ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಅವರಿಗೆ ವಿರೋಧವಾಗಿ ಸಂಘವನ್ನು ಕೂಡಿಸಿ ಅವರನ್ನು ತೆಗೆದುಹಾಕಲ್ಪಡು ವದಕ್ಕೂ ಸೂರೆಗೂ ಒಪ್ಪಿಸುವೆನು.
Cross references
ಅವರು ಬಹು ಕ್ರೂರವಾದ ಮರಣಗಳಿಂದ ಸಾಯುವರು; ಅವರಿಗೋಸ್ಕರ ಗೋಳಾಟ ಆಗುವದಿಲ್ಲ; ಅವರು ಹೂಣಿಡಲ್ಪಡುವದಿಲ್ಲ; ಭೂಮಿಯ ಮೇಲೆ ಅವರು ಗೊಬ್ಬರವಾಗುವರು; ಕತ್ತಿಯಿಂದಲೂ ಕ್ಷಾಮದಿಂದಲೂ ಸಂಹಾರವಾಗುವರು; ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರ ವಾಗುವವು.
ಆಗ ನಾನು ಕುಂಬಾರನ ಮನೆಗೆ ಇಳಿದುಹೋದೆನು; ಇಗೋ, ಅವನು ಚಕ್ರದ ಮೇಲೆ ಕೆಲಸಮಾಡುತ್ತಿದ್ದನು.
ನೀವು ನನ್ನ ಮಾತುಗಳನ್ನು ಕೇಳದ ಕಾರಣ ಇಗೋ, ಕರ್ತನು ಹೇಳುವದೇನಂದರೆ--ನಾನು ಕಳು ಹಿಸಿ ಉತ್ತರ ದಿಕ್ಕಿನ ಗೋತ್ರಗಳೆಲ್ಲವನ್ನೂ ನನ್ನ ಸೇವಕ ನಾದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನೂ ತಕ್ಕೊಂಡು, ಈ ದೇಶಕ್ಕೆ ವಿರೋಧವಾಗಿಯೂ ಅದರ ನಿವಾಸಿಗಳಿಗೆ ವಿರೋಧವಾಗಿಯೂ ಸುತ್ತಲಿರುವ ಈ ಎಲ್ಲಾ ಜನಾಂಗಗಳಿಗೆ ವಿರೋಧವಾಗಿಯೂ ಕರೆಯಿಸಿ ಅವರನ್ನು ಸಂಪೂರ್ಣ ನಾಶಮಾಡಿ ಅವರನ್ನು ವಿಸ್ಮ ಯಕ್ಕೂ ಸಿಳ್ಳಿಡುವಿಕೆಗೂ ಗುರಿಯಾಗಿಯೂ ನಿತ್ಯ ಹಾಳಾಗಿಯೂ ಮಾಡುತ್ತೇನೆ.
ಈ ಮನೆಯು ಶಿಲೋವಿನ ಹಾಗೆ ಆಗುವದೆಂದೂ ಈ ಪಟ್ಟಣವು ನಿವಾಸಿಗಳಿಲ್ಲದೆ ಹಾಳಾಗುವದೆಂದೂ ಕರ್ತನ ಹೆಸರಿನಲ್ಲಿ ಯಾಕೆ ನೀನು ಪ್ರವಾದಿಸಿದ್ದೀ ಅಂದರು. ಆಗ ಜನರೆಲ್ಲರೂ ಕರ್ತನ ಆಲಯದಲ್ಲಿ ಯೆರೆವಿಾಯನಿಗೆ ವಿರೋಧವಾಗಿ ಕೂಡಿಕೊಂಡರು.
ಇಸ್ರಾಯೇಲಿನ ದೇವರೂ ಸೈನ್ಯಗಳ ದೇವರಾದ ಕರ್ತನೂ ಹೇಳುವದೇನಂದರೆ--ಇಗೋ, ನಾನು ಯೆಹೂದದ ಮೇಲೆಯೂ ಯೆರೂಸಲೇಮಿನ ನಿವಾಸಿ ಗಳೆಲ್ಲರ ಮೇಲೆಯೂ ಅವರ ವಿಷಯವಾಗಿ ಹೇಳಿದ ಕೇಡನ್ನೆಲ್ಲಾ ಬರಮಾಡುತ್ತೇನೆ; ನಾನು ಅವರ ಸಂಗಡ ಮಾತನಾಡುವಾಗ ಅವರು ಕೇಳಲಿಲ್ಲ ಅವರನ್ನು ಕರೆಯು ವಾಗ ಉತ್ತರ ಕೊಡಲಿಲ್ಲ.
ಅವರು ನಿನಗೆ ವಿರುದ್ಧವಾಗಿ ಒಂದು ಕೂಟವನ್ನು ಕರಕೊಂಡು ಬಂದು ಕಲ್ಲುಗಳನ್ನು ನಿನ್ನ ಮೇಲೆ ಎಸೆದು, ತಮ್ಮ ಕತ್ತಿಗಳಿಂದ ನಿನ್ನನ್ನು ತಿವಿಯುವರು.
ಆದದರಿಂದ ಒಹೊಲೀಬಳೇ, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಯಾರಿಂದ ನಿನ್ನ ಮನಸ್ಸು ಅಗಲಿಹೋಯಿತೋ ಆ ನಿನ್ನ ಪ್ರಿಯನನ್ನು ನಾನು ನಿನಗೆ ವಿರೋಧವಾಗಿ ಎಬ್ಬಿಸುತ್ತೇನೆ, ನಾನು ಅವರನ್ನು ಪ್ರತಿಯೊಂದು ಕಡೆಗೂ ವಿರೋಧವಾಗಿ ತರುತ್ತೇನೆ.