Home Bibles ಯೆಹೆಜ್ಕೇಲ 17:16 · ಕನ್ನಡ ಬೈಬಲ್
ಯೆಹೆಜ್ಕೇಲ 17:16 · ಕನ್ನಡ ಬೈಬಲ್

ನಿಶ್ಚ ಯವಾಗಿ ಅವನಿಗೆ ಅರಸುತನವನ್ನು ಕೊಟ್ಟ ಅರಸನೂ ಅಂದರೆ ಯಾವನ ಪ್ರಮಾಣವನ್ನು ತಿರಸ್ಕರಿಸಿದನೋ ಯಾವನ ಒಡಂಬಡಿಕೆಯನ್ನು ವಿಾರಿದನೋ ಅವನು ಇರುವಲ್ಲಿಯೇ ಬಾಬೆಲಿನ ಮಧ್ಯದಲ್ಲಿ ನನ್ನ ಜೀವದಾಣೆ, ಇವನು ಸಾಯುವನು ಎಂದು ದೇವರಾದ ಕರ್ತನು ಹೇಳುತ್ತಾನೆ.

Cross references

ನಿರ್ಗಮಕಾಂಡ 8:2

ಕಳುಹಿಸುವದಕ್ಕೆ ನಿರಾಕರಿಸಿದರೆ ಇಗೋ, ನಾನು ನಿನ್ನ ಮೇರೆಗಳನ್ನೆಲ್ಲಾ ಕಪ್ಪೆಗಳಿಂದ ಹೊಡೆಯು ವೆನು.

ನಿರ್ಗಮಕಾಂಡ 20:7

ನಿನ್ನ ದೇವರಾದ ಕರ್ತನ ಹೆಸರನ್ನು ವ್ಯರ್ಥವಾಗಿ ಎತ್ತಬಾರದು. ಕರ್ತನು ತನ್ನ ಹೆಸರನ್ನು ವ್ಯರ್ಥವಾಗಿ ಎತ್ತುವವನನ್ನು ನಿರ್ದೋಷಿ ಯೆಂದು ಎಣಿಸುವದಿಲ್ಲ.

ಅಂಕೆಗಳ ಪುಸ್ತಕ 30:2

ಒಬ್ಬನು ಕರ್ತನಿಗೆ ಪ್ರಮಾಣವನ್ನು ಮಾಡಿದರೆ ಇಲ್ಲವೆ ಕಟ್ಟಳೆಯಿಂದ ತನ್ನ ಪ್ರಾಣವನ್ನು ಬಾಧಿಸುವ ಆಣೆ ಇಟ್ಟುಕೊಂಡರೆ ಅವನು ತನ್ನ ಮಾತನ್ನು ತಪ್ಪಿಸಬಾರದು, ಬಾಯಿಂದ ಹೊರಟ ಎಲ್ಲಾದರ ಪ್ರಕಾರ ಮಾಡಬೇಕು.

ಯೆಹೋಶುವ 9:20

ನಾವು ಅವರಿಗೆ ಇಟ್ಟ ಆಣೆಯ ನಿಮಿತ್ತ ಕೋಪವು ನಮ್ಮ ಮೇಲೆ ಬಾರದ ಹಾಗೆ ನಾವು ಅವರನ್ನು ಜೀವದಿಂದ ಇರಿಸಿ ಅವರಿಗೆ ಇದನ್ನು ಮಾಡುವೆವು.

2 ಸಮುವೇಲ 21:2

ಆಗ ಅರಸನು ಗಿಬ್ಯೋನ್ಯರನ್ನು ಕಳುಹಿಸಿದನು. (ಆದರೆ ಗಿಬ್ಯೋನ್ಯರು ಇಸ್ರಾಯೇಲ್‌ ಮಕ್ಕಳಾಗಿರದೆ ಅಮೋರಿಯರಲ್ಲಿ ಉಳಿದವರಾಗಿದ್ದರು. ಅವರಿಗೆ ಇಸ್ರಾಯೇಲ್‌ ಮಕ್ಕಳು ಆಣೆ ಇಟ್ಟಿದ್ದರು. ಸೌಲನು ಇಸ್ರಾಯೇಲ್‌ ಮಕ್ಕಳಿಗೋಸ್ಕರವಾಗಿಯೂ ಯೆಹೂದ ಕ್ಕೋಸ್ಕರವಾಗಿಯೂ ತೋರಿಸಿದ ಆಸಕ್ತಿಯಿಂದ ಅವ ರನ್ನು ಹೊಡೆಯಲು ಹುಡುಕಿದ್ದನು)

2 ಅರಸುಗಳು 24:17

ಬಾಬೆಲಿನ ಅರ ಸನು ಯೆಹೋಯಾಖೀನನ ಚಿಕ್ಕಪ್ಪನಾದ ಮತ್ತನ್ಯ ನನ್ನು ಅವನಿಗೆ ಬದಲಾಗಿ ಅರಸನನ್ನಾಗಿ ಮಾಡಿ ಅವನಿಗೆ ಚಿದ್ಕೀಯ ಎಂಬ ಹೆಸರನ್ನಿಟ್ಟನು.

ಕೀರ್ತನೆಗಳು 15:4

ಅವನ ಕಣ್ಣುಗಳಿಗೆ ನೀಚನು ತಿರಸ್ಕರಿಸಲ್ಪ ಟ್ಟಿದ್ದಾನೆ. ಆದರೆ ಕರ್ತನಿಗೆ ಭಯಪಡುವವರನ್ನು ಗೌರವಿಸುತ್ತಾನೆ, ಆಣೆಯಿಂದ ನಷ್ಟವಾದರೂ ಬದಲಾ ಯಿಸದವನು.ತನ್ನ ಹಣವನ್ನು ಬಡ್ಡಿಗೆ ಕೊಡುವದಿಲ್ಲ; ನಿರಪರಾಧಿಗೆ ವಿರೋಧವಾಗಿ ಲಂಚ ತಕ್ಕೊಳ್ಳುವದಿಲ್ಲ. ಇವುಗಳನ್ನು ಮಾಡುವವನು ಎಂದೆಂದಿಗೂ ಕದಲದೆ ಇರುವನು.

ಯೆರೆಮಿಯ 32:4

ದಿಬ್ಬಗಳಿಂದಲೂ ಕತ್ತಿಯಿಂದಲೂ ಕೆಡವಿ ಹಾಕಲ್ಪಟ್ಟ ಈ ಪಟ್ಟಣದ ಮನೆಗಳ ವಿಷಯವೂ ಯೆಹೂದದ ಅರಸರ ಮನೆಗಳ ವಿಷಯವೂ ಇಸ್ರಾ ಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ--

ಯೆರೆಮಿಯ 34:3

ಆಗ ನಾನು ಹಬಚ್ಚೆನ್ಯನ ಮಗನಾದ ಯೆರೆವಿಾಯನ ಮಗನಾದ ಯಾಜನ್ಯನನ್ನೂ ಅವನ ಸಹೋದರರನ್ನೂ ಕುಮಾರರೆಲ್ಲರನ್ನೂ ರೇಕಾಬ್ಯರ ಸಮಸ್ತ ಮನೆಯ ವರನೂ

ಯೆರೆಮಿಯ 39:7

ಆಗ ಸೀಮೆಯಲ್ಲಿರುವ ಸೈನ್ಯಾಧಿಪತಿಗಳೆಲಾ ಅವರೂ ತಮ್ಮ ಮನುಷ್ಯರೂ ಬಾಬೆಲಿನ ಅರಸನು ಅಹೀಕಾಮನ ಮಗನಾದ ಗೆದಲ್ಯನನ್ನು ದೇಶದ ಮೇಲೆ ನೇಮಿಸಿದನೆಂದು ಬಾಬೆಲಿಗೆ ಒಯ್ಯಲ್ಪಡದೆ ಇದ್ದ ಗಂಡ ಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ದೇಶದ ಬಡವ ರನ್ನೂ ಅವನಿಗೆ ಒಪ್ಪಿಸಿದ್ದನೆಂದು ಕೇಳಿದಾಗ;

ಯೆಹೆಜ್ಕೇಲ 12:13

ನನ್ನ ಬಲೆಯನ್ನು ಸಹ ನಾನು ಅವನ ಮೇಲೆ ಹರಡುವೆನು. ಅವನು ನನ್ನ ಉರ್ಲಿನಲ್ಲಿ ಸಿಕ್ಕಿಬೀಳುವನು. ನಾನು ಅವನನ್ನು ಕಸ್ದೀಯ ದೇಶದ ಬಾಬೆಲಿಗೆ ಒಯ್ಯುವೆನು. ಆದರೆ ಅವನು ಅದನ್ನು ನೋಡದೆ ಅಲ್ಲಿಯೇ ಸಾಯುವನು.

ಯೆಹೆಜ್ಕೇಲ 16:59

ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ಮಾಡಿದ್ದಕ್ಕೆ ತಕ್ಕ ಹಾಗೆ ನಾನು ನಿನಗೆ ಮಾಡುತ್ತೇನೆ; ನೀನು ಒಡಂಬಡಿಕೆಯನ್ನು ವಿಾರಿ ನನ್ನ ಆಣೆಯನ್ನು ತಿರಸ್ಕರಿಸಿರುವಿ.

ಯೆಹೆಜ್ಕೇಲ 17:10

ಹೌದು, ಇಗೋ, ನೆಟ್ಟಿರಲಾಗಿ ಅದು ಸಮೃದ್ಧಿಯಾಗಿರುವದೇ? ಅದಕ್ಕೆ ಮೂಡಣಗಾಳಿ ತಗಲುವಾಗ ಅದು ಸಂಪೂರ್ಣ ವಾಗಿ ಒಣಗುವದಿಲ್ಲವೇ? ಅದು ಮೊಳೆತ ಪಾತಿಗಳ ಲ್ಲಿಯೇ ಒಣಗಿಹೋಗುವದು.

ಯೆಹೆಜ್ಕೇಲ 17:13

ಅರಸನ ಸಂತಾನ ದವರನ್ನು ಕರೆದುಕೊಂಡು ಅವನ ಸಂಗಡ ಒಡಂಬಡಿಕೆ ಮಾಡಿ ಅವನಿಂದ ಪ್ರಮಾಣಮಾಡಿಸಿ ದೇಶದ ಬಲಿಷ್ಠರನ್ನು ತೆಗೆದುಕೊಂಡು ಹೋಗಿದ್ದಾನೆ.

ಯೆಹೆಜ್ಕೇಲ 17:18

ಅವನು ಪ್ರಮಾಣವನ್ನು ತಿರಸ್ಕರಿಸಿ ಕೈಕೊಟ್ಟಾಗ್ಯೂ; ಇಗೋ, ಒಡಂಬಡಿಕೆಯನ್ನು ವಿಾರಿ ಇವುಗಳನ್ನೆಲ್ಲಾ ಮಾಡಿದ್ದ ರಿಂದ ತಪ್ಪಿಸಿಕೊಳ್ಳುವದಿಲ್ಲ.

ಹೊಶೇಯ 10:4

ಅವರು ಮಾತುಗಳನ್ನಾಡಿ ಒಡಂಬಡಿಕೆಯನ್ನು ಮಾಡು ವದಕ್ಕೆ ಸುಳ್ಳು ಪ್ರಮಾಣ ವನ್ನು ಮಾಡುತ್ತಾರೆ. ಆದದ ರಿಂದ ನ್ಯಾಯತೀರ್ಪು ವಿಷದ ಕಳೆಯ ಹಾಗೆ ಹೊಲದ ಸಾಲುಗಳಲ್ಲಿ ಮೊಳೆಯುತ್ತದೆ.

ಜೆಕರ್ಯ 5:3

ಆಗ ಅವನು ನನಗೆ ಹೇಳಿದ್ದೇನಂದರೆ--ದೇಶದ ಮೇಲೆಲ್ಲಾ ಹೊರಡುವ ಶಾಪವು ಇದೇ; ಕಳ್ಳತನ ಮಾಡುವವರೆಲ್ಲರು ಈ ದಿಕ್ಕಿನ ಪ್ರಕಾರ ತೆಗೆದುಹಾಕಲ್ಪಡುವರು; ಆಣೆ ಇಡುವವರೆಲ್ಲರು ಆ ಕಡೆ ಅದರ ಪ್ರಕಾರ ತೆಗೆದುಹಾಕಲ್ಪಡುವರು.

ಮಲಾಕಿ 3:5

ನ್ಯಾಯಕ್ಕೋಸ್ಕರ ನಿಮ್ಮನ್ನು ನಾನು ಸವಿಾಪಿ ಸುತ್ತೇನೆ; ಆಗ ಕಣಿಹೇಳುವವರಿಗೂ ವ್ಯಭಿಚಾರಿ ಗಳಿಗೂ ಸುಳ್ಳು ಪ್ರಮಾಣಮಾಡುವವರಿಗೂ ಸಂಬಳ ದಲ್ಲಿ ಕೂಲಿಯವನಿಗೂ ವಿಧವೆಗೂ ದಿಕ್ಕಿಲ್ಲದವನಿಗೂ ಬಲಾತ್ಕಾರ ಮಾಡುವವರಿಗೂ ಅನ್ಯನ ನ್ಯಾಯವನ್ನು ತಿರಿಗಿಸಿ ಬಿಡುವವರಿಗೂ ನನಗೆ ಭಯಪಡದವರಿಗೂ ವಿರೋಧವಾಗಿ ಶೀಘ್ರವಾದ ಸಾಕ್ಷಿಗಾರನಾಗಿರು ವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.

ರೋಮಾಪುರದವರಿಗೆ 1:31

ತಿಳುವಳಿಕೆಯಿಲ್ಲ ದವರೂ ಪ್ರಮಾಣಕ್ಕೆ ತಪ್ಪುವವರೂ ಸ್ವಾಭಾವಿಕವಾದ ಮಮತೆಯಿಲ್ಲದವರೂ ಸಮಾಧಾನವಾಗದವರೂ ಕರುಣೆಯಿಲ್ಲದವರೂ ಆದರು.ಇಂಥವುಗಳನ್ನು ಮಾಡುವವರು ಮರಣಕ್ಕೆ ಯೋಗ್ಯರೆಂಬ ದೇವರ ನ್ಯಾಯತೀರ್ಪನ್ನು ಅವರು ತಿಳಿದವರಾಗಿದ್ದರೂ ಅವು ಗಳನ್ನು ಮಾಡುವದಲ್ಲದೆ ಅಂಥವುಗಳನ್ನು ಮಾಡುವವ ರಲ್ಲಿ ಸಂತೋಷಪಡುತ್ತಾರೆ.

1 ತಿಮೋಥೆಯ 1:10

ಜಾರರಿಗೂ ಪುರುಷಗಾಮಿ ಗಳಿಗೂ ನರಚೋರರಿಗೂ ಸುಳ್ಳುಗಾರರಿಗೂ ಅಬದ್ಧ ಪ್ರಮಾಣಿಕರಿಗೂ ಸ್ವಸ್ಥಬೋಧನೆಗೆ ಪ್ರತಿಕೂಲವಾಗಿ ಬೇರೆ ಏನಾದರೂ ಇದ್ದರೆ ಅದನ್ನು ಮಾಡುವವರಿಗೂ ನೇಮಕ ವಾಗಿದೆಯೆಂದು ನಮಗೆ ತಿಳಿದದೆ.

2 ತಿಮೋಥೆಯ 3:3

ಸ್ವಾಭಾವಿಕವಾದ ಮಮತೆಯಿಲ್ಲದವರೂ ಒಪ್ಪಂದವನ್ನು ಮುರಿಯುವವರೂ ಸುಳ್ಳಾಗಿ ದೂರು ವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೆಯವರನ್ನೂ ಹೀನೈಸುವವರೂ

Interlinear

Choose Theme