟಿ ಮತ್ತು ನೀರಿನ ಕೊರತೆಯಿಂದ ಆಶ್ಚರ್ಯಪಟ್ಟು ಒಬ್ಬರ ಸಂಗಡ ಒಬ್ಬರು ತಮ್ಮ ಅಕ್ರಮಗಳಿಗಾಗಿ ಕ್ಷಯಿಸಿ ಹೋಗುವರು.

ಯೆಹೆಜ್ಕೇಲ 33:10

ಓ ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಮನೆತನದವರೊಂದಿಗೆ ಮಾತನಾಡಿ ಹೀಗೆ ಹೇಳು --ನಮ್ಮ ಅಪರಾಧಗಳೂ ಪಾಪಗಳೂ ನಮ್ಮ ಮೇಲಿದ್ದು ನಾವು ಅವುಗಳಲ್ಲಿ ಕ್ಷೀಣಿಸುತ್ತಾ ಹೋದರೆ ಹೇಗೆ ಬದುಕುವೆವು; ಎಂದು ಹೇಳುವಿರಲ್ಲಾ?

Interlinear

Choose Theme