ನಿಮ್ಮ ದಾನ ಗಳನ್ನು ತರುವಾಗಲೂ ನಿಮ್ಮ ಕುಮಾರರನ್ನು ಬೆಂಕಿ ಯಿಂದ ದಾಟಿಸುವಾಗಲೂ ನೀವು ಇಂದಿನ ವರೆಗೂ ನಿಮ್ಮ ಎಲ್ಲಾ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರಪಡಿಸಿ ಕೊಳ್ಳುತ್ತೀರಿ; ಹೀಗಾದರೆ ನಾನು ನಿಮ್ಮಿಂದ ವಿಚಾರಿಸ ಲ್ಪಟ್ಟೆನೊ? ನನ್ನ ಜೀವದಾಣೆ ನಾನು ನಿಮ್ಮಿಂದ ವಿಚಾರಿಸ ಲ್ಪಡುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ;
Cross references
ತನ್ನ ಮಗನನ್ನು ಇಲ್ಲವೆ ಮಗಳನ್ನು ಬೆಂಕಿದಾಟಿಸುವವನೂ ಕಣಿಹೇಳುವವನೂ ಮೇಘಮಂತ್ರದವನೂ ಸರ್ಪಮಂತ್ರದವನೂ ಮಾಟಗಾರನೂ
ಆದರೆ ಸೌಲನು ಫಿಲಿಷ್ಟಿಯರ ದಂಡನ್ನು ನೋಡಿ ಭಯ ಪಟ್ಟನು; ತನ್ನ ಹೃದಯ ಬಹಳ ಹೆದರಿತು.
ಎಲೀ ಷನು ಇಸ್ರಾಯೇಲಿನ ಅರಸನಿಗೆ -- ನಿನ್ನೊಂದಿಗೆ ನಾನೇನು ಮಾಡಬೇಕು? ನೀನು ನಿನ್ನ ತಂದೆ ತಾಯಿಯ ಪ್ರವಾದಿಗಳ ಬಳಿಗೆ ಹೋಗು ಅಂದನು. ಇಸ್ರಾಯೇ ಲಿನ ಅರಸನು ಅವನಿಗೆ--ಇಲ್ಲ, ಕರ್ತನು ಈ ಮೂರು ಮಂದಿ ಅರಸರುಗಳನ್ನು ಮೋವಾಬ್ಯರ ಕೈಯಲ್ಲಿ ಒಪ್ಪಿಸಿ ಕೊಡುವದಕ್ಕೆ ಒಟ್ಟಾಗಿ ಕರೆದಿದ್ದಾನಲ್ಲಾ ಅಂದನು.
ದೇವರು ಕಪಟಿಯ ಪ್ರಾಣವನ್ನು ತಕ್ಕೊಂಡರೆ ಅವನು ಲಾಭ ಮಾಡುವದರಲ್ಲಿ ನಿರೀಕ್ಷೆ ಏನು?
ಇಲ್ಲವೆ ಸರ್ವಶಕ್ತನಲ್ಲಿ ಆನಂದವಾಗಿರುವನೋ? ಸರ್ವಕಾಲದಲ್ಲಿ ದೇವರನ್ನು ಕರೆಯುವನೋ?
ನನ್ನ ಹೃದಯದಲ್ಲಿ ಅಪರಾಧವನ್ನು ನಾನು ಆಶಿಸಿದ್ದರೆ ಕರ್ತನು ನನ್ನ ಪ್ರಾರ್ಥನೆಯನ್ನು ಕೇಳುವದಿಲ್ಲ.
ತಮ್ಮ ಗಂಡು ಹೆಣ್ಣು ಮಕ್ಕಳನ್ನೂ ದೆವ್ವಗಳಿಗೆ ಅರ್ಪಿಸಿದರು.
ನಿಮ್ಮ ಭಯವು ತೀವ್ರ ದುಃಖದಂತೆಯೂ ನಿಮ್ಮ ನಾಶನವು ತುಫಾನಿನಂತೆಯೂ ಬರುವಾಗ ಅಪಾಯ ಮತ್ತು ಆಪತ್ತು ನಿಮ್ಮ ಮೇಲೆ ಬರುವಾಗ ನಾನು ಸಹ ನಕ್ಕು ಪರಿಹಾಸ್ಯಮಾಡುವೆನು.
ನ್ಯಾಯಪ್ರಮಾಣವನ್ನು ಕೇಳದೆ ತನ್ನ ಕಿವಿಯನ್ನು ತಿರುಗಿಸಿಕೊಳ್ಳುವವನ ಪ್ರಾರ್ಥನೆಯು ಅಸಹ್ಯ.
ನೀವು ನಿಮ್ಮ ಕೈಗಳನ್ನು ಚಾಚಲು ನಾನು ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿ ದರೂ ನಾನು ಕೇಳೆನು, ನಿಮ್ಮ ಕೈಗಳು ರಕ್ತದಿಂದ ತುಂಬಿಯವೆ.
ಹಸಿರಾದ ಏಲಾ ಮರಗಳ ಕೆಳಗೆ ವಿಗ್ರಹಗಳಿಂದ ಮದವೇರಿಸಿ ಕೊಂಡು ಹಳ್ಳಗಳಲ್ಲಿ ಬಂಡೆಗಳ ಬಿರುಕುಗಳಲ್ಲಿ ಮಕ್ಕಳನ್ನು ಕೊಂದುಹಾಕುವ ನೀವು ದ್ರೋಹದ ಮಕ್ಕಳೂ ಸುಳ್ಳಿನ ಸಂತತಿಯೂ ಅಲ್ಲವೋ?
ಕಬ್ಬಿ ಣವು ಉತ್ತರದ ಕಬ್ಬಿಣವನ್ನೂ ಉಕ್ಕನ್ನೂ ಮುರಿಯ ಬಲ್ಲದೇ?
ಇದಲ್ಲದೆ ಈ ಪಟ್ಟಣದ ಎಲ್ಲಾ ಸಂಪತ್ತನ್ನೂ ಅದರ ಎಲ್ಲಾ ಕಷ್ಟಾರ್ಜಿತವನ್ನೂ ಅದರ ಎಲ್ಲಾ ಅಮೂಲ್ಯವಾದವುಗಳನ್ನೂ ಯೆಹೂ ದದ ಅರಸರ ಎಲ್ಲಾ ಭಂಡಾರಗಳನ್ನೂ ಒಪ್ಪಿಸುವೆನು; ಶತ್ರುಗಳ ಕೈಗೆ ಅವರನ್ನು ಒಪ್ಪಿಸುವೆನು. ಅವರು ಅವುಗಳನ್ನು ಸುಲುಕೊಂಡು ತಕ್ಕೊಂಡು ಬಾಬೆಲಿಗೆ ಒಯ್ಯುವರು.
ಮನುಷ್ಯಪುತ್ರನೇ, ಈ ಮನು ಷ್ಯರು ತಮ್ಮ ವಿಗ್ರಹಗಳನ್ನು ತಮ್ಮ ಹೃದಯಗಳಲ್ಲೇ ಸ್ಥಾಪಿಸಿ ತಮ್ಮ ಅಕ್ರಮವಾದ ಎಡೆತಡೆಗಳನ್ನು ತಮ್ಮ ಮುಖದ ಮುಂದೆಯೇ ಇಟ್ಟುಕೊಂಡಿದ್ದಾರೆ. ಇವರೆಲ್ಲ ರನ್ನೂ ನಾನು ವಿಚಾರಿಸಬೇಕೇ?
ಇದಾದ ಮೇಲೆ ನನಗೆ ಹುಟ್ಟಿದ್ದ ನನ್ನ ಕುಮಾರರನ್ನೂ ಕುಮಾರ್ತೆ ಯರನ್ನೂ ಅವರ ಆಹಾರಕ್ಕಾಗಿ ಅರ್ಪಿಸಿದಿ. ಈ ನಿನ್ನ ವ್ಯಭಿಚಾರ ಸಾಮಾನ್ಯವಾದದ್ದಲ್ಲ,
ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಹಿರಿಯರ ಸಂಗಡ ಮಾತನಾಡಿ ಅವ ರಿಗೆ ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನನ್ನ ಬಳಿಗೆ ವಿಚಾರಣೆಗಾಗಿ ಬಂದಿರೋ? ನನ್ನ ಜೀವದಾಣೆ, ನಾನು ನಿಮ್ಮಿಂದ ವಿಚಾರಿಸಲ್ಪಡುವದಿಲ್ಲವೆಂದು ದೇವರಾದ ಕರ್ತನು ಹೇಳುತ್ತಾನೆ.
ನಾನೇ ಕರ್ತನೆಂದು ಅವರು ತಿಳಿಯುವ ಹಾಗೆ ಅವರು ತಮ್ಮ ಚೊಚ್ಚಲು ಮಕ್ಕಳನ್ನು ಬೆಂಕಿಗೆ ಆಹುತಿಮಾಡಿದ್ದರಿಂದ ಅವರು ಹಾಳಾಗಿ ಬಿದ್ದಿರುವಂತೆ ನಾನು ಅವರ ಅರ್ಪಣೆಗಳನ್ನು ಅಪವಿತ್ರಪಡಿಸಿದೆನು.
ಹೇಗಂದರೆ, ಅವರು ವ್ಯಭಿಚಾರ ಮಾಡಿದ್ದಾರೆ, ರಕ್ತವು ಅವರ ಕೈಗಳಲ್ಲಿ ಅದೆ; ತಮ್ಮ ವಿಗ್ರಹಗಳಿಂದ ವ್ಯಭಿಚಾರ ಮಾಡಿದ್ದಾರೆ, ನನಗೆ ಹೆತ್ತ ತಮ್ಮ ಗಂಡು ಮಕ್ಕಳನ್ನು ಆ ವಿಗ್ರಹಗಳಿಗೆ ಬಲಿಯಾಗಿ ಕೊಟ್ಟಿದ್ದಾರೆ.
ಆಗ ಆದದ್ದೇ ನಂದರೆ--ಅವನು ಕೂಗಲು ಅವರು ಕೇಳದೆ ಇದ್ದ ಪ್ರಕಾರ ಅವರು ಕೂಗಲು ನಾನು ಕೇಳದೆ ಇದ್ದೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.ಇದಲ್ಲದೆ ಅವರು ಅರಿಯದ ಎಲ್ಲಾ ಜನಾಂಗಗಳೊಳಗೆ ಅವರನ್ನು ಸುಂಟರ ಗಾಳಿಯಿಂದ ಚದರಿಸಿಬಿಟ್ಟೆನು. ಹೀಗೆ ಅವರ ಹಿಂದೆ ದೇಶವು ನಾಶವಾಯಿತು; ಹಾದುಹೋಗುವವನೂ ತಿರುಗಿಕೊಳ್ಳುವವನೂ ಇಲ್ಲದೆ ಹೋದರು. ರಮ್ಯವಾದ ದೇಶವನ್ನು ಹಾಳಾಗಿ ಮಾಡಿದರು.
ಇದಾದ ಮೇಲೆ ಆ ಬೇರೆ ಕನ್ಯೆಯರು ಸಹ ಬಂದು--ಕರ್ತನೇ, ಕರ್ತನೇ, ನಮಗೆ ಬಾಗಲನ್ನು ತೆರೆ ಅಂದರು.
ನಿಮ್ಮಲ್ಲಿ ಯುದ್ಧಗಳೂ ಕಾದಾಟಗಳೂ ಎಲ್ಲಿಂದ ಬರುತ್ತವೆ? ನಿಮ್ಮ ಇಂದ್ರಿಯ ಗಳಲ್ಲಿ ಹೊರಾಡುವ ಭೋಗಾಶೆಗಳಿಂದಲೇ ಅಲ್ಲವೇ.