Home Bibles ಯೆಹೆಜ್ಕೇಲ 2:4 · ಕನ್ನಡ ಬೈಬಲ್
ಯೆಹೆಜ್ಕೇಲ 2:4 · ಕನ್ನಡ ಬೈಬಲ್

ಅವರು ನಿರ್ಲಜ್ಜರಾದ ಒರಟು ಹೃದಯವುಳ್ಳ ಮಕ್ಕಳಾಗಿದ್ದಾರೆ. ನಾನು ನಿನ್ನನ್ನು ಅವರ ಬಳಿಗೆ ಕಳುಹಿಸುತ್ತೇನೆ ನೀನು ಅವರಿಗೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳಬೇಕು.

Cross references

ದ್ವಿತೀಯೋಪದೇಶಕಾಂಡ 10:16

ಹೀಗಿರುವದರಿಂದ ನಿಮ್ಮ ಹೃದಯದಲ್ಲೇ ಸುನ್ನತಿ ಮಾಡಿಕೊಳ್ಳಿರಿ. ಇನ್ನು ಮೇಲೆ ಬಗ್ಗದ ಕುತ್ತಿಗೆಯುಳ್ಳವ ರಾಗಿರಬೇಡಿರಿ.

ದ್ವಿತೀಯೋಪದೇಶಕಾಂಡ 31:27

ನಿನ್ನ ದ್ರೋಹವನ್ನೂ ನಿನ್ನ ಬಗ್ಗದ ಕುತ್ತಿಗೆಯನ್ನೂ ನಾನು ಬಲ್ಲೆನು; ಇಗೋ, ಈಹೊತ್ತು ನಾನು ಇನ್ನೂ ನಿಮ್ಮ ಸಂಗಡ ಬದುಕಿರು ವಾಗಲೇ ಕರ್ತನಿಗೆ ದ್ರೋಹಮಾಡಿದವರಾದಿರಿ; ನಾನು ಸತ್ತ ಮೇಲೆ ಇನ್ನೇನ್ನಾಗುವದು?

1 ಅರಸುಗಳು 22:14

ಅದಕ್ಕೆ ವಿಾಕಾಯೆಹು--ಕರ್ತನ ಜೀವ ದಾಣೆ, ಕರ್ತನು ನನಗೆ ಏನು ಹೇಳುವನೋ ಅದನ್ನು ಮಾತನಾಡುವೆನು ಅಂದನು. ಹೀಗೆ ಅವನು ಅರಸನ ಬಳಿಗೆ ಬಂದನು.

2 ದಿನವೃತ್ತಾಂತ 30:8

ನಿಮ್ಮ ಪಿತೃ ಗಳ ಹಾಗೆ ನಿಮ್ಮ ಕುತ್ತಿಗೆಯನ್ನು ಕಠಿಣಪಡಿಸಬೇಡಿರಿ. ಕರ್ತನಿಗೆ ಕೈಕೊಟ್ಟು ಆತನು ಯುಗಯುಗಕ್ಕೂ ಪರಿಶುದ್ಧ ಮಾಡಿದ ಆತನ ಪರಿಶುದ್ಧ ಸ್ಥಾನದಲ್ಲಿ ಪ್ರವೇಶಿಸಿದ ನಿಮ್ಮ ದೇವರಾದ ಕರ್ತನನ್ನು ಸೇವಿಸಿರಿ. ಆಗ ತನ್ನ ಉಗ್ರಕೋಪವನ್ನು ಬಿಟ್ಟು ನಿಮ್ಮ ಕಡೆಗೆ ತಿರುಗುವನು.

2 ದಿನವೃತ್ತಾಂತ 36:13

ಇದಲ್ಲದೆ ಅವನು ದೇವರ ಮೇಲೆ ಆಣೆ ಇಡುವಂತೆ ಮಾಡಿದ ಅರಸನಾದ ನೆಬೂಕದ್ನೆಚ್ಚರನಿಗೆ ತಿರುಗಿ ಬಿದ್ದನು. ಹೇಗಂದರೆ ಅವನು ಇಸ್ರಾಯೇಲಿನ ದೇವರಾದ ಕರ್ತನ ಕಡೆಗೆ ತಿರುಗದೆಯೂ ತನ್ನ ಕುತ್ತಿಗೆ ಯನ್ನು ಬೊಗ್ಗಿಸದೆಯೂ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು.

ಕೀರ್ತನೆಗಳು 95:8

ಅರಣ್ಯದಲ್ಲಿ ಆದ ಶೋಧನೆಯ ದಿವಸದಲ್ಲಿ ಕೋಪವನ್ನೆಬ್ಬಿಸಿದಂತೆ ನಿಮ್ಮ ಹೃದ ಯವನ್ನು ಕಠಿಣಮಾಡಿಕೊಳ್ಳಬೇಡಿರಿ.

ಸಾಮೇತಿಗಳು 21:29

ದುಷ್ಟನು ತನ್ನ ಮುಖವನ್ನು ಕಠಿಣಮಾಡಿಕೊಳ್ಳುತ್ತಾನೆ; ಯಥಾ ರ್ಥವಂತನಾದರೋ ತನ್ನ ಮಾರ್ಗವನ್ನು ಸರಿಪಡಿಸಿ ಕೊಳ್ಳುತ್ತಾನೆ.

ಯೆಶಾಯ 48:4

ನೀನು ಹಟಗಾರ, ನಿನ್ನ ಕತ್ತಿನ ನರವು ಕಬ್ಬಿಣ, ನಿನ್ನ ಹಣೆ ಹಿತ್ತಾಳೆ ಎಂದು ನಾನು ತಿಳಿದುಕೊಂಡಿದ್ದೇನೆ.

ಯೆರೆಮಿಯ 3:3

ಆದದರಿಂದ ಮಳೆ ನಿಂತು ಹೋಯಿತು, ಹಿಂಗಾರೂ ಆಗಲಿಲ್ಲ; ಸೂಳೆಯ ಹಣೆ ನಿನಗಿತ್ತು; ನಾಚುವದನ್ನು ನಿರಾಕರಿಸಿದಿ.

ಯೆರೆಮಿಯ 5:3

ಅವಳ ಬಳಿಗೆ ಕುರುಬರು ತಮ್ಮ ಮಂದೆಗಳ ಸಂಗಡ ಬರುವರು; ಅವಳ ಸುತ್ತಲು ತಮ್ಮ ಗುಡಾರಗಳನ್ನು ಹಾಕುವರು; ತಮ್ಮ ತಮ್ಮ ಸ್ಥಳಗಳಲ್ಲಿ ಮೇಯಿಸುವರು.

ಯೆರೆಮಿಯ 6:15

ನಿಮ್ಮ ಸಹೋದರರೆಲ್ಲರನ್ನೂ ಎಫ್ರಾಯಾಮಿನ ಎಲ್ಲಾ ಸಂತಾನವನ್ನೂ ಹೊರಗೆ ಹಾಕಿದ ಹಾಗೆ ನಿಮ್ಮನ್ನು ನನ್ನ ಸಮ್ಮುಖದಿಂದ ಹೊರಗೆ ಹಾಕುವೆನು.

ಯೆರೆಮಿಯ 8:12

ಇದನ್ನು ಗ್ರಹಿಸುವ ಜ್ಞಾನಿ ಯಾದ ಮನುಷ್ಯನು ಯಾರು? ಇದನ್ನು ತಿಳಿಸುವ ಹಾಗೆ ಕರ್ತನ ಬಾಯಿ ಯಾರ ಸಂಗಡ ಮಾತನಾಡಿತ್ತು? ದೇಶವು ಯಾವದಕ್ಕಾಗಿ ನಾಶವಾಗಿ ಹಾದು ಹೋಗುವ ವನಿಲ್ಲದೆ ಅರಣ್ಯದ ಹಾಗೆ ಹಾಳಾಯಿತು?

ಯೆರೆಮಿಯ 26:2

ಕರ್ತನು ನನಗೆ ಹೇಳಿದ್ದೇನಂದರೆ--ಬಂಧನಗಳನ್ನೂ ನೊಗಗಳನ್ನೂ ಮಾಡಿಸಿಕೊಂಡು ನಿನ್ನ ಕುತ್ತಿಗೆಯ ಮೇಲೆ ಇಡು.

ಯೆಹೆಜ್ಕೇಲ 3:4

ನನಗೆ ಆತನು--ಮನುಷ್ಯಪುತ್ರನೇ, ಹೋಗು; ಇಸ್ರಾಯೇಲ್ಯರ ಮನೆಯವರ ಬಳಿಗೆ ಹೋಗಿ ಅವರ ಸಂಗಡ ನನ್ನ ಮಾತುಗಳನ್ನು ಮಾತನಾಡು.

ಯೆಹೆಜ್ಕೇಲ 3:7

ಆದರೆ ಇಸ್ರಾ ಯೇಲಿನ ಮನೆತನದವರು ನಿನಗೆ ಕಿವಿಗೊಡುವದಿಲ್ಲ; ಅವರು ನನಗೆ ಕಿವಿಗೊಟ್ಟಿಲ್ಲ. ಯಾಕಂದರೆ ಎಲ್ಲಾ ಇಸ್ರಾಯೇಲಿನ ಮನೆತನದವರು ಕಠಿಣ ಹೃದಯ ದವರೂ ನಿರ್ಲಜ್ಜರೂ (ನಾಚಿಕೆಗೆಟ್ಟವರೂ) ಆಗಿದ್ದಾರೆ.

ಯೆಹೆಜ್ಕೇಲ 3:11

ಹೋಗು, ಸೆರೆಯಾಗಿರುವ ನಿನ್ನ ಜನರ ಮಕ್ಕಳ ಬಳಿಗೆ ಹೋಗಿ, ಅವರ ಸಂಗಡ ಮಾತನಾಡು, ಅವರು ಕೇಳಿದರೂ ಕೇಳದಿದ್ದರೂ ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಅವರಿಗೆ ಹೇಳು.

ಯೆಹೆಜ್ಕೇಲ 3:27

ಆದರೆ ನಾನು ನಿನ್ನ ಸಂಗಡ ಮಾತನಾಡುವಾಗ ನಾನು ನಿನ್ನ ಬಾಯನ್ನು ತೆರೆ ಯುವೆನು. ಆಗ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಕೇಳುವವನು ಕೇಳಲಿ, ಕೇಳದವನು ಕೇಳದೇ ಇರಲಿ. ಅವರು ತಿರುಗಿ ಬೀಳುವ ಮನೆಯವರಾಗಿದ್ದಾರೆ.

ಮತ್ತಾಯ 10:16

ಇಗೋ, ತೋಳಗಳ ಮಧ್ಯದಲ್ಲಿ ಕುರಿಗಳನ್ನು ಕಳು ಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಆದದ ರಿಂದ ನೀವು ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳಾಗಿರ್ರಿ.

ಅಪೋಸ್ತಲರ ಕೃತ್ಯಗಳು 20:26

ಆದಕಾರಣ ಎಲ್ಲಾ ಮನುಷ್ಯರ ರಕ್ತದ ವಿಷಯದಲ್ಲಿ ನಾನು ನಿರ್ದೋಷಿಯಾಗಿದ್ದೇನೆಂಬದಕ್ಕೆ ಈ ದಿವಸ ನೀವೇ ನನಗೆ ಸಾಕ್ಷಿಗಳು.

Interlinear

Choose Theme