Home Bibles ಯೆಹೆಜ್ಕೇಲ 20:11 · ಕನ್ನಡ ಬೈಬಲ್
ಯೆಹೆಜ್ಕೇಲ 20:11 · ಕನ್ನಡ ಬೈಬಲ್

ಯಾವ ಸಂಗತಿಗಳನ್ನು ಮಾಡಿದರೆ ಮನುಷ್ಯನು ಬದುಕುವನೋ? ಆ ನನ್ನ ನಿಯಮಗಳನ್ನು ಅವರಿಗೆ ಕೊಟ್ಟು ನನ್ನ ನ್ಯಾಯಗಳನ್ನು ಅವರಿಗೆ ತಿಳಿಸಿದೆನು.

Cross references

ಲೇವ್ಯಕಾಂಡ 18:5

ಆದದರಿಂದ ನೀವು ನನ್ನ ನಿಯಮಗಳನ್ನೂ ನಿರ್ಣಯಗಳನ್ನೂ ಕೈಕೊಳ್ಳಿರಿ. ಒಬ್ಬನು ಅವುಗಳನ್ನು ಮಾಡಿದರೆ ಅವನು ಅವುಗಳಲ್ಲಿ ಜೀವಿಸುವನು; ನಾನೇ ಕರ್ತನು.

ದ್ವಿತೀಯೋಪದೇಶಕಾಂಡ 4:5

ಇಗೋ, ನೀವು ಹೋಗಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನೀವು ಮಾಡಬೇಕೆಂದು ನನ್ನ ದೇವರಾದ ಕರ್ತನು ನನಗೆ ಆಜ್ಞಾಪಿಸಿದಂತೆ ನಿಯಮಗಳನ್ನೂ ನ್ಯಾಯಗಳನ್ನೂ ನಿಮಗೆ ಬೋಧಿಸಿದ್ದೇನೆ.

ದ್ವಿತೀಯೋಪದೇಶಕಾಂಡ 4:8

ಇದಲ್ಲದೆ ನಾನು ಈಹೊತ್ತು ನಿಮ್ಮ ಮುಂದೆ ಇಡುವ ಈ ಎಲ್ಲಾ ನ್ಯಾಯಪ್ರಮಾಣದ ಪ್ರಕಾರ ನೀತಿಯುಳ್ಳ ನಿಯಮ ನ್ಯಾಯಗಳುಳ್ಳ ದೊಡ್ಡ ಜನಾಂಗ ಯಾವದು?

ದ್ವಿತೀಯೋಪದೇಶಕಾಂಡ 20:15

ಹೀಗೆ ಇಲ್ಲಿರುವ ಈ ಜನಾಂಗಗಳ ಪಟ್ಟಣಗಳಲ್ಲದಂಥ, ನಿನಗೆ ದೂರವಾಗಿರುವಂಥ ಪಟ್ಟಣಗಳಿಗೆಲ್ಲಾ ಹಾಗೇ ಮಾಡ ಬೇಕು.

ದ್ವಿತೀಯೋಪದೇಶಕಾಂಡ 30:19

ನಾನು ಜೀವವನ್ನೂ ಮರಣವನ್ನೂ, ಆಶೀರ್ವಾದವನ್ನೂ ಶಾಪ ವನ್ನೂ ನಿನ್ನ ಮುಂದೆ ಇಟ್ಟಿದ್ದೇನೆಂಬದಕ್ಕೆ ಆಕಾಶವನ್ನೂ ಭೂಮಿಯನ್ನೂ ಈಹೊತ್ತು ನಿಮ್ಮ ಮೇಲೆ ಸಾಕ್ಷಿಗಳಾಗಿ ಕರೆಯುತ್ತೇನೆ.ನಾನು ಜೀವವನ್ನೂ ಮರಣವನ್ನೂ, ಆಶೀರ್ವಾದವನ್ನೂ ಶಾಪ ವನ್ನೂ ನಿನ್ನ ಮುಂದೆ ಇಟ್ಟಿದ್ದೇನೆಂಬದಕ್ಕೆ ಆಕಾಶವನ್ನೂ ಭೂಮಿಯನ್ನೂ ಈಹೊತ್ತು ನಿಮ್ಮ ಮೇಲೆ ಸಾಕ್ಷಿಗಳಾಗಿ ಕರೆಯುತ್ತೇನೆ.

ನೆಹೆಮ್ಯ 9:13

ಸೀನಾಯ್‌ ಪರ್ವ ತದ ಮೇಲಕ್ಕೆ ಇಳಿದು ಬಂದಿ; ಆಕಾಶದಿಂದ ಅವರ ಸಂಗಡ ಮಾತನಾಡಿದಿ; ಸರಿಯಾದ ನ್ಯಾಯಗಳನ್ನೂ ಸತ್ಯವಾದ ನ್ಯಾಯಪ್ರಮಾಣಗಳನ್ನೂ ಉತ್ತಮವಾದ ಕಟ್ಟಳೆ ಗಳನ್ನೂ ಆಜ್ಞೆಗಳನ್ನೂ ಅವರಿಗೆ ಕೊಟ್ಟಿ.

ನೆಹೆಮ್ಯ 9:14

ನೀನು ಪರಿಶುದ್ಧ ಸಬ್ಬತ್‌ ದಿವಸವನ್ನು ಅವರಿಗೆ ತಿಳಿಸಿ ನಿನ್ನ ಸೇವಕನಾದ ಮೋಶೆಯ ಮುಖಾಂತರ ಅವರಿಗೆ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ನ್ಯಾಯಪ್ರಮಾಣವನ್ನೂ

ಕೀರ್ತನೆಗಳು 147:19

ಆತನು ಯಾಕೋಬರಿಗೆ ತನ್ನ ವಾಕ್ಯವನ್ನೂ ಇಸ್ರಾಯೇಲಿಗೆ ನಿಯಮಗಳನ್ನೂ ನ್ಯಾಯವಿಧಿಗಳನ್ನೂ ತಿಳಿಸುತ್ತಾನೆ.ಯಾವ ಜನಾಂಗಕ್ಕಾದರೂ ಆತನು ಹೀಗೆ ಮಾಡ ಲಿಲ್ಲ; ನ್ಯಾಯವಿಧಿಗಳನ್ನು ಅವರು ತಿಳುಕೊಳ್ಳುವದಿಲ್ಲ. ನೀವು ಕರ್ತನನ್ನು ಸ್ತುತಿಸಿರಿ.

ಸಾಮೇತಿಗಳು 6:23

ಆಜ್ಞೆಯು ದೀಪವಾಗಿದೆ, ಕಟ್ಟ ಳೆಯು ಬೆಳಕಾಗಿದೆ; ಶಿಕ್ಷಣದ ಗದರಿಕೆಗಳು ಜೀವದ ಮಾರ್ಗವಾಗಿವೆ.

ಯೆಹೆಜ್ಕೇಲ 18:9

ಸತ್ಯವನ್ನು ಮಾಡುವದ ಕ್ಕಾಗಿ ನನ್ನ ನಿಯಮಗಳಲ್ಲಿ ನಡೆದು, ನನ್ನ ನ್ಯಾಯಗಳನ್ನು ಕೈಕೊಂಡು ಸತ್ಯಪರನಾಗಿ ನಡೆದರೆ ಅವನು ನೀತಿ ವಂತನು ಮತ್ತು ನಿಶ್ಚಯವಾಗಿ ಬದುಕುವವನು ಎಂದು ದೇವರಾದ ಕರ್ತನು ಹೇಳಿದ್ದಾನೆ.

ಯೆಹೆಜ್ಕೇಲ 20:13

ಆದರೆ ಇಸ್ರಾಯೇಲಿನ ಮನೆತನದವರು ಅರಣ್ಯದಲ್ಲಿಯೂ ನನಗೆ ವಿರುದ್ಧ ವಾಗಿ ತಿರುಗಿಬಿದ್ದರು; ಆಜ್ಞಾವಿಧಿಗಳನ್ನು ಅನುಸರಿಸುವ ಮನುಷ್ಯನು ಬದುಕುವನು. ಅವುಗಳಲ್ಲಿ ನಡೆಯದೆ ನನ್ನ ನ್ಯಾಯಗಳನ್ನು ಅಸಡ್ಡೆ ಮಾಡಿ ನನ್ನ ಸಬ್ಬತ್‌ ದಿನಗಳನ್ನು ಸಹ ಬಹಳವಾಗಿ ಅಪವಿತ್ರಪಡಿಸಿದರು; ಆಗ ನಾನು ಅವರ ಮೇಲೆ ನನ್ನ ರೋಷದಿಂದ ದಹಿಸಿಬಿಡುವೆನೆಂದು ಹೇಳಿದೆನು.

ಯೆಹೆಜ್ಕೇಲ 20:21

ಆದಾಗ್ಯೂ ಮಕ್ಕಳು ನನಗೆ ವಿರೋಧವಾಗಿ ತಿರುಗಿ ಬಿದ್ದರು; ಯಾವವುಗಳನ್ನು ಮನುಷ್ಯನು ಮಾಡಿದರೆ ಬದುಕುವನೋ ಆ ನನ್ನ ನಿಯಮಗಳಲ್ಲಿ ನಡೆಯಲಿಲ್ಲ ನನ್ನ ನ್ಯಾಯಗಳನ್ನು ಕೈಕೊಂಡುಮಾಡಲಿಲ್ಲ; ನನ್ನ ಸಬ್ಬತ್ತುಗಳನ್ನು ಅಪವಿತ್ರ ಪಡಿಸಿದಾಗ ಅವರ ಮೇಲೆ ನನ್ನ ರೋಷವನ್ನು ಸುರಿದುಬಿಡುವೆನೆಂದೂ ನನ್ನ ಕೋಪ ವನ್ನು ಅರಣ್ಯದಲ್ಲಿ ಅವರ ಮೇಲೆ ತೀರಿಸಿಬಿಡುವೆ ನೆಂದೂ ಹೇಳಿದೆನು.

ಯೆಹೆಜ್ಕೇಲ 33:15

ದುಷ್ಟನು ತನ್ನ ಒತ್ತೆಯನ್ನು ಹಿಂದಕ್ಕೆ ಕೊಟ್ಟರೆ ಮತ್ತು ದೋಚಿಕೊಂಡದ್ದನ್ನು ತಿರುಗಿ ಕೊಟ್ಟು ಅನ್ಯಾಯವನ್ನು ಮಾಡದೆ ಜೀವದ ನಿಯಮಗಳಲ್ಲಿ ನಡೆದರೆ ಅವನು ಸಾಯದೆ ಖಂಡಿತ ವಾಗಿ ಬದುಕುವನು.

ಯೆಹೆಜ್ಕೇಲ 33:16

ಅವನು ಮಾಡಿರುವ ಪಾಪ ಗಳಲ್ಲಿ ಒಂದಾದರೂ ಅವನಿಗೆ ವಿರೋಧವಾಗಿ ಜ್ಞಾಪ ಕಕ್ಕೆ ಬರುವದಿಲ್ಲ; ಅವನು ನ್ಯಾಯವನ್ನೂ ನೀತಿ ಯನ್ನೂ ಮಾಡಿದ್ದರಿಂದ ನಿಶ್ಚಯವಾಗಿ ಬದುಕುವನು.

ಲೂಕ 10:28

ಆಗ ಆತನು ಅವನಿಗೆ--ನೀನು ಸರಿಯಾಗಿ ಉತ್ತರ ಕೊಟ್ಟಿದ್ದೀ; ಅದರಂತೆಯೇ ಮಾಡು, ಆಗ ನೀನು ಬದುಕುವಿ ಅಂದನು.

ರೋಮಾಪುರದವರಿಗೆ 3:2

ಎಲ್ಲಾ ವಿಷಯಗಳಲ್ಲಿಯೂ ಬಹಳ ಉಂಟು; ಮುಖ್ಯವಾಗಿ ದೈವೋಕ್ತಿಗಳು ಅವರಿಗೆ ಒಪ್ಪಿಸಲ್ಪಟ್ಟವು.

ರೋಮಾಪುರದವರಿಗೆ 10:5

ಇದಲ್ಲದೆ-- ನ್ಯಾಯಪ್ರಮಾಣವು ಹೇಳುವವುಗಳನ್ನು ಮಾಡುವವನು ಅವುಗಳಿಂದಲೇ ಜೀವಿಸುವನು ಎಂದು ಮೋಶೆಯು ಅದರ ನೀತಿಯ ವಿಷಯವಾಗಿ ವಿವರಿಸುತ್ತಾನೆ.

ಗಲಾತ್ಯದವರಿಗೆ 3:12

ನ್ಯಾಯಪ್ರಮಾಣಕ್ಕೆ ನಂಬಿಕೆಯು ಆಧಾರ ವಲ್ಲ. ಆದರೆ--ಅದರ ಕ್ರಿಯೆಗಳನ್ನು ಮಾಡುವವನೇ ಅವುಗಳ ಮೂಲಕ ಬದುಕುವನು ಎಂಬದೇ.

Interlinear

Choose Theme