Home Bibles ಯೆಹೆಜ್ಕೇಲ 23:48 · ಕನ್ನಡ ಬೈಬಲ್
ಯೆಹೆಜ್ಕೇಲ 23:48 · ಕನ್ನಡ ಬೈಬಲ್

ಹೀಗೆ ಸ್ತ್ರೀಯರೆಲ್ಲರೂ ನಿಮ್ಮ ದುಷ್ಕ ರ್ಮದ ಪ್ರಕಾರ ಮಾಡದಿರಲೆಂದು ಬೋಧಿಸಿ ದೇಶ ದೊಳಗಿಂದ ದುಷ್ಕರ್ಮವನ್ನು ತೆಗೆದುಹಾಕುವೆನು.ನಿಮ್ಮ ದುಷ್ಕರ್ಮದ ಫಲವನ್ನು ನಿಮ್ಮ ಮೇಲೆಯೇ ಮುಯ್ಯಿ ತೀರಿಸುವೆನು. ನೀವು ನಿಮ್ಮ ವಿಗ್ರಹಗಳ ಪಾಪಗಳನ್ನು ಹೊರುವಿರಿ; ಆಗ ದೇವರಾದ ಕರ್ತನು ನಾನೇ ಎಂದು ತಿಳಿದುಕೊಳ್ಳುವಿರಿ.

Cross references

ದ್ವಿತೀಯೋಪದೇಶಕಾಂಡ 13:11

ಆಗ ಇಸ್ರಾಯೇ ಲೆಲ್ಲಾ ಕೇಳಿ ಭಯಪಟ್ಟು ಇನ್ನು ಮೇಲೆ ನಿನ್ನ ಮಧ್ಯದಲ್ಲಿ ಇಂಥಾ ಕೆಟ್ಟಕಾರ್ಯವನ್ನು ಮಾಡುವದಿಲ್ಲ.

ದ್ವಿತೀಯೋಪದೇಶಕಾಂಡ 13:12

ನಿನ್ನ ದೇವರಾದ ಕರ್ತನು ನಿನಗೆ ವಾಸಮಾಡು ವದಕ್ಕೆ ಕೊಡುವ ನಿನ್ನ ಪಟ್ಟಣಗಳೊಳಗೆ ಒಂದರಲ್ಲಿ

ಯೆಶಾಯ 26:9

ರಾತ್ರಿಯಲ್ಲಿ ನಿನ್ನನ್ನು ಮನಃಪೂರ್ವಕವಾಗಿ ಬಯಸಿದ್ದೇನೆ, ಹೌದು, ನನ್ನಲ್ಲಿ ರುವ ನನ್ನ ಆತ್ಮದೊಂದಿಗೆ ನಿನ್ನನ್ನು ಮುಂಜಾನೆಯಲ್ಲಿ ಹುಡುಕುತ್ತಿದ್ದೇನೆ; ಭೂಮಿಗೆ ನಿನ್ನ ನ್ಯಾಯತೀರ್ವಿಕೆ ಗಳು ನಡೆಯುವಾಗಲೇ ಭೂಲೋಕದ ನಿವಾಸಿಗಳು ನೀತಿಯನ್ನು ಕಲಿಯುತ್ತಾರೆ.

ಯೆಹೆಜ್ಕೇಲ 5:15

ಹೀಗೆ ನಾನು ಕೋಪ ದಿಂದಲೂ ಉಗ್ರತ್ವದಿಂದಲೂ ಉಗ್ರತ್ವದ ಗದರಿಕೆಗ ಳಿಂದಲೂ ನಿನ್ನಲ್ಲಿ ನ್ಯಾಯತೀರ್ಪುಗಳನ್ನು ನಡಿಸು ವಾಗ ನಿನ್ನ ಸುತ್ತಲಿರುವ ಜನಾಂಗಗಳಿಗೆ ನಿಂದೆಯೂ ದೂಷಣೆಯೂ ಶಿಕ್ಷೆಯೂ ವಿಸ್ಮಯವೂ ಆಗುವದು, ಕರ್ತನಾದ ನಾನೇ ಇದನ್ನು ಹೇಳಿದ್ದೇನೆ.

ಯೆಹೆಜ್ಕೇಲ 6:6

ನಿಮ್ಮ ನಗರದಲ್ಲಿ ವಾಸಮಾಡುವ ನಿಮ್ಮ ಎಲ್ಲಾ ಸ್ಥಳಗಳು ಹಾಳುಮಾಡಲ್ಪಡುವವು; ಎತ್ತರವಾದ ಸ್ಥಳಗಳೂ ನಾಶ ಮಾಡಲ್ಪಡುವವು; ಹೀಗೆ ನಿಮ್ಮ ಯಜ್ಞವೇದಿಗಳು ನಾಶವಾಗಿಯೂ ಹಾಳಾಗಿಯೂ ಹೋಗುವವು. ನಿಮ್ಮ ವಿಗ್ರಹಗಳು ಒಡೆಯಲ್ಪಟ್ಟು ಇಲ್ಲದಂತಾಗುವವು. ನೀವು ರೂಪಿಸಿದ ಪ್ರತಿಮೆಗಳು ಕಡಿದುಹಾಕಲ್ಪಟ್ಟು ಅಳಿಸ ಲ್ಪಡುವವು.

ಯೆಹೆಜ್ಕೇಲ 16:41

ಅವರು ನಿನ್ನ ಮನೆಗಳನ್ನು ಸುಟ್ಟು ಬಹಳ ಸ್ತ್ರೀಯರ ಕಣ್ಣುಗಳ ಮುಂದೆ ನಿನಗೆ ನ್ಯಾಯ ತೀರಿಸುವರು; ನೀನು ವ್ಯಭಿಚಾರ ಮಾಡುವದನ್ನು ನಾನು ನಿಲ್ಲಿಸುವೆನು; ಆಗ ನೀನು ಕೂಲಿ ಸಹ ಕೊಡುವದನ್ನು ನಿಲ್ಲಿಸುವೆನು;

ಯೆಹೆಜ್ಕೇಲ 22:15

ನಿನ್ನನ್ನು ಅನ್ಯ ಜನಾಂಗಗಳಲ್ಲಿ ಚದರಿಸಿ, ದೇಶಗಳಲ್ಲಿ ಹರಡಿಸುವೆನು; ನಿನ್ನ ಅಶುದ್ಧತ್ವವನ್ನು ನಿನ್ನಿಂದ ತೆಗೆದು ನಾಶಮಾಡುವೆನು.

ಯೆಹೆಜ್ಕೇಲ 23:27

ಹೀಗೆ ನಾನು ನಿನ್ನ ದುಷ್ಕರ್ಮವನ್ನು ನೀನು ಐಗುಪ್ತದಲ್ಲಿದ್ದಂದಿನಿಂದ ನಡೆಸಿದ ವ್ಯಭಿಚಾರವನ್ನು ನಿನ್ನಿಂದ ತೊಲಗಿಸುವೆನು; ಆಮೇಲೆ ನೀನು ಅವರ ಕಡೆಗೆ ಕಣ್ಣೆತ್ತದೆ, ಐಗುಪ್ತವನ್ನು ಜ್ಞಾಪಕಕ್ಕೆ ತರದೇ ಇರುವಿ.

ಯೆಹೆಜ್ಕೇಲ 36:25

ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಚಿಮುಕಿಸುತ್ತೇನೆ ಮತ್ತು ನೀವು ಶುದ್ಧರಾಗುವಿರಿ; ಅಶುದ್ಧತ್ವಗಳಿಂದಲೂ ನಿಮ್ಮ ಎಲ್ಲಾ ವಿಗ್ರಹಗಳಿಂದಲೂ ನಿಮ್ಮನ್ನು ಶುದ್ಧೀಕರಿಸುವೆನು.

ಮೀಕ 5:11

ನಿನ್ನ ದೇಶದ ಪಟ್ಟಣಗಳನ್ನು ಕಡಿದುಬಿಟ್ಟು ನಿನ್ನ ಕೋಟೆಗಳನ್ನೆಲ್ಲಾ ಕೆಡವಿಹಾಕುವೆನು.

ಸೆಫನ್ಯ 1:3

ಮನುಷ್ಯರನ್ನೂ ಮೃಗಗಳನ್ನೂ ನಾಶ ಮಾಡುವೆನು. ಆಕಾಶದ ಪಕ್ಷಿಗಳನ್ನೂ ಸಮುದ್ರದ ವಿಾನುಗಳನ್ನೂ ದುಷ್ಟರ ಸಂಗಡ ಅಭ್ಯಂತರ ಮಾಡುವ ವುಗಳನ್ನೂ ಹಾಳುಮಾಡುವೆನು: ಮನುಷ್ಯರನ್ನು ದೇಶದೊಳಗಿಂದ ಕಡಿದುಬಿಡುವೆನು ಎಂದು ಕರ್ತನು ಅನ್ನುತ್ತಾನೆ.

1 ಕೊರಿಂಥದವರಿಗೆ 10:6

ಅವರು ಕೆಟ್ಟವಿಷಯಗಳನ್ನು ಆಶಿಸಿದಂತೆ ನಾವು ಆಶಿಸುವವರಾಗಬಾರದೆಂಬದಕ್ಕಾಗಿ ಈ ಸಂಗತಿ ಗಳು ನಮಗೆ ನಿದರ್ಶನಗಳಾಗಿವೆ.

2 ಪೇತ್ರ 2:6

ಆತನು ಸೊದೋಮ ಗೊಮೋರ ಪಟ್ಟಣಗಳನ್ನು ಬೂದಿ ಮಾಡಿ ಇನ್ನು ಮೇಲೆ ಭಕ್ತಿಹೀನರಾಗಿ ಬದುಕುವವರ ಗತಿಗೆ ದೃಷ್ಟಾಂತವಾಗಿ ಅವುಗಳಿಗೆ ದಂಡನೆಯನ್ನು ವಿಧಿಸಿದನು.

Interlinear

Choose Theme