Home Bibles ಯೆಹೆಜ್ಕೇಲ 16:37 · ಕನ್ನಡ ಬೈಬಲ್
ಯೆಹೆಜ್ಕೇಲ 16:37 · ಕನ್ನಡ ಬೈಬಲ್

ಇಗೋ, ನೀನು ಆನಂದ ಪಟ್ಟವರೊಂದಿಗೆ ಪ್ರೀತಿ ಮಾಡಿದವರೆ ಲ್ಲರನ್ನೂ ಹಗೆಮಾಡಿದವರೆಲ್ಲರನ್ನೂ ಸಹ ಕೂಡಿಸು ವೆನು; ನಾನು ಅವರನ್ನು ನಿನಗೆ ವಿರುದ್ಧವಾಗಿ ಸುತ್ತಲೂ ಕೂಡಿಸಿ ಅವರಿಗೆ ನಿನ್ನ ಬೆತ್ತಲೆಯನ್ನು ಪ್ರಕಟಪಡಿಸು ವೆನು. ಆಗ ಅವರು ನಿನ್ನ ಬೆತ್ತಲೆಯನ್ನು ನೋಡುವರು.

Cross references

ಯೆರೆಮಿಯ 4:30

ನೀನು ಸೂರೆ ಯಾದಾಗ ಏನು ಮಾಡುವಿ? ನೀನು ಕಡು ಕೆಂಪುಬಣ್ಣದ ವಸ್ತ್ರವನ್ನು ತೊಟ್ಟುಕೊಂಡರೇನು? ಚಿನ್ನದ ಆಭರಣ ಗಳಿಂದ ನಿನ್ನನ್ನು ಅಲಂಕರಿಸಿದರೇನು? ಮುಖಕ್ಕೆ ಬಣ್ಣ ಹಚ್ಚಿಕೊಂಡರೇನು? ವ್ಯರ್ಥವಾಗಿ ನೀನು ನಿನ್ನನ್ನು ಸೌಂದರ್ಯಳಾಗಿ ಮಾಡಿಕೊಳ್ಳುವಿ; ನಿನ್ನ ಪ್ರಿಯರು ನಿನ್ನನ್ನು ಅಸಹ್ಯಿಸುವರು; ನಿನ್ನ ಪ್ರಾಣವನ್ನು ಹುಡುಕುವರು.

ಯೆರೆಮಿಯ 13:22

ಅನ್ಯರ ವ್ಯರ್ಥ ವಿಗ್ರಹಗಳಲ್ಲಿ ಮಳೆ ಕೊಡಬಲ್ಲವು ಗಳು ಉಂಟೋ? ಅಥವಾ ಆಕಾಶವು ಜಡಿ ಮಳೆ ಯನ್ನು ಕೊಡುವದಕ್ಕಾಗುವದೋ? ನಮ್ಮ ದೇವ ರಾಗಿರುವ ಕರ್ತನು ನೀನೇ ಅಲ್ಲವೋ? ಆದದರಿಂದ ನಿನ್ನನ್ನು ನಿರೀಕ್ಷಿಸುವೆವು; ನೀನೇ ಇವುಗಳನ್ನೆಲ್ಲಾ ಮಾಡುತ್ತೀ.

ಯೆರೆಮಿಯ 22:20

ಆತನು ತನ್ನ ಹೃದಯದ ಅಲೋ ಚನೆಗಳನ್ನು ನಡೆಸಿ ತೀರಿಸುವ ವರೆಗೂ ಕರ್ತನ ಕೋಪವು ತಿರುಗುವದಿಲ್ಲ; ಅಂತ್ಯದಿನಗಳಲ್ಲಿ ಅದನ್ನು ಸಂಪೂರ್ಣವಾಗಿ ಯೋಚನೆ ಮಾಡುವಿರಿ.

ವಿಲಾಪಗಳು 1:8

ಯೆರೂಸ ಲೇಮು ಘೋರವಾಗಿ ಪಾಪಮಾಡಿದೆ; ಆದದರಿಂದ ಅವಳು ತೆಗೆದುಹಾಕಲ್ಪಟ್ಟಿದ್ದಾಳೆ; ಅವಳನ್ನು ಸನ್ಮಾನಿಸಿ ದವರೆಲ್ಲರೂ ಅವಳನ್ನು ಹೀನೈಸುತ್ತಾರೆ; ಅವರು ಅವಳ ಬೆತ್ತಲೆತನವನ್ನು ನೋಡಿದ್ದಾರೆ; ಹೌದು, ಅವಳು ನಿಟ್ಟುಸಿರಿಟ್ಟು ಹಿಂದಕ್ಕೆ ತಿರುಗುತ್ತಾಳೆ.

ವಿಲಾಪಗಳು 1:19

ನಾನು ನನ್ನ ಪ್ರಿಯರನ್ನು ಕರೆದೆನು, ಆದರೆ ಅವರು ನನ್ನನ್ನು ಮೋಸಗೊಳಿಸಿದರು; ನನ್ನ ಯಾಜಕರೂ ಹಿರಿ ಯರೂ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವದಕ್ಕೆ ರೊಟ್ಟಿ ಯನ್ನು ಹುಡುಕುತ್ತಾ ನಗರದಲ್ಲಿ ಸತ್ತುಹೋದರು.

ಯೆಹೆಜ್ಕೇಲ 23:9

ಆದದರಿಂದ ನಾನು ಅವಳನ್ನು ಅವಳ ಪ್ರಿಯರಿಂದಲೂ ಒಪ್ಪಿಸುವ ಅವಳ ಅಶ್ಶೂರ್ಯರಿಂದಲೂ ಅವರೆಲ್ಲರಿಂದಲೂ ಮೋಹಿಸ ಲ್ಪಟ್ಟಳು;

ಯೆಹೆಜ್ಕೇಲ 23:22

ಆದದರಿಂದ ಒಹೊಲೀಬಳೇ, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಯಾರಿಂದ ನಿನ್ನ ಮನಸ್ಸು ಅಗಲಿಹೋಯಿತೋ ಆ ನಿನ್ನ ಪ್ರಿಯನನ್ನು ನಾನು ನಿನಗೆ ವಿರೋಧವಾಗಿ ಎಬ್ಬಿಸುತ್ತೇನೆ, ನಾನು ಅವರನ್ನು ಪ್ರತಿಯೊಂದು ಕಡೆಗೂ ವಿರೋಧವಾಗಿ ತರುತ್ತೇನೆ.

ಹೊಶೇಯ 2:3

ಇಲ್ಲದಿದ್ದರೆ ನಾನು ಅವಳನ್ನು ಬೆತ್ತಲೆಯಾಗಿ ಮಾಡಿ ಅವಳು ಹುಟ್ಟಿದ ದಿನದಲ್ಲಾದ ಹಾಗೆ ನಿಲ್ಲಿಸಿ ಅವಳನ್ನು ಅರಣ್ಯ ದಂತೆ ಮಾಡುವೆನು. ಅವಳನ್ನು ಒಣಗಿದ ಭೂಮಿ ಯಂತೆ ಇಟ್ಟು ದಾಹದಿಂದ ಅವಳನ್ನು ಕೊಲ್ಲುತ್ತೇನೆ.

ಹೊಶೇಯ 2:10

ಈಗ ಅವಳ ತುಚ್ಛತನವನ್ನು ಅವಳ ಮಿಂಡರ ಕಣ್ಣುಗಳ ಮುಂದೆ ಬಯಲು ಪಡಿಸುವೆನು; ನನ್ನ ಕೈಯೊಳಗಿಂದ ಅವಳನ್ನು ಯಾರೂ ಬಿಡಿಸರು.

ಹೊಶೇಯ 8:10

ಹೌದು, ಅವರು ಜನಾಂಗಗಳಲ್ಲಿ ಕೂಲಿ ಕೊಟ್ಟಿದ್ದರೂ ಅವರನ್ನು ನಾನು ಈಗ ಒಟ್ಟುಗೂಡಿ ಸುವೆನು; ಸ್ವಲ್ಪವಾದವರಲ್ಲಿ ಅವರು ಪ್ರಧಾನರು ಗಳ ಅರಸನ ಭಾರದಿಂದ ಕಷ್ಟಪಡುವರು.

ನಹೂಮ 3:5

ಸೈನ್ಯಗಳ ಕರ್ತನು ಹೇಳುವದೇ ನಂದರೆ--ಇಗೋ, ನಾನು ನಿನಗೆ ವಿರೋಧವಾಗಿ ದ್ದೇನೆ; ನಿನ್ನ ಸೆರಗುಗಳನ್ನು ನಿನ್ನ ಮುಖದ ಮೇಲೆ ಎತ್ತಿ ಜನಾಂಗಗಳಿಗೆ ನಿನ್ನ ನಾಚಿಕೆಯನ್ನೂ ರಾಜ್ಯಗಳಿಗೆ ನಿನ್ನ ನಿಂದೆಯ ಬೆತ್ತಲೆತನವನ್ನೂ ತೋರಿಸುತ್ತೇನೆ.

ಪ್ರಕಟನೆ 17:16

ಮೃಗದ ಮೇಲೆ ನೀನು ನೋಡಿದ ಹತ್ತು ಕೊಂಬು ಗಳು ಆ ಜಾರ ಸ್ತ್ರೀಯನ್ನು ದ್ವೇಷಿಸಿ ಅವಳನ್ನು ಗತಿಗೆಟ್ಟ ವಳನ್ನಾಗಿಯೂ ಬಟ್ಟೆಯಿಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡುವವು.

Interlinear

Choose Theme