ಅದಕ್ಕೆ ಸಂಕೋಲೆಗಳನ್ನು ತೊಡಿಸಿ, ಕಾವಲಿರಿಸಿ, ಬಾಬೆಲಿನ ಅರಸನ ಬಳಿಗೆ ತೆಗೆದುಕೊಂಡು ಹೋದರು. ಅದರ ಶಬ್ದವು ಇನ್ನು ಮೇಲೆ ಇಸ್ರಾ ಯೇಲಿನ ಪರ್ವತಗಳ ಮೇಲೆ ಕೇಳಲ್ಪಡದ ಹಾಗೆ ಅದನ್ನು ದುರ್ಗದಲ್ಲಿರಿಸಿದರು.
Cross references
ಆದರೆ ಅವನು ಯೆರೂಸಲೇಮಿನಲ್ಲಿ ಆಳದ ಹಾಗೆ ಫರೋಹನೆಕೋ ಎಂಬವನು ಹಮಾತ್ ದೇಶದ ರಿಬ್ಲಾದಲ್ಲಿ ಅವನನ್ನು ಬಂಧಿಸಿ ದೇಶದ ಮೇಲೆ ನೂರು ತಲಾಂತು ಬೆಳ್ಳಿಯನ್ನೂ ಒಂದು ತಲಾಂತು ಬಂಗಾರವನ್ನೂ ದಂಡ ತೆರಬೇಕಾ ಯಿತು.
ಯೆಹೋಯಾಖೀನನನ್ನು ಬಾಬೆ ಲಿಗೆ ಒಯ್ದನು; ಅವನು ಅರಸನ ತಾಯಿಯನ್ನೂ ಅರಸನ ಹೆಂಡತಿಯರನ್ನೂ ಅವನ ಅಧಿಕಾರಿಗಳನ್ನೂ ದೇಶದ ಬಲಶಾಲಿಗಳನ್ನೂ ಯೆರೂಸಲೇಮಿನಿಂದ ಬಾಬೆಲಿಗೆ ಸೆರೆಯಾಗಿ ಒಯ್ದನು.
ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಅವನ ಮೇಲೆ ಬಂದು ಬಾಬೆಲಿಗೆ ಒಯ್ಯುವ ಹಾಗೆ ಅವನಿಗೆ ಸಂಕೋಲೆಗಳನ್ನು ಹಾಕಿಸಿದನು.
ಆದರೂ ನನ್ನನ್ನು ಅಸಹ್ಯಿಸುವವ ರಿಗೆ ಅವರು--ನಿಮಗೆ ಸಮಾಧಾನವಾಗುವದೆಂದು ಕರ್ತನು ಹೇಳುತ್ತಾನೆ ಎಂದು ಹೇಳುತ್ತಲೇ ಇದ್ದಾರೆ; ತಮ್ಮ ಹೃದಯದ ಕಲ್ಪನೆಯ ಪ್ರಕಾರ ನಡಕೊಳ್ಳುವವ ರೆಲ್ಲರಿಗೆ--ನಿಮ್ಮ ಮೇಲೆ ಕೇಡು ಬರುವದಿಲ್ಲ ಅನ್ನುತ್ತಾರೆ.
ಆದರೆ ಯಾರು ಕರ್ತನ ಆಲೋಚನೆಯಲ್ಲಿ ನಿಂತು ಆತನ ವಾಕ್ಯವನ್ನು ತಿಳುಕೊಂಡು ಕೇಳಿದ್ದಾರೆ? ಯಾರು ಆತನ ವಾಕ್ಯದಲ್ಲಿ ಲಕ್ಷ್ಯವಿಟ್ಟು ಕೇಳಿದ್ದಾರೆ?
ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಪರ್ವತಗಳಿಗೆ ಅಭಿಮುಖನಾಗಿ ನಿಂತು ಅವುಗಳಿಗೆ ವಿರೋಧವಾಗಿ ಪ್ರವಾದಿಸಿ
ಅವರ ಅರಮನೆಗಳನ್ನು ಹಾಳು ಮಾಡಿತು; ಅವರ ನಗರಗಳನ್ನೂ ನಾಶಮಾಡಿತು. ಅದರ ಗರ್ಜನೆಯ ಶಬ್ದದಿಂದಾಗಿ ದೇಶವೂ ಅದರ ಪರಿಪೂರ್ಣತೆಯೂ ಬೀಡಾಗಿದ್ದನ್ನು ಅದು ತಿಳಿದುಕೊಂಡಿತು.
ಕ್ಷೀಣವಾದದ್ದನ್ನು ನೀವು ಬಲಪಡಿಸುವ ದಿಲ್ಲ, ಖಾಯಿಲೆಯಾದದ್ದನ್ನು ವಾಸಿ ಮಾಡಿಸುವದಿಲ್ಲ, ಮುರಿದದ್ದನ್ನು ಕಟ್ಟುವದಿಲ್ಲ; ಕಳೆದು ಹೋದದ್ದನ್ನು ಹುಡುಕುವದಿಲ್ಲ, ಓಡಿಸಿದ್ದನ್ನು ನೀವು ಹಿಂದಕ್ಕೆ ತರು ವದಿಲ್ಲ. ಆದರೆ ಬಲಾತ್ಕಾರದಿಂದ ಮತ್ತು ಕ್ರೂರತನ ದಿಂದ ಅವುಗಳ ಮೇಲೆ ದೊರೆತನ ಮಾಡುತ್ತೀರಿ.
ಅಲ್ಲದೆ ಮನುಷ್ಯಪುತ್ರನೇ, ಇಸ್ರಾಯೇಲ್ ಪರ್ವತಗಳ ಕಡೆಗೆ ಪ್ರವಾದಿಸು ಮತ್ತು ಹೇಳು--ಇಸ್ರಾಯೇಲ್ ಪರ್ವತಗಳೇ, ನೀವು ಕರ್ತನ ವಾಕ್ಯವನ್ನು ಕೇಳಿರಿ;